ಐರಿಶ್ ಕನ್ನಡಿಗರ ಹಬ್ಬ 2010

Posted By:
Subscribe to Oneindia Kannada
Irish Kannadigaru Kannada Festival 2010
ಕಳೆದ ನಾಲಕ್ಕು ವರ್ಷಗಳಿಂದ ಐರ್ ಲ್ಯಾಂಡಿನಲ್ಲಿ ಕನ್ನಡದ ಹೂವು ಬಾಡದಂತೆ ಕಾಪಾಡಿರುವ ನಮ್ಮ ಕನ್ನಡ ಸ್ನೇಹಿತರು ಇದೀಗ ಐದನೇ ವರ್ಷದ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಿದ್ಧರಾಗಿದ್ದಾರೆ. ಇದೇ ಭಾನುವಾರ ಡಬ್ಲಿನ್ ನಲ್ಲಿ ನಡೆಯಲಿರುವ ಕನ್ನಡ ಹಬ್ಬ 2010ಕ್ಕೆ ನಿಮಗೆ ವಿಶೇಷ ಆಮಂತ್ರಣ ಕೊಟ್ಟಿದ್ದಾರೆ. ಐರ್ ಲ್ಯಾಂಡ್ ಮತ್ತು ಸುತ್ತ ಮುತ್ತಲಿನ ನಗರಗಳಲ್ಲಿ ನೆಲೆಸಿರುವ ಕನ್ನಡ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಕೂಡಲೇ ತಮ್ಮ ತಮ್ಮ ಬ್ಯಾಕ್ ಪ್ಯಾಕ್ ರೆಡಿ ಮಾಡಿಕೊಂಡು ಡಬ್ಲಿನ್ನಿಗೆ ಕಾರು ಓಡಿಸಿಕೊಂಡು ಅಥವಾ ಹಾರಿ ಬರಬೇಕೆಂದು ಇಲ್ಲಿನ ಕನ್ನಡ ಬಳಗದ ಸ್ವಯಂಸೇವಕರು ದಟ್ಸ್ ಕನ್ನಡ ಅಂತರ್ಜಾಲ ತಾಣದ ಮೂಲಕ ಕರೆ ಕೊಡುತ್ತಿದ್ದಾರೆ. ಡಬ್ಲಿನ್ನಿನ ತನಕ ಈಜಿಕೊಂಡು ಬಂದರೂ ಸರಿಯೇ :-)

ಐರಿಶ್ ಕನ್ನಡಿಗರು ವರ್ಷಕ್ಕೊಮ್ಮೆ ಏರ್ಪಡಿಸುವ ಕಾರ್ಯಕ್ರಮದ ಹೆಸರು 'ಕನ್ನಡ ಹಬ್ಬ'. ರಾಜ್ಯೋತ್ಸವವೆನ್ನಿ, ದೀಪಾವಳಿ ಅನ್ನಿ, ನೀವು ಏನೇ ಅನ್ನಿ ಅದು ಕನ್ನಡದ ಹಬ್ಬವೇ. ಈ ಬಾರಿಯ ಕನ್ನಡ ಹಬ್ಬದ ತಾಣ ಮತ್ತು ಕಾರ್ಯಕ್ರಮದ ವಿವರಗಳನ್ನು ಈಗ ಗುರುತುಹಾಕಿಕೊಳ್ಳಿ.

ಭಾನುವಾರ : 21 ನವೆಂಬರ್ 2010
ಮಧ್ಯಾನ್ಹ : 12ರಿಂದ 6 ಗಂಟೆ
ವಿಳಾಸ : Portmarnock Sports & Leisure Club, Blackwood Lane, Portmarnock, Dublin.

ಕನ್ನಡ ಹಬ್ಬದ ಈ ಸುದ್ದಿಯನ್ನು ನಿಮ್ಮ ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ನೆರೆಹೊರೆಯವರಿಗೆ ಕೂಡಲೇ ತಿಳಿಸಿ. ಸೋಮಾರಿತನವನ್ನು ಸ್ವಲ್ಪ ಬಿಡಿ! ಸುದ್ದಿ ಗೊತ್ತಾಗದಿದ್ದರೆ ಅವರೆಲ್ಲ ಬಂದು ನಿಮ್ಮ ಜತೆ ಒಂದು ದಿನದ ಕನ್ನಡ ಹಬ್ಬದ ಮಜಾ ಅನುಭವಿಸುವುವಾದರೂ ಹೇಗೆ? ಸರಿ, ಕಾರ್ಯಕ್ರಮದ ಪಟ್ಟಿ ನೋಡೋಣ.

* ಭರತನಾಟ್ಯ
* ಡಬ್ಲಿನ್ ಗುರು ಅವರ ರಾಂಕಿಂಗ್
* ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ
* ಹೆಂಗಳೆಯರ ಅಂಗೈಗಳಲ್ಲಿ ಮೆಹಂದಿ ಚಿತ್ರ ಮೂಡಿಸುವ ಸಂಭ್ರಮ
* ಇಂದೂಸ್ ಪಾಟ್ ಪೂರಿಯಿಂದ ರುಚಿರುಚಿಯಾದ ಚಾಟ್ ಮತ್ತಿತರ ಭಾರತೀಯ ತಿಂಡಿ ತಿನಿಸುಗಳು

ಹೆಚ್ಚಿನ ವಿವರಗಳಿಗೆ ಅಂತರ್ಜಾಲ ತಾಣ ನೋಡ್ಬೇಕು. ಟಿಕೆಟ್ 7 ಯೂರೋ ಇಟ್ಟಿದ್ದಾರೆ. ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ಫ್ರೀ. ಟಿಕೆಟ್ಟುಗಳಿಗೆ ಈ ಕೆಳಗೆ ಹೇಳಿರುವ ದಟ್ಸ್ ಕನ್ನಡದ ಐರ್ ಲ್ಯಾಂಡ್ ಮಿತ್ರ ವೃಂದ ಯಾರನ್ನಾದರೂ ದೂರವಾಣಿ ಮೂಲಕ ಸಂಪರ್ಕಿಸಿ. ಅವರ ಸಂಖ್ಯೆಗಳನ್ನು ಬರೆದುಕೊಳ್ಳಿರಿ. ಈ ಪುಟವನ್ನು ಮುದ್ರಿಸಿಕೊಳ್ಳಿ ಅಥವಾ ಪುಟ ಉಳಿಸಿ ಸೌಲಭ್ಯವನ್ನು ಬಳಸಿಕೊಳ್ಳಿರಿ.

* ದುರ್ಗೇಶ್ - 0860711725 (Maynooth/Cellbridge)
* ಮಾಧವ್ - 0876343721 (Clontarf/Raheny)
* ಪ್ರಭು - 0868590617 (Clondalkin)
* ಸುನಿಲ್ - 0857117786 (Tallaght/Adamstown)
* ಸುರೇಶ್ - 0868549011 (Bray/Dunlaighoire)

E-mail: irishkannadigaru@gmail.com. Download directions.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...