ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲು ಮೋಜಿನ ‘ನಂಜುಂಡಾ...ಶ್ರೀನಿವಾಸ’ ! ಭಲೇ ಅಲಮೇಲು ಭಲೇ !

By Oneindia Staff
|
Google Oneindia Kannada News

*ಸಂಗ್ರಹಕಾರ : ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಪ್ರಸ್ತಾವನೆ : ಮಾರ್ಚ್‌ 24ನೆಯ ದಿನಾಂಕ ಭಾನುವಾರ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಪುತಿನ ಪ್ರತಿಷ್ಠಾನಕ್ಕೆ ನಿಧಿ ಸಂಗ್ರಹಣೆಯ ಸಲುವಾಗಿ ಒಂದು ಸಂಗೀತ ಮತ್ತು ನಾಟಕದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸುಮಾರು ಎಂಟುನೂರು ಜನ ಕನ್ನಡಿಗರು ಕಾರ್ಯಕ್ರಮಕ್ಕೆ ಬಂದು, ಸಂಗೀತ ಕೇಳಿ, ನಾಟಕ ನೋಡಿ ಖುಷಿಪಟ್ಟರು. ಪ್ರಹಸನವನ್ನು ಬರೆದು ನಿರ್ದೇಶಿಸಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದವರು ಅಲಮೇಲು ಐಯಂಗಾರರು. ಹವ್ಯಾಸೀ ಕಲಾವಿದರನ್ನು ಸೇರಿಸಿಕೊಂಡು, ಅತ್ಯಲ್ಪ ಕಾಲದಲ್ಲಿ ತಯಾರಿ/ಅಭ್ಯಾಸ ನಡೆಸಿ, ಯಶಸ್ವಿಯಾಗಿ ಪ್ರದರ್ಶಿಸಿದ ಅಲಮೇಲು ಅವರ ‘ನಂಜುಂಡಾ...ಶ್ರೀನಿವಾಸ ’ ನಾಟಕದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಪಡೆಯಲು ನಾವು ಒಂದು ವಿನೂತನ ಕ್ರಮ ಕೈಗೊಂಡೆವು. ‘ನಾಟಕ ನೋಡಿ ನಿಮ್ಮ ಅನಿಸಿಕೆಗಳನ್ನು ನೀವು ಸಭಾಂಗಣ ಬಿಡುವ ಮೊದಲೇ ಬರಹದಲ್ಲಿ ನಮಗೆ ದಯವಿಟ್ಟು ತಿಳಿಸಿ’ ಎಂದು ವೇದಿಕೆಯಿಂದ ಕೇಳಿಕೊಂಡೆವು. ಸುಮಾರು ನಾನೂರು ಇಂಡೆಕ್ಸ್‌ ಕಾರ್ಡ್‌ಗಳನ್ನೂ ಪೆನ್ಸಿಲ್‌ ತುಂಡುಗಳನ್ನೂ ಸಭಾಂಗಣದಲ್ಲಿ ಹಂಚಿದೆವು. ನಾಟಕ ನೋಡಿದವರು ಬರೆದು ಕೊಟ್ಟ ಪ್ರತಿಕ್ರಿಯೆಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ :

ಕನ್ನಡದಲ್ಲಿ ಬಂದ ಪ್ರತಿಕ್ರಿಯೆಗಳು:

  • ‘ನಂಜುಂಡಾ...ಶ್ರೀನಿವಾಸ’ ಚೆನ್ನಾದ ಹಾಸ್ಯಮಯ ಕೃತಿ ಹಾಗೂ ರಚನೆ. ಅಭಿನಯ (ಸಂಭಾಷಣೆಯೂ)ನಿರರ್ಗಳವಾಗಿ ಇದ್ದಲ್ಲಿ ಇನ್ನೂ ಹೆಚ್ಚು ರಸಮಯವಾಗಿ ಇರುತ್ತಿತ್ತು.
    - ಗೋಪಾಲ ಕೃಷ್ಣ ಪೈ. ಕೆ.
