ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಇಯಲ್ಲಿ ‘ಮದ್ದು ಶಾಸ್ತ್ರಿ’ ಬಿ.ಆರ್‌.ಶೆಟ್ಟಿಗೆ ಗೌರವ

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

B.R.Shetty geing honoured in Pune for his contribution to Pharmaceutical Congressಯುನೈಟೆಡ್‌ ಅರೇಬಿಕ್‌ ಎಮಿರೇಟ್ಸ್‌ (ಯುಎಇ) ನ ಕರ್ನಾಟಕ ಸಂಘಗಳೊಟ್ಟಿಗೇ ಬೆರೆತಿರುವ ಹೆಸರು ಬಿ.ಆರ್‌.ಶೆಟ್ಟಿ ಅವರದ್ದು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಶೆಟ್ಟಿಯವರ ಮುಡಿಗೆ ಇದೀಗ ಇನ್ನೊಂದು ಪ್ರಶಸ್ತಿಯ ಗರಿ.

ಡಿಸೆಂಬರ್‌ 13ನೇ ತಾರೀಕು ಪುಣೆಯಲ್ಲಿ ನಡೆದ 54ನೇ ಭಾರತೀಯ ಔಷಧಿ ಸಮಾವೇಶದಲ್ಲಿ ಶೆಟ್ಟಿ ಅವರಿಗೆ ವಿಶೇಷ ಗೌರವ ಸಂದಿತು. ಹೊರನಾಡಿನಲ್ಲಿದ್ದುಕೊಂಡು ಮದ್ದು ಶಾಸ್ತ್ರದಲ್ಲಿ ಸಾಧನೆ ಮಾಡಿರುವ ಕಾರಣಕ್ಕೆ ಬಿ.ಆರ್‌.ಶೆಟ್ಟಿ ಅವರನ್ನು ಸಮಾವೇಶಲ್ಲಿ ಗೌರವಿಸಲಾಯಿತು.

ಮಹಾರಾಷ್ಟ್ರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಡಾ.ಪತಂಗ ರಾವ್‌ ಎಸ್‌. ಕಡಂ, ಶೆಟ್ಟಿ ಅವರ ಕೂಡ ವೇದಿಕೆಯ ಮೇಲಿದ್ದರು. ಇವರು ಪುಣೆಯ ಭಾರತೀಯ ವಿದ್ಯಾಪೀಠದ ಸ್ಥಾಪಕರೂ ಹೌದು. ಇಂಡಿಯನ್‌ ಫಾರ್ಮಸ್ಯುಟಿಕಲ್‌ ಕಾಂಗ್ರೆಸ್‌ ಅಸೋಸಿಯೇಶನ್‌ (ಐಪಿಸಿಎ), . ಇಂಡಿಯನ್‌ ಫಾರ್ಮಸ್ಯುಟಿಕಲ್‌ ಅಸೋಸಿಯೇಶನ್‌ (ಐಪಿಎ), ಇಂಡಿಯನ್‌ ಫಾರ್ಮಸಿ ಗ್ರಾಜ್ಯುಯೇಟ್ಸ್‌ ಅಸೋಸಿಯೇಶನ್‌ (ಐಪಿಜಿಎ) ಸೇರಿದಂತೆ ವಿವಿಧ ಒಕ್ಕೂಟಗಳು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಇದಾಗಿತ್ತು.

ಬಿ.ಆರ್‌.ಶೆಟ್ಟಿ- ಟಿಪ್ಪಣಿ
ದುಡ್ಡು ಮಾಡಿಕೊಳ್ಳುವ ಏಕೈಕ ಗುರಿಯಾಂದಿಗೆ ಉದ್ದಿಮೆಗಿಳಿಯುವ ಮಂದಿಗೆ ಅಪವಾದ ಬಿ.ಆರ್‌.ಶೆಟ್ಟಿ . ಮದ್ದು ಶಾಸ್ತ್ರದಲ್ಲಿ ಕೆಲಸ ಮಾಡಿ ಹೆಸರು, ದುಡ್ಡು ಎರಡನ್ನೂ ಸಂಪಾದಿಸಿದ ಇವರು ಯುಎಇ ಕನ್ನಡ ಸಂಘಗಳ ಕಟ್ಟಾಳು. ಎಲ್ಲವನ್ನೂ ಮೀರಿಸುವಂಥಾ ಕೊಡುಗೈ ಪ್ರಭು. ಸಮಾಜ ಮುಖಿಯಾದ ಶೆಟ್ಟಿ ಉದ್ದಿಮೆ ಹಾಗೂ ಸಮಾಜ ಸೇವೆ- ಎರಡರಲ್ಲೂ ಮುಂದು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರು ದೂರದ ದೇಶದಲ್ಲಿ ಕನ್ನಡದ ಕಂಪನ್ನು ಬೀರುತ್ತಿರುವ ಅಪರೂಪದ ವ್ಯಕ್ತಿ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X