• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾರುವ ಪೂಜಾರಿ ಯು ಎಸ್ ದೀಕ್ಷಿತ್

|
Umashankar Dixit
ಅಮೆರಿಕಾದಲ್ಲಿ ಬಹು ಜನಪ್ರಿಯತೆ ಮತ್ತು ಪ್ರಸಿದ್ಧಿ ಪಡೆದಿರುವ ಕನ್ನಡನಾಡಿನ ಅರ್ಚಕ ದಿಕ್ಷಿತ್. ಕರ್ನಾಟಕದ ಮಾಲೂರು ಮೂಲದ ದೀಕ್ಷಿತರ ಪೂರ್ಣ ಹೆಸರು ಉಮಾ ಶಂಕರ್ ದೀಕ್ಷಿತ್. ಉತ್ತರ ಅಮೆರಿಕೆಯಲ್ಲಿ ಯು.ಎಸ್.ದೀಕ್ಷಿತ್ ಎನ್ನುವ ಹೆಸರಿನಲ್ಲೇ ಅವರು ಪ್ರಸಿದ್ಧರಾಗಿದ್ದಾರೆ. ಕಾಕತಾಳೀಯವಾಗಿ ಅವರ ಈ ಹೆಸರು ಯುನೈಟೆಡ್ ಸ್ಟೇಟ್ಸ್ ಗೆ ಸರಿಹೊಂದುವುದು. ವಿಮಾನ ಹಾರಿಸುವುದನ್ನು ಅವರು ಲೀಲಾಜಾಲವಾಗಿ ಕಲಿತಿದ್ದಾರೆ.ಅದಕ್ಕೆಂದೇ ಅವರಿಗೆ The Flying Priest ಎಂಬ ನಿಕ್ ನೇಮ್ ಬಂದಿದೆ.

ಧೈರ್ಯಂ ಸರ್ವತ್ರ ಸಾಧನಂ ಅನ್ನುವುದು ದೀಕ್ಷಿತರನ್ನು ನೋಡಿದಾಗ ಅಕ್ಷರಶಃ ನಿಜವೆನಿಸುತ್ತದೆ. ಸಾಮಾನ್ಯವಾಗಿ ಬೇರೆ ಜಾಗಕ್ಕೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಜೀವನ ನಡೆಸಲು ಸುಮಾರು ದಿನಗಳೇನು ವರ್ಷಗಳೇ ಬೇಕು. ಅದರಲ್ಲೂ ವಿದೇಶಕ್ಕೆ ಬಂದು ಹೊಂದಿಕೊಳ್ಳುವುದು ಅಂದರೆ ಖಂಡಿತ ವರ್ಷಗಳು ಬೇಕೇ ಬೇಕು. ನಮಗೆ ತಿಳಿದಿರುವಂತೆ ಸಾಕಷ್ಟು ಜನ ಇಲ್ಲನ ಜೀವನಶೈಲಿಗೆ ಹೊಂದಿಕೊಳ್ಳಲಾರದೆ ಸ್ವದೇಶಗಳಿಗೆ ವಾಪಸ್ಸು ಹೋಗಿದ್ದಾರೆ. ಇನ್ನು ಕೆಲವರು ಬೇಕಾದಷ್ಟು ಡಿಗ್ರಿಗಳಿದ್ದರೂ ಸರಿಯಾದ ಕೆಲಸ ಸಿಗದೇ ಹೊಟ್ಟೆಪಾಡಿಗೆ ಯಾವುದೋ ಕೆಲಸ ಮಾಡಿಕೊಂಡು ಇಲ್ಲಿಯೂ ಇರಲಾರದೆ ವಾಪಸ್ಸು ಭಾರತಕ್ಕೂ ಹೋಗಲಾರದೆ ಕಷ್ಟ ಪಡುತ್ತಿದ್ದಾರೆ.

ನಾವು ವಿದೇಶಕ್ಕೆ ಬಂದು ಇಪ್ಪತ್ತೊಂದು ವರ್ಷಗಳಾದವು. ಮೊದಲು ಒಂದೆರಡು ವರ್ಷಗಳನಂತರ ಸ್ವಲ್ಪ ಕಷ್ಟಪಟ್ಟ ಮೇಲೆ ನಮ್ಮಿಬ್ಬರಿಗೂ ಕೆಲಸ ಸಿಕ್ಕಿತು. ನಮಗೆ ಹಾರು ಪೂಜಾರಿ ಯು ಎಸ್ ದೀಕ್ಷಿತರ ಪರಿಚಯವಾಗಿ ಹತ್ತು ವರ್ಷಗಳಮೇಲಾದವು.ಪರಿಚಯವಾದಾಗಿನಿಂದ ಸಾಮಾನ್ಯವಾಗಿ ನ್ಯೂಯಾರ್ಕ್ ಗೆ ಬಂದರೆ ಅವರು ನಮ್ಮ ಮನೆಗೆ ಬರದೇ ಹೋಗುವುದಿಲ್ಲ. ಎದುರಿಗೆ ನೋಡದಿದ್ದರೂ ಫೋನಿನಲ್ಲಿ ಆಗಾಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿರುತ್ತೇವೆ. 2007 ನಲ್ಲಿ ದೀಕ್ಷಿತರ ನೇತೃತ್ವದಲ್ಲಿ ನಮಗೂ ಮಾನಸಸರೋವರಕ್ಕೆ ಹೋಗುವ ಅವಕಾಶ ಸಿಕ್ಕಿತು.

