• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 28ರಂದು ರೆಡಿಂಗ್‌ನಲ್ಲಿ ಯುಗಾದಿ

By Staff
|

ಪ್ರತಿ ವರ್ಷದಂತೆ ಕನ್ನಡಿಗರು ಯುಕೆ ಸಂಘ ಸಂಭ್ರಮದಿಂದ ಹಿಂದೂಗಳ ಹೊಸವರ್ಷದಾಚರಣೆ ಯುಗಾದಿಯನ್ನು ಆಚಸಿಸುತ್ತಿದೆ. ಮಾರ್ಚ್ 28ರಂದು ನಡೆಯಲಿರುವ ಹಬ್ಬಕ್ಕಾಗಿ ಆಗಮಿಸುವವರು ಮೊದಲೇ ಸ್ಥಳ ಕಾದಿರಿಸಿ, ಸಮಯಕ್ಕೆ ಸರಿಯಾಗಿ ಬರಬೇಕೆಂದು ಸಂಘ ಕೇಳಿಕೊಂಡಿದೆ.

ಪ್ರಿಯ ಕನ್ನಡ ಸಹೋದರ ಸಹೋದರಿಯರೇ,

ಆಂಗ್ಲ ನಾಡಿನಲ್ಲಿ, ಪ್ರತೀ ವರ್ಷದಂತೆ ಕನ್ನಡಿಗರು ಯು.ಕೆ ಹಮ್ಮಿಕೊಂಡಿರುವ ಯುಗಾದಿ ಹಬ್ಬಕ್ಕೆ ನಿಮ್ಮೆಲರಿಗೂ ಸ್ವಾಗತ ಸುಸ್ವಾಗತ. ಮಾರ್ಚ್ 28ರಂದು ರೆಡಿಂಗ್ ಹಿಂದೂ ದೇವಾಲಯದ ಆವರಣದಲ್ಲಿ ಜರುಗಲಿರುವ ಈ ಯುಗಾದಿ ಹಬ್ಬಕ್ಕೆ ಈಗಾಗಲೇ ಉತ್ತಮವಾದ ಪ್ರತಿಕ್ರಿಯೆ ಬರುತ್ತಿವೆ.

ವಿರೋಧಿ ನಾಮ ಸಂವತ್ಸರ ನಮಗೆಲ್ಲ ಅವಿರೋಧ ಅಭಿವೃದ್ದಿಯನ್ನು ಮತ್ತು ಸುಖ ಶಾಂತಿಗಳನ್ನು ತರಲೆಂದು ಶ್ರೀಸತ್ಯನಾರಯಣ ದೇವರ ಪೂಜೆಯ ಮೂಲಕ ದೇವರನ್ನು ಪ್ರಾರ್ಥಿಸೋಣ. ಪೂಜೆಯನ್ನು ವಿಳಂಬ ಮಾಡಲು ದುಸ್ತರವಾಗಿರುವದರಿಂದ, ಈ ಬಾರಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುತ್ತಿದೆ. ನಾವೆಲ್ಲರೂ ಸರಿಯಾದ ಸಮಯಕ್ಕೆ ಹಾಜರಿದ್ದು, ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳೋಣ, ಅಲ್ಲವೇ?

ಸಾಂಸ್ಕೃತಿಕ ಕಾರ್ಯಕ್ರಮಗಳು : ಪ್ರತೀ ಬಾರಿಯೂ, ಕನ್ನಡಿಗರು ಯು.ಕೆ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಮಗಾಗಿ ಸ್ಥಳೀಯ ಕಲಾವಿದರ ಮೂಲಕ ಪ್ರಸ್ತುತ ಪಡಿಸುತ್ತದೆ. ಈ ಬಾರಿ ಪುಟ್ಟ ಮಕ್ಕಳಿಂದ ನೃತ್ಯ, ವೇಷ-ಭೂಷಣ ಮತ್ತು ಹಿರಿಯ ಕಲಾವಿದರಿಂದ ನೃತ್ಯ ಮತ್ತು ಗಾಯನಗಳು ಮೂಡಿಬರಲಿವೆ. ಉತ್ತಮವಾದ ಭೊಜನದ ವ್ಯವಸ್ಥೆಯ ನಕ್ಷೆ ಈಗಾಗಲೇ ಸಿದ್ದವಾಗುತ್ತಿದೆ. ಈ ಹಬ್ಬದಲ್ಲಿ ನಾವೆಲ್ಲ ಸಂತೋಷದ ಸಾಗರದಲ್ಲಿ ಮುಳುಗಲು ಕೆಲವು ರಸಭರಿತ ಆಟಗಳನ್ನು ಆಯ್ದುಕೊಂಡಿದ್ದೇವೆ. ನಾವೆಲ್ಲರೂ ಈ ಆಟಗಳನ್ನು ಆಡಿ, ಕುಣಿದು, ದಣಿದು ಮೈಮರೆಯೋಣ. ಏನಂತೀರ?

ವಿನಮ್ರ ಮನವಿ : ದಯವಿಟ್ಟು ಈ ಬಾರಿ, ನಿಮ್ಮ ಸ್ಥಳಗಳನ್ನು ಮೊದಲೇ ಕಾದಿರಿಸಿರಿ. ನಾವೆಲ್ಲರೂ ಮೊದಲೇ ನಮ್ಮ ಆಗಮನದ ವ್ಯವಸ್ಥೆ ಮಾಡಿಕೊಂಡರೆ, ಭೋಜನದ ಮತ್ತು ಕೂಡಲು ಅನುಕೂಲವಾಗುತ್ತದೆ. ಇದರಿಂದ ಸಮಯ ಪಾಲನೆಗೂ ನೆರವಾಗುತ್ತದೆ ಎಂಬ ನಂಬಿಕೆಯಿದೆ. ಇಂದೇ, ನಿಮ್ಮ ಸ್ಥಳಗಳನ್ನು ಕಾದಿರಿಸಿರಿ. ಕೆಳಗಿನ ಅಂತರ್ಜಾಲದ ಪುಟವನ್ನು ಕ್ಲಿಕ್ಕಿಸಿ, http://www.kannadigaruuk.com/calendar/Register.htm

ದಿನಾಂಕ ಮತ್ತು ಸ್ಥಳದ ವಿವರಗಳು

ದಿನಾಂಕ ಮತ್ತು ಸಮಯ : 28ನೇ ಮಾರ್ಚ್, 2009, ಬೆಳಿಗ್ಗೆ 11 ಗಂಟೆಗೆ

ಸ್ಥಳ : Reading Hindu Temple Hall, 112, Whitley Street, Reading, RG2 0EQ

ದೂರವಾಣಿ : ಪವನ್ : 07782324462, ರಮೇಶ್ : 07815287819

ಹೆಚ್ಚಿನ ವಿವರಗಳಿಗಾಗಿ : http://www.kannadigaruuk.com/yugadi09faq.htm

ಮತ್ತೆ, ನಿಮ್ಮೆಲ್ಲರಿಗೂ ಕನ್ನಡಿಗರು ಯು.ಕೆ ಪರವಾಗಿ ಯುಗಾದಿ ಹಬ್ಬದ ಶುಭಾಶಯಗಳು. ನೀವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಈ ಪ್ರಾಮಾಣಿಕ ಶ್ರಮವನ್ನು ಸಾರ್ಥಕಗೊಳಿಸುತ್ತೀರೆಂದು ನಂಬಿದ್ದೇವೆ.

ಪವನ್ ಮೈಸೂರ್, ಕನ್ನಡಿಗರು ಯು.ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X