ನ್ಯೂಜಿಲೆಂಡ್ ನಲ್ಲಿ ಮೆರೆದಾಡಿದ ದಸರಾ ಬೊಂಬೆಗಳು
ದಸರಾ
ಹಬ್ಬ ಬಂದರೆ ಜಂಬೂ ಸವಾರಿ, ಮನೆ ಮನೆಗಳಲ್ಲಿ ಬೊಂಬೆ ಪ್ರದರ್ಶನ ಎಲ್ಲಿದ್ದರೂ ಸವಿ ನೆನಪು ತರುತ್ತವೆ. ನಮ್ಮ ಆಕ್ಲೆಂಡ್ ನಗರದಲ್ಲಿ ಮೃಗಾಲಯದಲ್ಲಿ ಒಂದೇ ಒಂದು ಆನೆ ಇರುವುದರಿಂದ ಜಂಬೂ ಸವಾರಿ ಕನಸಿನ ಮಾತು. ಅದರೆ, ಬೊಂಬೆ ಪ್ರದರ್ಶನ ಯಾಕೆ ಸಾಧ್ಯವಿಲ್ಲ? ಮನಸ್ಸಿದ್ದಲ್ಲಿ ಮಾದೇವ ಎಂದು ದಸರಾ ದಿನಗಳಲ್ಲಿ ಅನೇಕ ಗೃಹಗಳಲ್ಲಿ ಬೊಂಬೆ ಇಟ್ಟು ಪರಿಚಯಸ್ತರನ್ನು ಆಹ್ವಾನಿಸುತ್ತಾರೆ. ಆದರೆ ಕನ್ನಡ ಕೂಟದ ಮಾಜಿ ಕಾರ್ಯದರ್ಶಿ ಸುಜಾತಾ ದತ್ತಾತ್ರೇಯ ಅವರು ಈ ಬಾರಿ ಇಟ್ಟಿದ್ದು ಬೊಂಬೆ ಪ್ರದರ್ಶನವಲ್ಲ ನೂರಾರು ಬೊಂಬೆಗಳ ಒಂದು ಪುಟ್ಟ ವಿಶ್ವದರ್ಶನ ಎನ್ನಬಹುದು. id="toptextpromo">ಸಾಲಂಕೃತ
"ಪಟ್ಟದ ಬೊಂಬೆ" ದಶಾವತಾರದ ಬೊಂಬೆಗಳು, ಪಶು ಪಕ್ಷಿಗಳ ಬೊಂಬೆಗಳು, ಬಣ್ಣ ಬಣ್ಣದ ಬೊಂಬೆಗಳು, ಮರದ , ಗಾಜಿನ, ಮಣ್ಣಿನ, ಜೇಡ್ ನಿಂದ ಮಾಡಿದ ಕೀವೀ ನಾಡಿನ ಕಿರು ಬೊಂಬೆಗಳು ಇವೆಲ್ಲಾ ಸಾಂಪ್ರದಾಯಿಕವಾದರೆ, ಸಿನಿಮಾ ಲೋಕದ ಆಕರ್ಷಣೆ " ಟಿನ್ಸೆಲ್ ವರ್ಲ್ಡ್" ವಿಶ್ವ ಮಾನವತೆಯ ಸಂಕೇತವಾಗಿ "ವೀ ಆರ್ ಒನ್ " - ಇದರಲ್ಲಿ ಪ್ಯಾರಿಸ್ಸಿನ ಐಫೆಲ್ ಟವರ್, ಸಿಡ್ನಿ ನಗರದ ಹಾರ್ಬರ್ ಬ್ರಿಡ್ಜ್, ಆಪೇರಾ ಹೌಸ್, ಆಕ್ಲೆಂಡಿನ ಸ್ಕೈ ಟವರ್, ಯೂರೊಪಿನ ಅನೇಕ ಪ್ರಸಿದ್ಧ ಸ್ಥಳಗಳು, ತಾಜ್ ಮಹಲ್, ಇವೆಲ್ಲವನ್ನೂ ಒಂದು ಸಣ್ನ ಬೊಂಬೆ ಪ್ರದರ್ಶನದಲ್ಲಿ ನೋಡಿದಾಗ ಶ್ರೀ ಕೃಷ್ಣ ತನ್ನ ಬಾಯಲ್ಲಿ ವಿಶ್ವ ರೂಪ ತೋರಿದ್ದು ನೆನಪಾಯಿತು. id='are-slot-1' class='oiad oi-axt oiadv'> id='top-searched-articles'>ಆಕ್ಲೆಂಡ್
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ "ಬಟರ್ ಫ್ಲೈ ಕ್ರೀಕ್ "ಪ್ರವಾಸಿಗಳಿಗೆ ಒಂದು ಸುಂದರ ಆಕರ್ಷಣೆ.. ಇದರಲ್ಲಿರುವ ಬಣ್ಣ ಬಣ್ಣದ ಚಿಟ್ಟೆಗಳು, ಪುಟ್ಟ ತೊರೆ, ಹಸುಗಳ ನೈಸರ್ಗಿಕ ಫಾರ್ಮ್, ಎರಡು ಬೃಹತ್ ಮೊಸಳೆಗಳು, ಕಣ್ತಣಿಸುವ ಹೂಗಿಡಗಳು, ಈ ಎಲ್ಲವನ್ನೂ ಸುಜಾತ ಬೊಂಬೆಗಳ ರೂಪದಲ್ಲಿ ಎಲ್ಲಿಂದ ತಂದರೋ ತಿಳಿಯದು. ಆದರೆ ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆ ಇದಾಗಿತ್ತು. ನವರಾತ್ರಿಯ ಹತ್ತು ದಿನಗಳಲ್ಲಿ ನೂರಾರು ಜನರನ್ನು ತನ್ಮಯಗೊಳಿಸಿದ ಈ ಬೊಂಬೆ ಪ್ರದರ್ಶನ ನಮ್ಮ ಕನ್ನಡನಾಡಿನ ಸಂಸ್ಕೃತಿಯ ಪರಿಚಯ ಈ ನಾಡಿನ ಜನೆತೆಗೆ ಮಾಡಿಸುವಲ್ಲಿ ಸಫಲವಾಯಿತು. ಇದಕ್ಕಾಗಿ ಸುಜಾತ ಮತ್ತು ದತ್ತಾತ್ರೇಯ ದಂಪತಿಗಳನ್ನು ಅಭಿನಂದಿಸಬೇಕು.











Click it and Unblock the Notifications