ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವದ ರಸನಿಮಿಷಗಳು

Posted By: ನವೀನ್ ಕುಮಾರ್, ಡರ್ಬಿ (ಯುಕೆ)
Subscribe to Oneindia Kannada

ಉಸಿರು ಕನ್ನಡ, ಹೆಸರು ಕನ್ನಡ, ಮಾತು ಕನ್ನಡ, ಮನಸು ಕನ್ನಡ, ಪ್ರೀತಿ ಕನ್ನಡ, ನೆನಪು ಕನ್ನಡ, ಮನುಷ್ಯತ್ವದಲ್ಲಿಯೂ ಕನ್ನಡದ ಕಂಪು... ಎಲ್ಲೆಲ್ಲೂ ಕನ್ನಡದ ಪೆಂಪು!

ರಾಜ್ಯೋತ್ಸವ ವಿಶೇಷ: ಮಿನ್ನೆಸೋಟದ ಸಂಗೀತ ಕನ್ನಡ ಕೂಟ

ಕನ್ನಡ ಮಾತಾಡುತ್ತ, ಕನ್ನಡದಲ್ಲಿಯೇ ಶುಭಾಶಯ ಕೋರುತ್ತ, ಕನ್ನಡವನ್ನೇ ಉಸಿರಾಡಿಸುತ್ತ, ಕನ್ನಡವನ್ನೇ ಹೃದಯದಲ್ಲಿ ತುಂಬಿಕೊಂಡು ಡರ್ಬಿಯಲ್ಲಿ ನೆಲೆಸಿರುವ ಕನ್ನಡಿಗರು ಡಿಸೆಂಬರ್ 9ರಂದು 62ನೇ ಕನ್ನಡ ರಾಜ್ಯೋತ್ಸವವನ್ನು ಹರ್ಷದಿಂದ ಆಚರಿಸಿದರು.

Derby Kannadigaru celebrate Kannada Rajyotsava

ನಡೆಯೋ ಪ್ರತಿ ಹೆಜ್ಜೆಯೂ ದಾರಿದೀಪ, ನಡತೆ ಅದರ ಸ್ವರೂಪ ಎನ್ನುವುದರ ಮೂಲಕ ದೀಪದ ಬೆಳಕಿನಲ್ಲಿಯೇ ನಮ್ಮ ನಮ್ಮ ವ್ಯಕ್ತಿತ್ವಗಳ ನಿಜವಾದ ಅನಾವರಣ ಆಗಬೇಕು ಎನ್ನುವುದರೊಂದಿಗೆ ಕರ್ನಾಟಕದ ಹಲವು ವೈಶಿಷ್ಟ್ಯ, ವೈವಿಧ್ಯಗಳ ಮೆಲುಕು ಹಾಕಲಾಯಿತು.

ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ

ಚೆಂದದ ನಾಡು, ಶ್ರೀಗಂಧದ ಬೀಡು, ರಸಋಷಿಗಳ ಗೂಡು, ಈ ಕನ್ನಡ ನಾಡು ಎನ್ನುತ್ತ, ಡರ್ಬಿಯಲ್ಲಿ 4ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

Derby Kannadigaru celebrate Kannada Rajyotsava

ಆತ್ಮೀಯರ ಆಗಮನದಿಂದ ಕಾರ್ಯಕ್ರಮಕ್ಕೆ ಮೆರುಗು ಬಂದಿತ್ತು. ಮಕ್ಕಳ ಹಾಗು ದೊಡ್ಡವರ ನೃತ್ಯ, ಯಕ್ಷಗಾನ, ಪಿಟೀಲು ವಾದನದಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಳೆಗಟ್ಟಿತ್ತು. ನೋಡುಗರು ಮೈಮರೆತು ಕುಣಿದು ಕುಪ್ಪಳಿಸಿದರು. ಹಾಡುಗಳೊಂದಿಗೆ ತಾವೂ ಹಾಡಿದರು, ನೃತ್ಯದೊಂದಿಗೆ ತಾವೂ ನರ್ತಿಸಿದರು.

Derby Kannadigaru celebrate Kannada Rajyotsava

ಕನ್ನಡದ ಕಂಪು ಸಾಗರದಾಚೆ ಝೇಂಕರಿಸಿದ, ಮೊಳಗಿದ ಸಂತಸ ಎಲ್ಲರಲ್ಲಿಯೂ ಮನೆಮಾಡಿತ್ತು. ಮರೆಯದ ಅನುಭವಗಳನ್ನು, ಕನ್ನಡ ರಾಜ್ಯೋತ್ಸವದ ರಸನಿಮಿಷಗಳನ್ನು ಎಲ್ಲರೂ ತುಂಬಿಕೊಂಡು, ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Derby (United Kingdom) Kannadigaru celebrated Kannada Rajyotsava on 9th December. The program was inaugurated by lighting the lamp. Several cultural programs were organized.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