ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನ್ನಡ ಸಾಹಿತ್ಯ ರಂಗ'ದ ಸಾಹಿತ್ಯಗೋಷ್ಠಿಗೆ ಆಹ್ವಾನ

By Staff
|
Google Oneindia Kannada News

ಇದೀಗ ಅಮೆರಿಕೆಯಲ್ಲಿ ವಸಂತ ಕಾಲಿಟ್ಟಿದೆ! ಜೊತೆಗೇ ಕನ್ನಡ ಸಾಹಿತ್ಯ ರಂಗ'ದ ನಾಲ್ಕನೆಯ ವಸಂತ ಸಾಹಿತ್ಯೋತ್ಸವ' ಸಾಹಿತ್ಯ ಪ್ರೇಮಿಗಳಿಗೆ ಮತ್ತೊಂದು ರಸದೌತಣ ನೀಡುವ ಸಲುವಾಗಿ ನಮ್ಮೆಡೆಗೆ ಧಾವಿಸಿ ಬರುತ್ತಿದೆ. ನಿಮಗೆ ಗೊತ್ತಿರುವಂತೆ ಮೇ ತಿಂಗಳು 30 ಮತ್ತು 31ರಂದು ಮೇರಿಲ್ಯಾಂಡಿನ ರಾಕ್‌ವಿಲ್ ಎಂಬ ಸ್ಥಳದಲ್ಲಿ ಶೇಡಿ ಗ್ರೊವ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಈ ಸಮಾರಂಭ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಅಂತರ್ಜಾಲ ತಾಣದಲ್ಲಿ ಪಡೆಯಬಹುದು. ಸಾಹಿತ್ಯೋತ್ಸವ ಅಂದ ಮೇಲೆ ಸಾಹಿತ್ಯ ಗೋಷ್ಠಿ' ಇರಲೇಬೇಕು ಅಂತ ನೀವು ಯೋಚಿಸುತ್ತಿದ್ದರೆ ..."ಕರೆಕ್ಟ್". ಊಟ ಅಂದ ಮೇಲೆ ಅನ್ನ ಇರಲೇಬೇಕು ಅಂದ ಹಾಗಾಯಿತು ಇದು. (ಅಮೆರಿಕೆಯಂತಹ ದೇಶದಲ್ಲಿ ಅನ್ನ ಇಲ್ಲದೆ ಇರುವ ಊಟವೂ ಕಾಮನ್, ಬಿಡಿ!)

ಕನ್ನಡ ಪ್ರೇಮಿಗಳಿಗೆ, ಅದರಲ್ಲೂ ಬರವಣಿಗೆ ಎಂಬ ಹವ್ಯಾಸವನ್ನು ರೂಢಿಸಿಕೊಂಡಿರುವವರಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಕವನ, ಪ್ರಬಂಧ ಅಥವಾ ಬೇರೆ ಯಾವುದೇ ಕೃತಿಯನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಇತರ ಸಾಹಿತ್ಯ ಪ್ರೇಮಿಗಳ ವಾಚನವನ್ನು ಕೇಳಿ ಸಂತೋಷಿಸುವ ಈ ಅಮೋಘ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂಬ ಕಳಕಳಿಯ ಕೋರಿಕೆ ನಮ್ಮದು.

ಪ್ರತಿಯೊಬ್ಬರಿಗೂ ಏಳು ನಿಮಿಷಗಳ ಕಾಲಾವಕಾಶ ಕೊಡಲಾಗುತ್ತದೆ. ಭಾಗವಹಿಸುತ್ತಿರುವವರು ತಮ್ಮ ಸ್ವಂತ ಕೃತಿಯನ್ನು ಮಾತ್ರ ಓದಬಹುದು. ದಯವಿಟ್ಟು ಮೇ 15ರ ಒಳಗೆ ನೀವು ಓದಬೇಕೆಂದಿರುವ ಕೃತಿಯನ್ನು ನಮಗೆ ಈಮೇಲ್ ಮೂಲಕ ಕಳಿಸಿ ಕೊಡಿ. ಸಾಹಿತ್ಯ ಗೋಷ್ಠಿಯಲ್ಲಿ ವಾಚಿಸಲಿರುವ ಕೃತಿಗಳ ಆಯ್ಕೆ ಪ್ರಾಯೋಜಕರಿಗೆ ಸೇರಿದ್ದು.

ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:
ನಳಿನಿ ಮೈಯ : [email protected]
ಮಧುಕಾಂತ್ ಕೃಷ್ಣಮೂರ್ತಿ : [email protected]

ಇನ್ನಷ್ಟು ಮಾಹಿತಿ

ಕನ್ನಡ ಸಾಹಿತ್ಯ ರಂಗದಲ್ಲಿ ಪುಸ್ತಕಗಳ ಲೋಕಾರ್ಪಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X