ನ್ಯೂಜೆರ್ಸಿಯಲ್ಲಿ 'ಕನ್ನಡವೇ ಸತ್ಯ' ಸಂಗೀತ ಸಂಜೆ
ಖ್ಯಾತ ಸಂಗೀತ ನಿರ್ದೇಶಕ, ಚಲನಚಿತ್ರ ಹಿನ್ನೆಲೆ ಗಾಯಕ ಹಾಗು ಭಾವ, ಜನಪದ ಗೀತೆಗಳ ಸರದಾರ ಸಿ. ಅಶ್ವಥ್ ಅವರು "ಕನ್ನಡವೇ ಸತ್ಯ" ಕಾರ್ಯಕ್ರಮವನ್ನ ವೇವಜ್ ಮ್ಯೂಸಿಕ್, ರೋಟರಿ ಕ್ಲಬ್ ಹಾಗು ಕನ್ನಡ ಕಸ್ತೂರಿ ಆಶ್ರಯದಲ್ಲಿ ಸೆಪ್ಟೆಂಬರ್ 20ರಂದು ಸಾಯಂಕಾಲ ನ್ಯೂಜೆರ್ಸಿಯಲ್ಲಿ ನಡೆಯಲಿದೆ.
"ಗ್ರೋವರ್ ಮಿಡಲ್ ಸ್ಕೂಲ್ ಥಿಯೇಟರ್"ನಲ್ಲಿ ಸತತವಾಗಿ ಮೂರು ಗಂಟೆಗಳ ಕಾಲ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಸಿ. ಅಶ್ವತ್ಥ್ ಮತ್ತು ತಂಡದವರು ನ್ಯೂಜೆರ್ಸಿ ಮತ್ತು ಸುತ್ತಲಿನ ಅಮೆರಿಕನ್ನಡ ಶ್ರೋತೃಗಳನ್ನು ಭಾವಸಾಗರದಲ್ಲಿ ತೇಲಿಸಲಿದ್ದಾರೆ.
ಆಶ್ವಥ್ ಅವರೊಂದಿಗೆ ಕರ್ನಾಟಕದಿಂದ ಬಂದಿರುವ ವಾದ್ಯಗೋಷ್ಠಿಯ ತಂಡ ಹಾಗು ಇತರ ಹಿನ್ನೆಲೆ ಗಾಯಕರಿಗೆ ಪ್ರೋತ್ಸಾಹ ನೀಡುವುದಲ್ಲದೆ, ಈ ಕಾರ್ಯಕ್ರಮದ ಮೂಲ ವ್ಯಯ ಕಳೆದು ಬರುವ ಹಣವನ್ನು ಕರ್ನಾಟಕದ ಹಳ್ಳಿಯ ನತದೃಷ್ಟ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲಾಗುವುದು. ನ್ಯೂಯಾರ್ಕ್, ನ್ಯೂಜೆರ್ಸಿ ಹಾಗು ಸುತ್ತಮುತ್ತಲಿನ ಅಮೆರಿಕನ್ನಡಿಗರೆಲ್ಲರೂ ತಮ್ಮ ಕುಟುಂಬ ಹಾಗು ಸ್ನೇಹಿತರೊಂದಿಗೆ ಹೆಚ್ಚು ಸಂಖ್ಯೆಯಲ್ಲಿ ಬಂದು ಈ ಒಂದು ಒಳ್ಳೆಯ ಕೈಂಕರ್ಯಕ್ಕೆ ಸಹಾಯಹಸ್ತ ನೀಡಬೇಕೆಂದು ಸಂಚಾಲಕರು ವಿನಂತಿಸಿಕೊಂಡಿದ್ದಾರೆ.
ಕನ್ನಡವೇ ಸತ್ಯ ಕಾರ್ಯಕ್ರಮದ ವಿವರ:
ಎಂದು : ಶನಿವಾರ, ಸೆಪ್ಟೆಂಬರ್ 20
ಎಷ್ಟು ಹೊತ್ತಿಗೆ : ಸಂಜೆ 5.30 ರಿಂದ 8.30
ಎಲ್ಲಿ : The Theatre, GROVER MIDDLE SCHOOL, 10 Southfield Road, Princeton Jct., NJ 08550
ಈ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ, ಸಂಪರ್ಕಿಸಿ : ರಾಜ್ @ 732-447-3894
ಅಥವಾ ಈ ಅಂತರ್ಜಾಲದ ಕೊಂಡಿಗೆ ಭೇಟಿ ಕೊಡಿ : http://www.wavez-music.com/whatsnew.html












Click it and Unblock the Notifications