ಲಂಡನ್ನಿನ ಸ್ಲೌನಲ್ಲಿ ಮಧ್ವನವಮಿ, ಶ್ರೀಕೃಷ್ಣ ಗಾನಾಮೃತ

ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ "ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ್ (GB SRS ಬೃಂದಾವನ್)" ಸಂಸ್ಥೆಯು ಮಧ್ವನವಮಿ ಮತ್ತು ಶ್ರೀ ಕೃಷ್ಣ ಗಾನಾಮೃತ/ಉಯ್ಯಾಲೋತ್ಸವವನ್ನು ಆಚರಿಸುತ್ತಿದೆ.

ಲಂಡನ್ ಮಹಾನಗರದ ಸಮೀಪದಲ್ಲಿರುವ ಸ್ಲೌ (Slough) ನಗರದ ಹಿಂದೂ ದೇವಾಲಯದಲ್ಲಿ ಫೆಬ್ರವರಿ 20ರಂದು ಶನಿವಾರ ಮಧ್ವನವಮಿಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆದಿವೆ. ದಿನಪೂರ್ತಿ ಹಲವಾರು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಯುಕೆಯಲ್ಲಿ ಇದು ಮಧ್ವನವಮಿಯ 6ನೇ ವಾರ್ಷಿಕೋತ್ಸವ.

ಈ ಸಮಾರಂಭ ಉಚಿತವಾಗಿದ್ದು, ಎಲ್ಲ ಭಕ್ತಾದಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ. ಸೇವೆಯ ವಿವರ, ಸ್ವಇಚ್ಛೆಯಿಂದ ದಾನ ಮಾಡುವವರಿಗಾಗಿ ವಿವರ ತಿಳಿಯಬಯಸುವವರು ಸಂಸ್ಥೆಯ ವೆಬ್ ಸೈಟ್ ನೋಡಬಹುದು. [ಲಂಡನ್ ನಲ್ಲಿ ರಾಘವೇಂದ್ರ ಸ್ವಾಮಿಯ 344ನೇ ಆರಾಧನೆ]

Madhvanavami and Sri Krishna Ganamrutha in Slough, London

ಕಾರ್ಯಕ್ರಮಗಳ ವಿವರ ಕೆಳಗಿನಂತಿದೆ

8ರಿಂದ 9 : ದೇವರ ಪೂಜೆ
9ರಿಂದ 11 : ಶ್ರೀ ಹರಿವಾಯು ಸ್ತುತಿ ಮತ್ತು ಪಂಚಾಮೃತ ಅಭಿಷೇಕ
11ರಿಂದ 12 : ಭಜನೆ
12ರಿಂದ 12.30 : ಮಹಾ ಮಂಗಳಾರತಿ
12.30ರಿಂದ 14.30 : ತೀರ್ಥ ಪ್ರಸಾದ (ಊಟ)
15ರಿಂದ 17 : ಶ್ರೀ ಕೃಷ್ಣ ಗಾನಾಮೃತ (ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ)
17ರಿಂದ 18 : ಉಯ್ಯಾಲೋತ್ಸವ (ಶ್ರೀ ಕೃಷ್ಣನಿಗೆ ಉಯ್ಯಾಲೆ ಸೇವೆ)

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರಾಘವೇಂದ್ರ ಸ್ವಾಮಿಗಳ 344ನೇ ಆರಾಧನೆಯನ್ನು (6ನೇ ವಾರ್ಷಿಕೋತ್ಸವ) ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ್ ನಲ್ಲಿ ಆಯೋಜಿಸಲಾಗಿತ್ತು. 500ಕ್ಕೂ ಹೆಚ್ಚು ಭಕ್ತಾದಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡು ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದರು.

ವಿಶ್ವದ ಭಕ್ತರು ವೆಬ್ ಸೈಟ್ www.gb-srsbrundavn.org ಮೂಲಕ ಮುಂದೆ ಬರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು ಹಾಗು ಇಮೇಲ್ [email protected] ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+