  • ನಾಟಕ ಉತ್ತಮವಾಗಿ ಮೂಡಿ ಬಂದಿದೆ
    - ಪ್ರಸಾದ್‌ [email protected]
  • ಅದ್ಭುತವಾಗಿತ್ತು. ಮತ್ತೆ ಮತ್ತೆ ಈ ರಸದೌತಣ ಬೇಕು !
    - ಅನಂತ ಕೃಷ್ಣ [email protected]
  • ತುಂಬಾ ಸ್ಮರಣೀಯವಾಗಿತ್ತು. ‘ಅಂಬಲಿ ಕುಡಿಯವವನಿಗಿಂತ.. ’ಗಿಂತ, ‘ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ’- ಹೆಚ್ಚು ಸರಿಯಾಗಿತ್ತು.
    -ಶಾಂತಲಕ್ಷ್ಮಿ [email protected]
  • ನಾಟಕವಂತೂ ತುಂಬಾ ಚೆನ್ನಾಗಿತ್ತು !
    - ಶುಭಾ ಮೂರ್ತಿ ಮತ್ತು ಡಾ. ಕೃಷ್ಣ ಮೂರ್ತಿ
  • ತುಂಬಾ ಚೆನ್ನಾಗಿತ್ತು . ಮತ್ತೆ ಮತ್ತೆ ಇಂಥಾ ಕಾರ್ಯಕ್ರಮಗಳು ಬರಲಿ !
    - ಶ್ರೀಲಕ್ಷ್ಮಿ ಕೃಷ್ಣ [email protected]
  • ನಾಟಕದ ವಸ್ತು ಮತ್ತು ಸಂಭಾಷಣೆ ಅಮೆರಿಕಾದ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವಂತೆ ಇವೆ. ನಾಟಕದ ನಿರ್ವಹಣೆಯಲ್ಲಿ ಇನ್ನೂ ಕೆಲವು ಸುಧಾರಣೆಗಳನ್ನು ಮಾಡಿಕೊಂಡಿದ್ದರೆ ಒಟ್ಟು (ಹೆಚ್ಚು?) ಆನಂದವಾಗುತ್ತಿತ್ತು.
    - ಎಂ.ಎನ್‌.ಎಸ್‌. ರಾವ್‌ [email protected]
  • ಪ್ರೀತಿಯ ಅಲಮೇಲು ಅಯ್ಯಂಗಾರ್‌ ಅವರಿಗೆ,
    ಈ ದಿನ ತಾವು ರಚಿಸಿ ನಿರ್ದೇಶಿಸಿರುವ ‘ನಂಜುಂಡಾ...ಶ್ರೀನಿವಾಸ ’ ನಾಟಕ ನಮಗೆಲ್ಲಾ ತುಂಬಾ ತುಂಬಾ ಮೆಚ್ಚಿಕೆಯಾಯಿತು!
    - ಸರೋಜಾ ಕೃಷ್ಣಮೂರ್ತಿ
  • ನಂಜುಂಡಾ...ಶ್ರೀನಿವಾಸ ಒಂದು ಹಾಸ್ಯ ಪ್ರಧಾನವಾದ ನಾಟಕ. ಅಮೆರಿಕಾದ ಬಿಜಿ ಜೀವನಕ್ರಮವನ್ನು ತಿಳಿ ಹಾಸ್ಯದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ. ನಾಟಕದ ಹೆಸರು ವಸ್ತುವನ್ನು ಗೌಪ್ಯವಾಗಿಸಿದೆ. ಎರಡು ಮನೆತನಗಳ ಮನೆ ದೇವರು ಬೇರೆ- ಎಂಬ ಏಕೈಕ ಕಾರಣಕ್ಕೆ ಒಂದೇ ಜಾತಿಯ ಹುಡುಗ ಹುಡುಗಿ ಮದುವೆಗೆ ಇಬ್ಬರು ತಾಯಂದಿರು ಅಡ್ಡ ಬರುತ್ತಾರೆ. ಈ ಮದುವೆಗೆ ಒದಗಿದ ಸಮಸ್ಯೆಯ ಪರಿಹಾರವೇ ಕಥಾವಸ್ತು. ಹಾಸ್ಯಭರಿತ ಸಂಭಾಷಣೆಯಲ್ಲಿ ಕಥೆ ಚೆನ್ನಾಗಿ (ವೇಗವಾಗಿ ) ಓಡುತ್ತದೆ. ಸಂಗೀತ ಇಂಪಾಗಿದೆ. ನಾಟಕಕ್ಕೆ ಸಂಭಾಷಣೆಯೇ ಜೀವಾಳ. ಪಾತ್ರಧಾರಿಗಳ ಅಭಿನಯ ಸಹಜವಾಗಿದೆ. ನಿರ್ದೇಶನ ಬಿಗಿಯಾಗಿದೆ. ಸನ್ನಿವೇಶ ಬೇ ಏರಿಯಾದ ಹೈಟೆಕ್‌ ವಾತಾವರಣದಲ್ಲಿ ಮೂಡಿ ಬಂದಿದೆ. ರಂಗಸಜ್ಜಿಕೆಯಲ್ಲಿ ವಿಶೇಷವೇನೂ ಇಲ್ಲ. ಒಟ್ಟಿನಲ್ಲಿ ತಿಳಿಹಾಸ್ಯದ ಉತ್ತಮ ನಾಟಕ - ‘ನಂಜುಂಡಾ...ಶ್ರೀನಿವಾಸ ’ !
    - ವಿಶ್ವನಾಥ್‌ ಹುಲಿಕಲ್‌ [email protected]
  • ನಂಜುಂಡ ಶ್ರೀನಿವಾಸ ನಾಟಕ ಭರ್ಜರಿಯಾಗಿತ್ತು. ಅಲಮೇಲು ಅವರು ಒಬ್ಬರು ಜೀನಿಯಸ್‌!
    - ನಾಗರಾಜ ಮಿಟ್ಟಿ
  • ಸಮಯ ಪ್ರಜ್ಞೆ ಬೇಕು. ನಾಟಕ ಸೊಗಸಾಗಿತ್ತು. ನಕ್ಕೆವು. ವಂದನೆಗಳು.
    -ಹೆಸರು ಇಲ್ಲ !
  • ನಂಜುಂಡ ಶ್ರೀನಿವಾಸ ಬಹಳ ಚೆನ್ನಾಗಿ ಮೂಡಿ ಬಂತು. ಉತ್ತಮ ಅಭಿನಯ ! ತುಂಬಾ ಧನ್ಯವಾದಗಳು !
    - ಶಿವ .
  • (1) (ನಂಜುಂಡ ಶ್ರೀನಿವಾಸ ) ಅಲಮೇಲು ಐಯಂಗಾರ್‌ ಅವರ ಮತ್ತೊಂದು ಅಮೋಘ ಪ್ರದರ್ಶನ. (2) ಪಾತ್ರಗಳು ಅತ್ಯುತ್ತಮ ; ಒಂದಕ್ಕಿಂತ ಒಂದು ಚೆನ್ನ . (3) ಸಮಯದ ಅರಿವೇ ಆಗಲಿಲ್ಲ. (4)ನಾಟಕದ ವಸ್ತುಗೀತೆ(ಥೀಂ ಸಾಂಗ್‌) ಬಹಳ ಸಮರ್ಪಕವಾಗಿಯೂ ಮನಸೆಳೆಯುವಂತೆಯೂ ಇತ್ತು. (5) (ಒಟ್ಟಾರೆ) ಅಲಮೇಲು ಐಯಂಗಾರ ಅವರ ನಾಟಕ ಮಿಸ್‌ ಮಾಡಿಕೊಳ್ಳುವುದು ಒಂದು ಘೋರ ಅಪರಾಧ !
    - ಸುಧಾ ಶ್ರೀಧರ್‌ [email protected]
  • ತುಂಬಾ ಚೆನ್ನಾಗಿತ್ತು !
