ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಎ ಅಧ್ಯಕ್ಷೆ ಡಾ.ಕವಿತಾ ಕೊಟ್ರಪ್ಪ

By Shami
|
Google Oneindia Kannada News

ಬೆಂಗಳೂರು, ಮೇ 19 : ಕನ್ನಡ ಸೇವಕಿ ಡಾ.ಕವಿತಾ ಕೊಟ್ರಪ್ಪ ಅವರು ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಂಘದ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದು ಫ್ಯಾಮಿಲಿ ಮೆಡಿಸಿನ್ ವಿಭಾಗದಲ್ಲಿ ಜನಪ್ರಿಯ ವೈದ್ಯೆ ಎಂದು ಲಾಸ್ ಏಂಜಲಿಸ್ ನಗರದಲ್ಲಿ ಖ್ಯಾತರಾಗಿರುವ ಅವರು ಲಾಸ್ ಏಂಜಲೀಸಿನಲ್ಲಿ ಸಕ್ರಿಯವಾಗಿರುವ ಮಹಿಳಾ ಕಾರ್ಯಕರ್ತರ ಮೊದಲ ಪಂಕ್ತಿಯಲ್ಲಿ ಎದ್ದು ಕಾಣಿಸುತ್ತಾರೆ.

ಕನ್ನಡ ಕಲಿ ಶಾಲಾ ತರಗತಿಗಳು, ಇಲ್ಲಿನ ಕನ್ನಡ ಸಂಘ ಹಮ್ಮಿಕೊಳ್ಳುವ ನಾನಾ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ರೂಪಿಸುವುದು ಮತ್ತು ಅದನ್ನು ಯಶಸ್ವಿಗೊಳಿಸುವುದಕ್ಕೆ ತಮ್ಮ ಸಮಯವನ್ನು ತಪ್ಪದೆ ಮೀಸಲಿಡುವ ಕವಿತಾ ಅವರ ಆಯ್ಕೆಯಿಂದ ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಬಳಗಕ್ಕೆ ಇನ್ನಷ್ಟು ಹುಮ್ಮಸ್ಸು ಬಂದಿದೆ. ಕವಿತಾ ಅವರಿಂದ ಕನ್ನಡ ಸಂಘ ನಿರೀಕ್ಷಿಸುವ ಉತ್ತೇಜನ ಮತ್ತು ಮಾರ್ಗದರ್ಶನ ಅಷ್ಟರಮಟ್ಟಿಗೆ ಹೆಚ್ಚಾಗಿದೆ ಕೂಡ.

ಬರುವ ಜುಲೈ ತಿಂಗಳಲ್ಲಿ ಇಲ್ಲಿ ನಡೆಯುವ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಸ್ವಯಂಸೇವಕಿಯೂ ಆಗಿಯೂ ಕವಿತಾ ಕೊಟ್ರಪ್ಪ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಮ್ಮೇಳನದ ಮಹಿಳಾ ವೇದಿಕೆಯ ಅಧ್ಯಕ್ಷೆ ಆಗಿ ಅವರು ಸಕ್ರಿಯರಾಗಿದ್ದಾರೆ. ಕನ್ನಡ ಕೆಲಸಗಳಲ್ಲಿ ಅಪಾರ ಆಸಕ್ತಿ ಇರುವ ಪತಿ ಕೊಟ್ರಪ್ಪ ಮತ್ತು ಇಬ್ಬರು ಮಕ್ಕಳ ತಾಯಿ ಕವಿತಾ ಕೆಸಿಎ ಚುಕ್ಕಾಣಿ ಹಿಡಿದಿರುವುದಕ್ಕೆ ಅಮೆರಿಕಾದ ಅನೇಕ ಕನ್ನಡಿಗರು ಅಭಿನಂದನೆಗಳನ್ನು ಕಳಿಸಿದ್ದಾರೆ.

ಕರ್ನಾಕ ಸಾಂಸ್ಕೃತಿಕ ಸಂಘಕ್ಕೆ 2010-12ನೇ ಸಾಲಿನ ನೂತನ ಆಡಳಿತ ಸಮಿತಿಯಲ್ಲಿ ಒಟ್ಟು ಒಂಬತ್ತು ನಿರ್ದೇಶಕರಿರುತ್ತಾರೆ. ಅವರ ಹೆಸರುಗಳು ಇಂತಿವೆ:

ಡಾ. ಕವಿತಾ ಕೊಟ್ರಪ್ಪ, ಡಾ. ಶಂಖಂ ಜಗನ್ನಾಥ್, ಸೋಮ ಸೋಮಶೇಖರ್, ವೆಂಕಟೇಶ್ ಚಕ್ರವರ್ತಿ, ಮೈಸೂರು ಎಲ್ ಶ್ರೀನಿವಾಸ್, ಗಿರೀಶ್ ಕನ್ನಲ್ಲಿ, ಪ್ರತಿಭಾ ಶಾಸ್ತ್ರೀ, ವಲ್ಲೀಶ ಶಾಸ್ತ್ರೀ ಮತ್ತು ಡಾ. ಮೋಹನ್ ಚಂದ್ರ ಕೆ.ಪಿ.

English summary
Dr Kavitha Kotrappa elected president of KCA-SC, Kannada association of south california. kCA Office bearers 2010-12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X