ನಾನು ನ್ಯೂಯಾರ್ಕ್ ನಲ್ಲಿ ಸಮಾಜ ಸೇವಕಿಯಾಗಿ ಕೆಲಸಮಾಡುತ್ತಿದ್ದೇನೆ. ದಿನ ನಿತ್ಯ ಸಾಮಾನ್ಯ ಜನಗಳ ಸಂಪರ್ಕವಿರುವುದು. ನ್ಯೂಯಾರ್ಕ್ ನಲ್ಲಿ 2001 ರಲ್ಲಿ ಆದ ವಿಮಾನದ ದುರಂತ ಎಲ್ಲರಿಗೂ ತಿಳಿದಿರುವುದು. ಎಷ್ಟೋ ಜನರಿಗೆ ಆ ದುರಂತದ ನಂತರ ವಿಮಾನವಿರಲಿ ರೈಲಿನಲ್ಲಿ ಪ್ರಯಾಣಮಾಡಲೂ ಭಯ ಪಡುತ್ತಾರೆ, ಕೆಲವರಿಗೆ ಲಿಫ್ಟ್ ನಲ್ಲಿ ಹೋಗುವುದಕ್ಕೆ ಹೆದರಿಕೆ . ಅಂತಹುದರಲ್ಲಿ ವಿಮಾನವನ್ನು ನಡೆಸಬೇಕೆನ್ನುವ ಸಾಹಸ ಎಷ್ಟು ಜನ ಮಾಡುತ್ತಾರೆ. ಅವಕಾಶ ಹಾಗೂ ಹಣವಿದ್ದರೂ ಇಂಥಹ ತರಬೇತಿ ಪಡೆಯುವ ಹಂಬಲ ನೂರೇನು ಸಾವಿರದಲ್ಲಿ ಒಬ್ಬರಿಗೂ ಬರುವುದೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ನಮ್ಮ ದೀಕ್ಷಿತರು ವಿರಳರಲ್ಲಿ ವಿರಳ ಎನ್ನಬಹುದಾದ ವ್ಯಕ್ತಿ.

ದೀಕ್ಷಿತರ ವಿಷಯ ಬೆಂಗಳೂರಿನ ಕೆಲವು ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಪ್ರಚಾರವಾದುದನ್ನು ತಿಳಿದಾಗ ನನಗೂ ಅವರ ವಿಷಯ ದಟ್ಸ್ ಕನ್ನಡ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಅವರು ವಿಮಾನಚಾಲಕರಾದ ಬಗ್ಗೆ ಹಲವು ದಿನಪತ್ರಿಕೆಗಳಲ್ಲಿ ಸುದ್ದಿ ಸುರಿಮಳೆಯೇ ಆಗಿದೆ. ಜೊತೆಗೆ ಸಾಕಷ್ಟು ಚಿತ್ರಗಳೂ ಪ್ರಕಟವಾಗಿವೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಅನ್ನುವುದನ್ನು ದೀಕ್ಷಿತರು ನಿಜ ಮಾಡಿ ತೋರಿಸಿದ್ದಾರೆ. ಬಹುಶಃ ಇಂತಹ ವಿದ್ಯಮಾನ ಹಿಂದೆ ನಡೆದದ್ದು ಕೇಳಿಲ್ಲ ಮುಂದೂ ಕೇಳುತ್ತೀವೋ ಇಲ್ಲವೋ. ಅರ್ಚಕರಾದ ಉಮಾ ಶಂಕರ ದೀಕ್ಷಿತರ ಛಲ ಹಾಗೂ ಸಾಹಸ "ನ ಭೂತೋ ನ ಭವಿಷ್ಯತಿ " ಎಂದರೆ ತಪ್ಪಾಗದು. ಅಮೇರಿಕಾದಲ್ಲಿ ಸುಮಾರು ಜನರಿಗೆ ಚಿರಪರಿಚಿತರಾಗಿರುವ, ಭಾರತೀಯರೂ ಹಾಗೂ ವಿಶೇಷವಾಗಿ ಕನ್ನಡದವರಾದ ದೀಕ್ಷಿತರ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕಾದ್ದೆ.

ಬೆಂಗಳೂರಿನ ಟಿ.ವಿ.9 ದೂರದರ್ಶನದವರು ದೀಕ್ಷಿತರ ಸಂದರ್ಶನವನ್ನು ಮಾಡಿದ್ದಾರೆ. ಇದನ್ನು "ಯುಟ್ಯೂಬ್.ಕಾಂ ನಲ್ಲಿ ಪೈಲಟ್ ಪೂಜಾರಿ ಉಮಾ ಶಂಕರ್ ದೀಕ್ಷಿತ " ಎನ್ನುವ ಕೊಂಡಿ (ಲಿಂಕ್) ಯಲ್ಲಿ ನೋಡಬಹುದು.

ದೀಕ್ಷಿತರ ವಿಳಾಸ : umashankardixit@yahoo.com, skanda_dixit@yahoo.com USA Home Address:1151. Saddleview Ct, Livermore, CA 94550 Cell: 925 548 6820 Res:925 373 7911

Bangalore Cell: 99010 51039 & 94817 88550
USA temple Location.: Sri Vinayaka Cultural Society,4679 Aldona Lane, Sacramento, CA 95481 Ph # 916 483 4760 www.svcc.temple.org

ವಿಡಿಯೋ:
ಪೈಲೆಟ್ ಪೂಜಾರಿ ದೀಕ್ಷಿತ್ ಸಂದರ್ಶನ ಭಾಗ-2
ಪೈಲೆಟ್ ಪೂಜಾರಿ ದೀಕ್ಷಿತ್ ಸಂದರ್ಶನ ಭಾಗ-3
ಪೈಲೆಟ್ ಪೂಜಾರಿ ದೀಕ್ಷಿತ್ ಸಂದರ್ಶನ ಭಾಗ-4

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more