ಮೇರಿಲ್ಯಾಂಡ್ ನ ವಿಷ್ಣು ದೇಗುಲಕ್ಕೆ ಯಡಿಯೂರಪ್ಪ ಭೇಟಿ
ಮೇರಿಲ್ಯಾಂಡ್, ಆ.11:ಇಲ್ಲಿನ ಲಂಹ್ಯಾಮ್ ನಲ್ಲಿರುವ ಶ್ರೀ ಶಿವ ವಿಷ್ಣು ದೇಗುಲಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಪ್ತ ಸಚಿವರೊಡನೆ ಭೇಟಿ ನೀಡಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ಐಟಿ ಹಾಗೂ ಅಬಕಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಆಗಸ್ಟ್ 24 ರಂದು ಸ್ಥಳೀಯ ಕಾಲಮಾನದ ಪ್ರಕಾರ 2:30ಕ್ಕೆ ದೇವಸ್ಥಾನವನ್ನು ಪ್ರವೇಶಿಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಪರಿವಾರದವರಿಗೆ ವಿಶೇಷ ಸ್ವಾಗತವನ್ನು ನೀಡಲಾಗುತ್ತದೆ ಎಂದು ದೇವಸ್ಥಾನದ ಮಂಡಲಿ ತಿಳಿಸಿದೆ. ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಎಂದು ಮಂಡಲಿ ಕೋರಿದೆ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications