• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಸಂತನ ಸ್ವಾಗತ ಕೋರಿದ ಕನೆಕ್ಟಿಕಟ್ ಕನ್ನಡಿಗರು

By * ನಾಗರಾಜ್ ಎಂ., ಕನೆಕ್ಟಿಕಟ್
|
ಕೊನೆಗೂ ಕಾಡಿಸಿ ಓಡಿಹೋದ ಚಳಿರಾಯ, ಹಿಂದಿನ ದಿನ ಸಣ್ಣಗೆ ಸುರಿದು ಹೋಗಿದ್ದ ಮಳೆರಾಯ, ನಾ ಬಂದಿರುವೆ ಎಂದು ಎಲ್ಲೆಡೆ ಸಾರುತ್ತಿದ್ದ ವಸಂತರಾಯ... ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಬಣ್ಣ ಬಣ್ಣದ ಹೂವುಗಳು ಅರಳುವುದನ್ನೇ ಕಾಯುತ್ತಿರುವ ಧುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ ಇಂಚರ... ಇವೆಲ್ಲದರ ಮಧ್ಯೆ ಬಣ್ಣ ಬಣ್ಣದ ವೇಷ ಭೂಷಣಗಳಲ್ಲಿ ಬಂದ ಪುಟಾಣಿಗಳಿಂದ ಕನ್ನಡದ ಗೀತೆಗಳಿಗೆ ಸೊಗಸಾದ ನೃತ್ಯ... ಹೀಗೆ ವಸಂತನ (ಯುಗಾದಿ) ಸ್ವಾಗತ ಮಾಡಿದ್ದು ಕನೆಕ್ಟಿಕಟ್ನಲ್ಲಿರುವ ನಮ್ಮ ಕನ್ನಡಿಗರು!

ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ, ಸಂಭ್ರಮದಿಂದ ಏಪ್ರಿಲ್ 28, ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್‌ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-2012 ಕಾರ್ಯಕ್ರಮದಲ್ಲಿ ಸಡಗರ, ಸಂಭ್ರಮದಿಂದ ಭಾಗವಹಿಸಿದರು.

ಗಾಯತ್ರಿ ಭಟ್ ಮತ್ತು ಭಾಗ್ಯ ಕೊಮರ್ಲಾ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಈ ಯುಗಾದಿ ಕಾರ್ಯಕ್ರಮ ಸರಿಯಾಗಿ ಮಧ್ಯಾನ್ಹ 3.30ಕ್ಕೆ ಪ್ರಾರಂಭವಾಯಿತು. ಕನ್ನಡ ಕೂಟದ ಅಧ್ಯಕ್ಷ ವೇಣು ಗುಡ್ದೆರ ಎಲ್ಲರನ್ನು ಸ್ವಾಗತಿಸಿದರು. ಯಶವಂತ್ ಗಡ್ಡಿಯವರು ಹಾಡಿದ ಕನ್ನಡ ನಾಡಗೀತೆ "ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ಹಾಡತೊಡಗಿದರು.

ಪ್ರಿಯ ಹರ್ಯಾಡಿ ನಿರೂಪಣೆಯಲ್ಲಿ ನಡೆದ "ಹಲೋ ನಮಸ್ತೆ - ಮಕ್ಕಳ ಫ್ಯಾಷನ್ ಶೋ"ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ನಾವೇನು ದೊಡ್ದವರಿಗಿಂತ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ವಿಧ ವಿಧದ ಬಟ್ಟೆಗಳನ್ನು ಧರಿಸಿ ಸೊಗಸಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಶಾರದಾ ಭಟ್ ನಿರೂಪಣೆಯಲ್ಲಿ ಚಿಕ್ಕ ಪುಟಾಣಿಗಳು ಫ್ಯಾನ್ಸಿ ಡ್ರೆಸ್ ಹಾಕಿ ಬಂದಿದ್ದು ಎಲ್ಲರ ಮನ ಸೆಳೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು

* ಜಾಣ ಪುಟಾಣಿಗಳು - ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ - ಗುರುಶಿಷ್ಯರು ಚಲನಚಿತ್ರದ ಹಾಡಿಗೆ ಮಕ್ಕಳ ನೃತ್ಯ - ನಿರೂಪಣೆ ಸರಿತಾ ಸದಾನಂದ್ ಮತ್ತು ಸೌಮ್ಯ ಸುಂದರೇಶ್.
* ನಿಂಬೀಯ ಬನದ ಮ್ಯಾಗಲ - ಕೋಲಾಟ ನೃತ್ಯ - ನಿರೂಪಣೆ ಸ್ನೇಹ ಸೋಸಲೆ.
* ಶಾಂತಿ ಮಂತ್ರಂ - ಯೋಗ ನೃತ್ಯ - ನಿರೂಪಣೆ ರಶ್ಮಿ ರಾಮಲಿಂಗಯ್ಯ.
* ಪ್ರಚಂಡ ಪುಟಾಣಿಗಳಿಂದ ಕರಾಟೆ ನೃತ್ಯ - ನಿರೂಪಣೆ ಸ್ವರ್ಣ ಮೋದಿ ಮತ್ತು ವಿಶಾಖ್ ತಲಂಕಿ.
* ಹೊಸ ವರುಷಕ್ಕೆ ಹೊಸ ಹರುಷ - ಫಿಲಂ ಡಾನ್ಸ್ - ನಿರೂಪಣೆ ಪ್ರಿಯ ಹರ್ಯಾಡಿ ಮತ್ತು ರೂಪ ಕುಮಾರ್.

