ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಿಸನ್, ನ್ಯೂಜೆರ್ಸಿಯಲ್ಲಿ ದೇಶಪಾಂಡೆಯೊಡನೆ ಸಂವಾದ

By Prasad
|
Google Oneindia Kannada News

ನ್ಯೂಜೆರ್ಸಿ, ಡಿಸೆಂಬರ್ 03 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಅಮೆರಿಕಕ್ಕೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರೊಂದಿಗೆ ಡಿಸೆಂಬರ್ 4, ಶುಕ್ರವಾರದಂದು 'ಅಕ್ಕ' ಸಂಸ್ಥೆ ಮುಕ್ತ ಸಂವಾದವನ್ನು ಏರ್ಪಡಿಸಿದೆ.

'ಕರ್ನಾಟಕದಲ್ಲಿ ಬಂಡವಾಳ ಹೂಡಿ' ಎಂಬ ಗುರಿಯೊಂದಿಗೆ ನವೆಂಬರ್ 30ರಿಂದ ಅಮೆರಿಕ ಪ್ರವಾಸದಲ್ಲಿರುವ ದೇಶಪಾಂಡೆ ಅವರು ಹಲವಾರು ನಗರಗಳಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು, ಬಂಡವಾಳ ಹೂಡಿಕೆಗೆ ಅಮೆರಿಕನ್ನಡಿಗರ ಜೊತೆ ಮಾತುಕತೆ ನಡೆಸಲಿದ್ದಾರೆ. ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಸಂಜೆ 6.30ಕ್ಕೆ ಸಂವಾದ ಆರಂಭವಾಗಲಿದೆ.

Interaction with RV Deshpande in Edison, New Jersey

ಕ್ಯಾಲಿಫೋರ್ನಿಯಾದಲ್ಲಿ ನವೆಂಬರ್ 30ರಂದು ರೋಡ್ ಶೋ ನಡೆದಿತ್ತು. ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್, ಶಿಕಾಗೋಗಳಲ್ಲಿಯೂ ರೋಡ್ ಶೋ ನಡೆಸಲಾಗುತ್ತಿದೆ. ಸ್ಥಳೀಯ ಕನ್ನಡ ಕೂಟಗಳೊಂದಿಗೆ ಸಹಯೋಗದೊಂದಿಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ದೇಶಪಾಂಡೆ ಅವರೊಂದಿಗೆ ಕೆಳಕಂಡ ಅಧಿಕಾರಿಗಳು ಕೂಡ ಭಾಗವಹಿಸುತ್ತಿದ್ದಾರೆ.

* ಕೌಶಿಕ್ ಮುಖರ್ಜಿ, ಐಎಎಸ್, ಮುಖ್ಯ ಕಾರ್ಯದರ್ಶಿ
* ಕೆ. ರತ್ನ ಪ್ರಭಾ, ಐಎಎಸ್, ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
* ಡಿ.ಎನ್. ನರಸಿಂಹ ರಾಜು, ಐಎಎಸ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
* ಗೌರವ್ ಗುಪ್ತಾ, ಐಎಎಸ್, ಉದ್ಯಮ ಆಯುಕ್ತ
* ಮಿರ್ಜಾ ಮಹದಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ
* ಎಚ್.ಎನ್. ರವೀಂದ್ರ, ವಾಣಿಜ್ಯ ಮತ್ತು ಉದ್ಯಮ ಇಲಾಖೆಯ ಇಂಡಸ್ಟ್ರಿಯಲ್ ಪ್ರಮೋಷನ್ ಅಧಿಕಾರಿ

English summary
Minister for Large and Medium Industries and Tourism R.V Deshpande will be interacting with Americannadigas in Edison, New Jersey on 4th December. Deshpande is in USA along with bureaucrats for Invest In Karnataka initiative. He will be conducting road show in many places in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X