ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬರ ಪ್ರಾಂತ್ಯದಲ್ಲಿ ಮಯೂರ ಲಾಸ್ಯ

By * ಚಿತ್ರ-ವರದಿ : ಸುಜಯ್ ಬೆಂದೂರ್
|
Google Oneindia Kannada News

Prakash Rao Payyar felicitated in Sharjah
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಆಯ್ಕೆ ಮಾಡಿ ನೀಡಲಾಗುವ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ" ಪ್ರಶಸ್ತಿ. ಈ ಬಾರಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಂಘಟನೆ, ಸಮಾಜಸೇವೆಯಲ್ಲಿ ಸದಾ ಕ್ರಿಯಾಶೀಲರಾಗಿರುವ ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ರೈ ಯವರಿಗೆ 2009 ನೇ ಸಾಲಿನ " ಮಯೂರ ಪ್ರಶಸ್ತಿ" ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನವು ನಮ್ಮ ಕರ್ನಾಟಕದ ಸಂಪ್ರದಾಯದಂತೆ ನೆರವೇರಿತು. ಸ್ವಿಸ್ ಅರೇಬಿಯನ್ ಪರ್ಫ್ಯೂಮ್ ನ ಶಿವಾನಂದ ಹೆಬ್ಬಾರ್ ಶಾಲು ಹೊದಿಸಿದರು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರ ಸಮ್ಮುಖದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ಅಂಬಲತೆರೆ ಯವರು ಫಲವನ್ನು ನೀಡಿದರು, ಅಧ್ಯಕ್ಷರಾದ ನೋವೆಲ್ ಡಿ ಅಲ್ಮೆಡಾ ರವರು ಮಯೂರ ಲಾಂಛನ ನೀಡಿದರು. ವಿಶ್ವಕರ್ಮ ಸಮಾಜ ಯು. ಎ. ಇ. ಅಧ್ಯಕ್ಷರಾದ ಶಾಂತಾರಾಮ್ ಆಚಾರ್ ರವರು ಸನ್ಮಾನ ಪತ್ರ ವಾಚಿಸಿದರು. ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಮಾರ್ಕ್ ಡೆನ್ನಿಸ್ ಡಿ ಸೋಜ ರವರು ಸನ್ಮಾನ ಪತ್ರ ನೀಡಿ ಗೌರವಿಸಿದರು.

ಮತ್ತೋರ್ವ ಸಾಧಕ, ಕನ್ನಡ ಸಾಹಿತ್ಯ, ನಾಟಕ ನಿರ್ದೇಶನ, ಪುಸ್ತಕ ರಚನೆ, ಬಿಡುಗಡೆ, ಇತ್ಯಾದಿ ಹಲವು ರೀತಿಯಲ್ಲಿ ಕನ್ನಡ ಭಾಷೆಯನ್ನು ಗಲ್ಫಿನಲ್ಲಿ ಧ್ವನಿ ಪ್ರತಿಷ್ಠಾನ ಸಂಘಟನೆ ಯ ಮೂಲಕ ಕಳೆದ ಎರಡುವರೆ ದಶಕಗಳಿಂದ ಮುಂಬೈ ಮತ್ತು ಯು.ಎ.ಇ.ಯಲ್ಲಿ ಕನ್ನಡ ಭಾಷೆಯ ಜಾಗೃತಿ ಮೂಡಿಸಿರುವ ಪ್ರಕಾಶ್ ರಾವ್ ಪಯ್ಯಾರ್ ರವರನ್ನು 2009 ನೇ ಸಾಲಿನ"ಮಯೂರ ಪ್ರಶಸ್ತಿ" ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಯು. ಎ. ಇ. ಪ್ರಖ್ಯಾತ ಉದ್ಯಮಿ, ಕೊಡುಗೈ ದಾನಿ, ಕರ್ನಾಟಕ ಕಲಾ ಸಂಸ್ಕೃತಿಯ ಪೋಷಕ ಶೇಖರ್ ಶೆಟ್ಟಿ ಯವರು ಶಾಲು ಹೊದಿಸಿದರು, ಶಾರ್ಜಾ ಕರ್ನಾಟಕ ಸಂಘದ ಖಜಾಂಚಿ, ಮೊಗವೀರ್ಸ್ ಯು. ಎ. ಇ. ಯ ಪ್ರಧಾನ ಕಾರ್ಯದರ್ಶಿ ಯಾದವ್ ಕೋಟ್ಯಾನ್ ಪುಷ್ಪ ಗುಚ್ಚ ನೀಡಿದರು. ಅಂಬಲತೆರೆ ವಿಷನ್ ಮುಖ್ಯಸ್ಥ, ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ ಅಂಬಲತೆರೆಯವರು ಫಲವನ್ನು ನೀಡಿದರು, ಅಧ್ಯಕ್ಷ ರಾದ ನೋವೆಲ್ ಡಿ ಅಲ್ಮೆಡಾ ರವರು ಮಯೂರ ಲಾಂಛನ ನೀಡಿದರು. ಶಾರ್ಜಾ ಕರ್ನಾಟಕ ಸಂಘದ ಉಪಾಧ್ಯಕ್ಷರು, ಬ್ಯಾರಿಸ್ ಕಲ್ಚರಲ್ ಫೋರಮ್ ಅಧ್ಯಕ್ಷರಾದ ಸಾದ್ ಮಹ್ಮದ್ ರವರು ಸನ್ಮಾನ ಪತ್ರ ವಾಚಿಸಿದರು. ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಮಾರ್ಕ್ ಡೆನ್ನಿಸ್ ಡಿ ಸೋಜ ರವರು ಸನ್ಮಾನ ಪತ್ರ ನೀಡಿ ಗೌರವಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X