ಲಘು ವಿರಾಮದಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಮೇಲೆ...

* ಮೇಲ್ಕೋಟೆ ರಾಮಸ್ವಾಮಿ ಅವರಿಂದ ಸೊಗಸಾದ ಭಕ್ತಿಗೀತೆಗಳು.

* ವಿಚಿತ್ರ ಮಂಜರಿ - 3 - ದಿನೇಶ್ ಹರ್ಯಾಡಿ ಮತ್ತು ತಂಡದವರಿಂದ.

* ಮಕ್ಕಳಿಂದ "ಆಲಸಿ ತೆನಾಲಿ ರಾಮನಲ್ಲಿ ಆದ ಪರಿವರ್ತನೆ" ಒಂದು ಚಿಕ್ಕ ನಾಟಕ - ನಿರೂಪಣೆ ಅಂಜು ಸೋಮನಾಥ್.

* ಲೈಫು ಇಷ್ಟೇನೆ - ಹೇಗೆ ಪ್ರಕೃತಿಯಲ್ಲಿ ಪ್ರತಿವರ್ಷವೂ ಲೈಫ್ ಸೈಕಲ್ ಬರುವುದೋ.. ಅದೇ ರೀತಿ ನಮ್ಮ ಮನುಜರ ಬಾಳಲ್ಲೂ... ಎಂಬ ಸುಂದರ ಸಾರಾಂಶವನ್ನು ಸಾರುವ "ಲೈಫು ಇಷ್ಟೇನೆ" ನೃತ್ಯ ಭರಿತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಎಲ್ಲರ ಮನ ಗೆದ್ದಿದ್ದು ಸುಂದರೇಶ್, ಸದಾನಂದ್, ರಘು, ಸಂತೋಷ್, ಶಶಿ ಹಾಗು ಅವರ ತಂಡದಿಂದ.

* ಹೃದಯಾಸೆ ಭಾಷೆ ಕನ್ನಡ - ಸಿನೆಮಾ ಸಾಹಿತ್ಯದಿಂದ ಶಿಲಾ ಶಾಸನದವರೆಗೆ... ಪ್ರೇಕ್ಷಕರೊಂದಿಗೆ ಪ್ರಶ್ನೋತ್ತರಗಳ ಸಂವಾದ. ನಿರೂಪಣೆ ಇಂದು ದೊಡ್ಡಮನೆ ಮತ್ತು ಯಶವಂತ್ ಗಡ್ಡಿಯವರಿಂದ.

ಮಲ್ಲಿ ನಾಟಕ : ನಾವು ಬಳ್ಳಾರಿ ಬಿಗ್ ಪೀಪಲ್, ನಾವು ಗಂಡೆದೆ ನಾಡು ಹುಬ್ಬಳ್ಳಿ ಮಂದಿ, ನಾವು ಬಿಜಾಪುರ ಮಂದಿ, ನಾವು ಬೆಂಗಳೂರು ಜನ, ನಾವು ಮಂಡ್ಯದ ಗಂಡುಗಳು... ಪ್ರಾತಿನಿಧ್ಯ ನಮಗೆ ಹೆಚ್ಚಿಗೆ ಕೊಡಬೇಕು ಅಂತ ನಡೆಯೋ ಒಳಜಗಳಗಳಲ್ಲಿ ಬಡವಾಗುತ್ತಿದೆ ಇಂದು ನಮ್ಮ ಕಸ್ತೂರಿ ಕನ್ನಡ. ಈ ಎಲ್ಲ ಒಳಜಗಳ, ಪ್ರತಿಷ್ಠೆ, ಬಿಗುಮಾನ ಬಿಟ್ಟು ಎಲ್ಲ ಕನ್ನಡಿಗರು ಒಗ್ಗೂಡಿ ಕನ್ನಡಕ್ಕಾಗಿ ದುಡಿದರೆ... ಆಗ "ಆಗುವುದು ನಮ್ಮ ಕನ್ನಡ ನಾಡು ಸಿರಿಗಂಧದ ಬೀಡು" ಎಂಬ ಸುಂದರ ಸಾರಾಂಶವುಳ್ಳ ಮಲ್ಲಿ ಸಣ್ಣಪ್ಪನವರ್ ನಿರ್ದೇಶನದಲ್ಲಿ "ಅಮೆರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಭರ್ಜರಿಯಾಗಿ ಪ್ರದರ್ಶನಗೊಂಡಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಅಮೆರಿಕ ಸುದ್ದಿಗಳುView All

English summary
Hoysala Kannada Koota celebrated Ugadi 2012 in a grand fashion. Loads of Kannada activities were organized to mark the function. Children stole the show with various talent shows. Malli Sannappanavar's Americadalli 3D Kannada Koota play was enacted. Report by Nagaraja Maheswarappa, Connecticut, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more