ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ರಾಜಬೀದಿಗಳಲ್ಲಿ ಮಿಂಚಿದ ಕರ್ನಾಟಕದ ಯಕ್ಷ

By ವರದಿ : ಸರಿತಾ ಅರುಣ್ ಕುಮಾರ್
|
Google Oneindia Kannada News

Kuntikanamatha kumar and teamಲಂಡನ್, ಜ. 3 : ನಮ್ಮ ಕನ್ನಡ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ಯಕ್ಷಗಾನವನ್ನು ಪ್ರಪಂಚಕ್ಕೆಲ್ಲ ಹರಡುವ ಉದ್ದೇಶದಿಂದ ಇಂಗ್ಲೆಂಡಿನ www.yakshaland.com ಸದಸ್ಯರು ಜನವರಿ 1ರ ಐತಿಪಾಸಿಕ ಲಂಡನ್ ಪರೇಡ್‌ನಲ್ಲಿ ಯಕ್ಷಗಾನ ಪ್ರದರ್ಶಿಸಿದರು. ಸುಮಾರು 5 ಲಕ್ಷ ಲಂಡನ್ ಜನರು ಈ ಪ್ರದರ್ಶನವನ್ನು ವೀಕ್ಷಿಸಿ ಹರ್ಷೊದ್ಗಾರ ಮಾಡಿದರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಸುಮರು 2 ಕೋಟಿ ಜನರು ಪ್ರಪಂಚದಾದ್ಯಂತ ಟಿವಿಯಲ್ಲಿ ನೋಡಿ ಅನಂದಿಸಿದರು. ನಮ್ಮ ಕನ್ನಡ ಮನಸ್ಸುಗಳು ಹಿರಿಹಿರಿ ಹಿಗ್ಗಿ ಹೀರೇಕಾಯಿ ಆಯಿತು.

BBC, CNN, SKY ನೆಟ್‌ವರ್ಕ್‌ಗಳು, ಇಂಗ್ಲೆಂಡ್ ಮತ್ತು ಯುರೋಪಿನ ಎಲ್ಲಾ ಪ್ರಮುಖ ನ್ಯೂಸ್ ಚಾನೆಲ್ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷ ಕಲಾವಿದರಿಗೆ ಲಂಡನ್ ಮೇಯರ್ ಅವರು ಪ್ರಶಸ್ತಿ ಫಲಕಗಳನ್ನು ಇತ್ತು ಗೌರವಿಸಿದರು.

ಮಕ್ಕಳಿಂದ ಹಿಡಿದು ಮುದುಕರವರೆಗೆ "ಯಕ್ಷ-ದ ಕಿಂಗ್" ವೇಷಧಾರಿಯೊಂದಿಗೆ(ಕುಂಟಿಕಾನಮಠ ಕುಮಾರ್) ಭಾವಚಿತ್ರಗಳನ್ನು ತೆಗಿಸಿಕೊಂಡರು. ಹಿಮ್ಮೇಳದಲ್ಲಿ ಆರುಣ್ ರಾಘವೇಂದ್ರ ಚೆಂಡೆಯನ್ನು ಬಾರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು, ಚಕ್ರತಾಳದಲ್ಲಿ ಸರಿತಾ ಆರುಣ್ ಕುಮಾರ್ ಸಹಕರಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ದೀಪಿಕಾ ಕುಂಟಿಕಾನಮಠ ಅವರು ವೀಡಿಯೊಗ್ರಾಫರ್ ಆಗಿ ಯಕ್ಷಗಾನವನ್ನು ಸೆರೆಹಿಡಿದರು.

ಅಂತೂ ಯಕ್ಷ-ದ ಕಿಂಗ್ ತನ್ನ ಸದಸ್ಯರೊಂದಿಗೆ ಲಂಡನಿನ ಪ್ರಮುಖ ಸ್ಥಳಗಳಾದ ಬಿಗ್ ಬೆನ್, ಟ್ರಫಾಗಲ್ ರಸ್ತೆ, ಪಿಕಾಡಲಿ ಸರ್ಕಸ್, ಪಾರ್ಲಿಮೆಂಟ್ ಹೌಸ್ ಇವೆಲ್ಲದರ ಸಮೀಪದಿಂದ ಸಾಗಿ ಯಕ್ಷಗಾನದ ಇತಿಹಾಸದಲ್ಲಿ ಅಚ್ಚಳಿಯದ ಒಂದು ಹೊಸ ಪುಟವನ್ನು ಬರೆದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X