ಕೊರಿಯ ಕನ್ನಡ ಕೂಟದ ಕನ್ನಡ ಕರೆಯೋಲೆ

Posted By:
Subscribe to Oneindia Kannada
Korea Kannada Koota members
ಸೋಲ್, ನ. 3 : ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ದ್ಯೇಯವಾಕ್ಯ ಇಟ್ಟುಕೊಂಡ ಕೊರಿಯಾ ಕನ್ನಡ ಕೂಟದ ಗೆಳೆಯರು ಈ ಬಾರಿಯ ಕನ್ನಡ ರಾಜ್ಯೋತ್ವವನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

"ಪ್ರತಿ ಘಳಿಗೆಯ ಹಬ್ಬ ಈ ನಿತ್ಯೋತ್ಸವ ಪ್ರತಿಯೊಬ್ಬರೂ ಸಂಭ್ರಮಿಸುವ ಹಬ್ಬ ಈ ದಿವ್ಯೋತ್ಸವ ಪ್ರತಿಯೊಬ್ಬರಲ್ಲೂ ಪ್ರೀತಿ ಉಕ್ಕಿಸುವ ಹಬ್ಬ ಈ ಕನ್ನಡ ರಾಜ್ಯೋತ್ಸವ." ಎಂಬ ಸಂದೇಶವನ್ನು ಕೊರಿಯ ಕನ್ನಡ ಕೂಟ(KKK) ಕೊರಿಯಾದಲ್ಲಿರುವ ಎಲ್ಲ ಅನಿವಾಸಿ ಕನ್ನಡಿಗರಿಗೆ ರವಾನಿಸಿದೆ.

"ಕನ್ನಡ ಕೂಟದ ಪರವಾಗಿ ಇದೇ ನವೆಂಬರ್ 6ರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ಕನ್ನಡಿಗರು ಅಂದು ತಮ್ಮ ಬೇರೆ ಕೆಲಸಗಳನ್ನು ಬದಿಗೊತ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿ" ಎಂದು ಕೂಟದ ಪದಾಧಿಕಾರಿಗಳು ಗುರುವಾರ ಒನ್ ಇಂಡಿಯ ವರದಿಗಾರರಿಗೆ ತಿಳಿಸಿದರು.

ಸ್ಥಳ : ಇಂಡಿಯನ್ ಕಲ್ಚರ್ ಸೆಂಟರ್, ಇಂಡಿಯನ್ ಎಂಬೆಸಿ, ಸಿಯೋಲ್. ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ. ಕನ್ನಡ ಹಾಡು, ವಿಡಿಯೊ ಪ್ರದರ್ಶನ, ಕನ್ನಡ ಕ್ವಿಜ್ ಮತ್ತು ಆಟೋಗಳ ಜತೆಗೆ ಕರ್ನಾಟಕ ಶೈಲಿಯ ಊಟ ಇರುತ್ತದೆ.

ಭಾಗವಹಿಸಲಿಚ್ಛಿಸುವವರು 20,000 WON (ಸುಮಾರು 800 ರೂಪಾಯಿ) ವಂತಿಗೆ ನೀಡಬೇಕು. ಹಣವನ್ನು ಸ್ಥಳೀಯ Woori Bank A/C No : 1002-943-113368 (Account Holder's name - Keshava Prasad ಖಾತೆಗೆ ತುಂಬಬೇಕು. ತುಂಬಿದ ನಂತರ ದಿವ್ಯ ಸುದರ್ಶನ್ ಅವರಿಗೆ ಇಮೇಲ್ ಹಾಕಬೇಕು sudarshan.divya@gmail.com

ಹೆಚ್ಚಿನ ಮಾಹಿತಿಗೆ ಬ್ರಿಜೇಶ್ ಅಜ್ಜಪ್ಪಾಲ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 010-8280-9849 e-mail: brijeshajjappala@gmail.com ಬರೆದುಕೊಳ್ಳಬಹುದು ಎಂದು ಕೊರಿಯ ಕನ್ನಡ ಕೂಟದ ಎನ್ ಆರ್ ಶ್ರೀಹರ್ಷ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Calling all Karnataka diaspora in Seoul, Korea: Korea Kannada Koota celebrating Kannada Rajyotsava on Sunday 6 November 2011 at Indian Cultural Center, Indian Embassy, Seoul.
Please Wait while comments are loading...