ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾರಂ 7ನೇ ಸಾಹಿತ್ಯ ಸಮ್ಮೇಳನಕ್ಕೆ ಲೇಖನ ಆಹ್ವಾನ

By Prasad
|
Google Oneindia Kannada News

'ಕನ್ನಡ ಸಾಹಿತ್ಯ ರಂಗ' 2015ರ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಪ್ರತಿ ಸಮ್ಮೇಳನದಲ್ಲೂ ಯಾವುದಾದರೊಂದು ವಿಶೇಷ ವಿಷಯವನ್ನು ಕುರಿತಂತೆ ಕನ್ನಡ ಸಾಹಿತ್ಯ ರಂಗವು ಪುಸ್ತಕವನ್ನು ಹೊರತರುವುದು ತಮಗೆಲ್ಲಾ ತಿಳಿದ ಸಂಗತಿ. ಇದೇ ನಿಟ್ಟಿನಲ್ಲಿ ಮುಂದುವರಿಯುತ್ತಾ ಮುಂದಿನ ಸಮ್ಮೇಳನದ ಪುಸ್ತಕಕ್ಕಾಗಿ ಪತ್ರಮುಖೇನ ನಿಮ್ಮೆಲ್ಲರನ್ನೂ ಲೇಖನಗಳಿಗಾಗಿ ಆಹ್ವಾನಿಸುತ್ತಿದ್ದೇವೆ. ಇದರ ಯಶಸ್ಸಿಗೆ ಎಂದಿನಂತೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.

ಈ ಬಾರಿಯ ವಿಷಯ - 'ಅನುವಾದ ಸಾಹಿತ್ಯ'

ಅನುವಾದವೆಂದರೇನು? ಎಂದು ಪ್ರಶ್ನಿಸಿದರೆ, ಕೃತಿಯ ಧ್ವನಿಗೆ ಲೋಪ ಬಾರದಂತೆ ಭಾವಾನುವಾದ ಮಾಡುವುದು ಅಥವಾ ಶಬ್ದಶಃ ಭಾಷಾನುವಾದ ಮಾಡುವುದು. ಬಹುತೇಕ ಅನುವಾದಗಳು ಇವೆರಡರ ಮಧ್ಯೆ ನಿಲ್ಲುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಭಿನ್ನ ಸಂಸ್ಕೃತಿಗಳ ಭಾಷಾನುವಾದ ಬಹಳ ಕಷ್ಟಸಾಧ್ಯವಾಗಬಹುದು.

ಕನ್ನಡ ಭಾಷಾ ಸಾಹಿತ್ಯಕ್ಕೆ ಇತರ ಭಾಷೆಗಳಿಂದ ಸಮೃದ್ಧವಾಗಿ ಅನುವಾದಗಳ ಮೂಲಕ ಸಾಹಿತ್ಯ ಪ್ರವಹಿಸಿದಂತೆ ಕನ್ನಡ ಭಾಷೆಯ ಉತ್ತಮ ಕೃತಿಗಳೂ ಸಹ ವಿಶ್ವದ ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಕವಿತೆ, ಪದ್ಯ, ಕಾವ್ಯ ಹೀಗೆ ಸಾಹಿತ್ಯದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಅನುವಾದಗಳು ನಡೆದಿವೆ.

Article invite by Kannada Sahitya Ranga

ಈ ಹಿನ್ನೆಲೆಯಲ್ಲಿ ನಾವು ಮುಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕೃತಿಗಳನ್ನು ಇಂಗ್ಲಿಷಿಗೂ ಮತ್ತು ಬೇರೆ ಭಾಷೆಗಳಲ್ಲಿನ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೂ ಅನುವಾದಮಾಡಿ ಪ್ರಕಟಿಸುವ ಮೂಲಕ ಸಾಹಿತ್ಯದ ಈ ಕೊಡುಕೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಯೋಚಿಸಿದ್ದೇವೆ. ಈ ನಮ್ಮ ಉದ್ದೇಶ ಸಫಲವಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.

