ಕುವೈತ್ ಕನ್ನಡಿಗರ ಮರಳ ಮಲ್ಲಿಗೆ

Suguna Mahesh, Kuwait
ಕುವೈತ್ ನಲ್ಲಿರುವ ಕನ್ನಡಿಗರ ವೇದಿಕೆಯ ಹೆಸರು ಕುವೈತ್ ಕನ್ನಡ ಕೂಟ. ಅವರ ಅಂತರಜಾಲ ತಾಣದ ಶೀರ್ಷಿಕೆ 'ಮರಳ ಮಲ್ಲಿಗೆ'. ಕಳೆದ ಇಪ್ಪತ್ತೈದು ವರ್ಷಗಳಿಂದ ಚಲನಶೀಲವಾಗಿರುವ ಈ ವೇದಿಕೆಯ ಅಂತರ್ಜಾಲ ತಾಣವನ್ನು ಕನ್ನಡಿಗರು ಭೇಟಿ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದು ಮಲ್ಲಿಗೆ ಸಮಿತಿ ಕೇಳಿಕೊಂಡಿದೆ.

ಕುವೈತ್ ಕನ್ನಡ ಜನ ಮತ್ತು ವಿಶ್ವ ಕನ್ನಡಿಗರ ನಡುವೆ ತಮ್ಮ ವೆಬ್ ತಾಣವು ಭದ್ರ ಸೇತುವೆ ಆಗಬೇಕೆನ್ನುವುದು ಸಮಿತಿಯ ಆಶಯವಾಗಿದೆ. ಆ ಮೂಲಕ ಮರಳುನಾಡಿನಲ್ಲಿ ಕನ್ನಡ ಹಾಗೂ ಕನ್ನಡಿಗರ ಅಭಿಮಾನ ಇನ್ನಷ್ಟು ವೃದ್ದಿಯಾತ್ತದೆ ಎಂಬ ಹಂಬಲವವನ್ನು ಕುವೈತ್ ಕನ್ನಡಿಗರು ವ್ಯಕ್ತಪಡಿಸಿದ್ದಾರೆ.

ಮುಂಬರುವ ಮರಳ ಮಲ್ಲಿಗೆ ಸಂಚಿಕೆಗಳಲ್ಲಿ ಕುವೈತ್ ಕನ್ನಡ ಕೂಟದ ಸದಸ್ಯರಲ್ಲದೆ ಹೊರನಾಡ ಕನ್ನಡಿಗರು, ಕರುನಾಡ ಕನ್ನಡಿಗರ ಲೇಖನ, ಕವನ, ಚುಟುಕ, ನಗೆ ಹನಿ, ನಗೆ ಬರಹ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಚಿನಕುರುಳಿ, ಆರೋಗ್ಯಕ್ಕೆ ಸಂಬಂಧಿಸಿದ ಅಥವಾ ಯಾವುದೇ ತೆರನಾದ ಲೇಖನಗಳಿದ್ದಲ್ಲಿ ಕಳಿಸಿಕೊಡಬೇಕೆಂದು ಮರಳ ಮಲ್ಲಿಗೆಯ ಸಂಚಾಲಕರಾದ ಸುಗುಣ ಮಹೇಶ್ ತಮ್ಮ ಇ-ಮೇಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಕೆಳಕಂಡ ಈ-ಮೇಲ್ ಬಳಸುವುದರ ಮೂಲಕ ತಮ್ಮ ಹೊಸ ಪ್ರಯತ್ನವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿಮಾಡಿದ್ದಾರೆ. ನಿಮ್ಮ ಬರಹಗಳು ಜೂನ್ 10ರೊಳಗೆ ಅವರನ್ನು ತಲುಪಲಿ.

ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿ ಪರವಾಗಿ ಸುಗುಣ ಮಹೇಶ್

ಈ-ಮೇಲ್ :

[email protected]
[email protected]

ವೆಬ್ ಸೈಟ್ ವಿಳಾಸ : http://kuwaitkannadakoota.org/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+