ಶ್ರೀ ಕಾಮಲಾನಂದರ ಮಹಾತ್ಮೆ ಕೇಳಿ ಪುನೀತರಾಗಿ!

Malli Sannappanavar
ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟದ 40ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.6 ಮತ್ತು 7ರಂದು ಅಮೆರಿಕನ್ನಡಿಗರಿಗೆ ರಸದೌತಣ ಕಾದಿದೆ. ಹಾಡುಹಸೆ, ನರ್ತನ, ಯಕ್ಷಗಾನ, ರಸಪ್ರಶ್ನೆ, ಸಂವಾದ, ಫ್ಯಾಷನ್ ಶೋ... ಹೀಗೆ ಹತ್ತುಹಲವಾರು ಕಾರ್ಯಕ್ರಮಗಳು ಕನ್ನಡ ಪ್ರೇಮಿಗಳಿಗೆ ಕಾದಿವೆ. ಜೊತೆಗೆ ಹಾಸ್ಯವೂ ದಂಡಿಯಷ್ಟಿದೆ.

ಸುಧಾ ಬರಗೂರು ಅವರಿಂದ ಹಾಸ್ಯ ರಂಜನೆಯಿದ್ದರೆ, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರೊಂದಿಗೆ ಸಂವಾದವಿದೆ. ಜೊತೆಗೆ ಶ್ರೀ ಕಾಮಲಾನಂದ ಮಹಾತ್ಮೆ ಎಂಬ ಹಾಸ್ಯಭರಿತ ಕನ್ನಡ ನಾಟಕವನ್ನು ಆಡಿಸಲಾಗುತ್ತಿದೆ. ನಾಟಕ ರಚಿಸಿದವರು ಮಲ್ಲಿ ಸಣ್ಣಪ್ಪನವರ್.

ಅಕ್ಟೋಬರ್ 6 ಮತ್ತು 7ಕ್ಕೆ ರಂಗುರಂಗಿನ ಕಾರ್ಯಕ್ರಮ ಹಮ್ಮಿಕೊಂಡು 40ನೇ ವಾರ್ಷಿಕೋತ್ಸವ "ರತ್ನ ಮಹೋತ್ಸವ" ಆಚರಿಸಲು ಸಿದ್ದವಾಗಿರುವ ಮಂದಾರ ಕನ್ನಡ ಕೂಟದಲ್ಲಿ ತಮ್ಮ ಬೃಹತ್ ಬ್ರಹ್ಮಾಂಡ ಜ್ಞಾನದ ದರುಶನ ತೋರಿಸಲು ಮಂದಹಾಸರಾಗಿ ಶ್ರೀ ಶ್ರೀ ಕಾಮ-ಲಾನಂದರು ದಯಮಾಡಿಸಲಿದ್ದಾರೆ....

ಕೊಟ್ಟ ಫ್ಲವರ್ ಬಾಡಿ ಹೋಗುವದರಲ್ಲೇ ಕೈಕೊಟ್ಟು ಓಡಿ ಹೋಗುವ ಲವರ್ ಗಳೇ, ಕಲಿಸಿಕೊಟ್ಟ ಗುರುಗಳಿಗೇ ತಿರುಮಂತ್ರ ಹಾಕುವ ಶಿಷ್ಯಂದಿರೇ, ಬನ್ನಿ ಬನ್ನಿ ... ಬಂದು... ಶ್ರೀ ಶ್ರೀ ಕಾಮ-ಲಾನಂದರ ಮಹಾತ್ಮೆಯನ್ನು ನೋಡಿ, ಕಮಲೋಕ್ತಿಯನ್ನು ಕೇಳಿ ಪುನೀತರಾಗಿ!

ನಾಟಕ : ಶ್ರೀ ಕಾಮಲಾನಂದರ ಮಹಾತ್ಮೆ

ರಚನೆ : ಮಲ್ಲಿ ಸಣ್ಣಪ್ಪನವರ್

ನಾಟಕದ ದಿನಾಂಕ ಮತ್ತು ಸಮಯ : 7ನೇ ಅಕ್ಟೋಬರ್, 2012, ಮಧ್ಯಾಹ್ನ 2.30ಕ್ಕೆ

ಸ್ಥಳ : Charles Whitcomb School, 25 Union St, Marlboro MA

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+