ನೀವು ಬೇರೆ ಭಾಷೆಗಳಲ್ಲಿ ಓದಿದ ಕೃತಿಯನ್ನು ಕನ್ನಡೀಕರಿಸಲು ಇದೊಂದು ಸದವಕಾಶ ಮತ್ತು ಕನ್ನಡದ ಉತ್ತಮ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಲೂಬಹುದು. ನೀವು ಕಳುಹಿಸಬಹುದಾದ ಅನುವಾದಿತ ಕೃತಿಯು ನಿಮ್ಮ ಸ್ವಂತದ್ದಾಗಿದ್ದು, ಈ ಮುನ್ನ ಬೇರೆಲ್ಲೂ ಪ್ರಕಟವಾಗಿರಕೂಡದು. ಕಥೆ, ಕವನ, ಚುಟುಕ, ಹಾಸ್ಯ, ಕಿರು ನಾಟಕ, ಪ್ರಬಂಧ ಇತ್ಯಾದಿಗಳಿಗೆ ಸ್ವಾಗತ.

ಅನುವಾದಕರಿಗೆ ಸೂಚನೆಗಳು

  • ಅಕ್ಷರದ ಗಾತ್ರ 14ರಲ್ಲಿದ್ದು, ಅನುವಾದಿತ ಬರಹವು ಸುಮಾರು 8-10 ಪುಟಗಳಿಷ್ಟಿರಲಿ. ಬರಹ ಅಥವಾ ಎಮ್.ಎಸ್. ವರ್ಡ್. ಕಡತವನ್ನು ಉಪಯೋಗಿಸಿ.
  • ನಿಮ್ಮ ಅನುವಾದಿತ ಕೃತಿಯನ್ನು ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2014.
  • ಕೃತಿಯ ಜೊತೆಗೆ ನಿಮ್ಮ ಮತ್ತು ಮೂಲ ಲೇಖಕರ ಪುಟ್ಟ ಪರಿಚಯ ಪತ್ರ ಮತ್ತು ಭಾವಚಿತ್ರವನ್ನು ಕಳುಹಿಸುವುದು.
  • ನಿಮ್ಮ ಕೃತಿಗಳನ್ನು ಕಳುಹಿಸಬೇಕಾದ ವಿಳಾಸ: [email protected]
  • ನಿಮ್ಮ ಕೃತಿಯ ಮೂಲ ಲೇಖಕರ ಹೆಸರು, ಭಾಷೆ, ಪ್ರಕಟವಾದ ದಿನಾಂಕ, ಪುಸ್ತಕ, ಇತ್ಯಾದಿಗಳ ವಿವರಗಳನ್ನು ನಮ್ಮ ಸಂಪಾದಕ ಮಂಡಳಿಯೊಡನೆ ಮೊದಲೇ ಹಂಚಿಕೊಳ್ಳಬೇಕಾಗಿ ವಿನಂತಿ.
  • ಹೆಚ್ಚಿನ ಮಾಹಿತಿಗಾಗಿ ಅಥವಾ ಕಾಪಿರೈಟ್ ವಿಚಾರಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸುವುದು.
  • ಕನ್ನಡದ ಕೃತಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವವರಿಗೊಂದು ಸೂಚನೆ - ದಯವಿಟ್ಟು 2000ರ ನಂತರ ಪ್ರಕಟಿತವಾದ ಕೃತಿಗಳನ್ನು ಆಯ್ದುಕೊಳ್ಳುವುದು ಅಥವಾ ಅಮೆರಿಕದ AKKA ಮತ್ತು KSRನಿಂದ ಮುದ್ರಿತವಾದ ಉತ್ತಮವಾದ ಲೇಖನಗಳನ್ನು ಅನುವಾದಿಸಲು ಆರಿಸಿಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸಬಹುದು.
  • ಅನುವಾದಿತ ಕೃತಿಯು ಮುದ್ರಣದ ವಿಷಯದಲ್ಲಿ ಸಂಪಾದಕರ ನಿರ್ಣಯವೇ ಅಂತಿಮವೆಂದು ಪರಿಗಣಿಸಲಾಗುವುದು.

ನಿಮ್ಮ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನಿರೀಕ್ಷಿಸುವ,
ಕ.ಸಾ.ರಂ. ಸಂಪಾದಕ ಮಂಡಳಿ
Sreekantha Babu - [email protected]
Meera P.R - [email protected]
Vaishali Hegde - [email protected]
Prakash H Nayak - [email protected]
Guruprasad Kaginele - [email protected]

English summary
Seventh literary conference of Kannada Sahitya Ranga will be held in 2015 in America. The organizers have invited the writers to send translated work from Kannada to English and English to Kannada for the souvenir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X