ಐರ್ಲಂಡಿನಲ್ಲಿ ಆ.28ರಂದು ಮನಸಾರೆ ಪ್ರದರ್ಶನ

Posted By:
Subscribe to Oneindia Kannada

ಕಳೆದ ವರ್ಷದ ಸೂಪರ್ ಹಿಟ್ ಕನ್ನಡ ಚಿತ್ರ ಯೋಗರಾಜ್ ಭಟ್ ಅವರ 'ಮನಸಾರೆ' ಚಿತ್ರವನ್ನು ಮನಸಾರೆ ಸವಿಯಲು ಐರ್ಲಂಡ್ ಕನ್ನಡಿಗರು ಕಾತುರದಿಂದ ಕಾದಿದ್ದಾರೆ. ಭಟ್ಟರ ಮತ್ತೊಂದು ಸೂಪರ್ ಡೂಪರ್ ಚಿತ್ರ 'ಮುಂಗಾರು ಮಳೆ' 2007ರಲ್ಲಿ ಪ್ರದರ್ಶಿತವಾಗಿ ಐರಿಶ್ ಕನ್ನಡಿಗರನ್ನು ತೊಯ್ದು ತೊಪ್ಪೆಯಾಗಿಸಿತ್ತು.

ಯೋಗರಾಜ್ ಭಟ್ಟರ ಅದ್ಭುತ ದಿಗ್ದರ್ಶನ, ಜಯಂತ್ ಕಾಯ್ಕಿಣಿಯ ಸಾಹಿತ್ಯ ಮತ್ತು ಮನೋಮೂರ್ತಿಯ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು. ದಿಗಂತ್ ಮಂಚಲೆ, ಐಂದ್ರಿತಾ ರೇ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಹಾಸ್ಯನಟ ರಾಜು ತಾಳಿಕೋಟಿ ಪ್ರಮುಖ ಭೂಮಿಕೆಯಲ್ಲಿರುವ ಮನಸಾರೆ ಆಗಸ್ಟ್ 28ರಂದು ಶನಿವಾರ ಪ್ರದರ್ಶಿತವಾಗುತ್ತಿದೆ. ಪ್ರದರ್ಶನದ ಇತರ ವಿವರಗಳನ್ನು ಗಮನಿಸಿ.

ಚಿತ್ರ : ಮನಸಾರೆ
ದಿನಾಕ, ಸಮಯ : ಶನಿವಾರ, 28ನೇ ಆಗಸ್ಟ್ 2010, ಮಧ್ಯಾಹ್ನ 2.30ಕ್ಕೆ
ಸ್ಥಳ : Ormonde Cinemas, Lower Kilmacud rd, Stillorgan, Co. Dublin.
ಟಿಕೆಟ್ : ವಯಸ್ಕರಿಗೆ 10 ಯುರೋಸ್, ಎಂಟು ವರ್ಷಕ್ಕಿಂತ ಮೇಲ್ಪಟ್ಟವರಿಗೆ 5 ಯುರೋಸ್, ಎಂಟರ ಕೆಳಗಿನ ಚುಲ್ಟಾರಿಗಳಿಗೆ ಪ್ರದರ್ಶನ ಉಚಿತ.

ಟಿಕೆಟ್ಟುಗಳಿಗೆಗಾಗಿ ಸಂಪರ್ಕಿಸಿ : irishkannadigaru@gmail.com
ಮನಸಾರೆ ಚಿತ್ರದ ವಿಮರ್ಶೆಯನ್ನು ಇಲ್ಲಿ ಓದಿರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