    - ಹೆಸರು ಇಲ್ಲ
  • ನಾಟಕ ತುಂಬಾ ತಮಾಷೆಯಾಗಿತ್ತು. ರಮೇಶನ ತಾಯಿ, ಶ್ರೀನಾಥ, ಕ್ಯಾಥರೀನ್‌-ಗಳ ಪಾತ್ರವಂತೂ ಬಹಳ ಚೆನ್ನಾಗಿತ್ತು. ಎಲ್ಲರ ಅಭಿನಯ ಕೂಡ ತುಂಬಾ ಚೆನ್ನಾಗಿತ್ತು. ಮಕ್ಕಳೂ ಸಹ ಅದರಲ್ಲೂ ದೀಪಳ (ನೇಹಾ ವೆಂಕಟೇಶ್‌) ಅಭಿನಯ ಸೊಗಸಾಗಿತ್ತು. ಒಟ್ಟಿನಲ್ಲಿ ಹೇಳುವುದಾದರೆ, ಅತ್ಯಂತ ಉತ್ತಮವಾದ ಹಾಸ್ಯಭರಿತ ನಾಟಕ. ಇದೇ ರೀತಿ ಮುಂದೆಯೂ ಒಳ್ಳೆಯ ನಾಟಕಗಳನ್ನು (ಅಲಮೇಲು ಅವರು ) ಬರೆಯಲಿ ಅಂತ ನನ್ನ ಆಸೆ !
    - ಎಸ್‌. ಎಲ್‌. ಸವಿತಾ, ಸ್ಯಾನ್‌ ಹೋಸೆ [email protected]
  • ನಿರ್ದೇಶಕರಿಗೆ ಕಿವಿ ಮಾತು : ವೇದಿಕೆಯ ಎಡಭಾಗ ಮನೆಯ ಹೊರಬಾಗಿಲು, ಬಲಭಾಗ ಮನೆಯ ಒಳಬಾಗಿಲು ಎಂದು ಕಲ್ಪಿಸಿಕೊಳ್ಳಲು ಪ್ರೇಕ್ಷಕರಿಗೆ ಒಮ್ಮೆ ಮನದಟ್ಟು ಮಾಡಿದ ಮೇಲೆ, ಪಾತ್ರಗಳು ಅದನ್ನು ತಪ್ಪದೆ ಹಾಗೆಯೇ ಅನುಸರಿಸಲು ಹೇಳಬೇಕು. ರಂಗಸಜ್ಜಿಕೆಯ ಕಡೆ ಇನ್ನೂ ಹೆಚ್ಚು ಗಮನವಿತ್ತು ಕಛೇರಿ, ಹುಡುಗನ ಮನೆ, ಹುಡುಗಿಯ ಮನೆ ಬೇರೆ ಬೇರೆ ಎದ್ದು ಕಾಣುವಂತೆ ಅಂಕ ಬದಲಾದಾಗ ಪ್ರೇಕ್ಷಕರಿಗೆ ತಟ್ಟನೆ ಹೊಳೆಯುವಂತೆ ದೃಶ್ಯ ಸಾಧನಗಳನ್ನು ಬಳಸಬೇಕು. ಇದ್ದ ಪೀಠೋಪಕರಣಗಳನ್ನೇ ಉಪಯೋಗಿಸಿಕೊಳ್ಳಲಿ. ಪಾತ್ರಗಳು ಅವುಗಳಲ್ಲಿ ಕುಳಿತೋ, ಅವುಗಳ ಹಿಂದಿದ್ದೋ, ಮುಂದಿದ್ದೋ ತಮ್ಮ ನಡೆಯನ್ನೂ ಆಡುವ ಮಾತಿಗೆ ಪೂರಕ ಮಾಡಿಕೊಳ್ಳಬೇಕು. ಎಲ್ಲರೂ ಸಾಲಾಗಿ ನಿಲ್ಲಬಾರದು ; ಅದು ನೈಜತೆಗೆ ಭಂಗ ತರುವ ಅಂಶ. ಕ್ಲಿಪ್‌ ಆನ್‌ ಮೈಕ್‌ ವ್ಯವಸ್ಥೆ ಹೇಗೂ ಇತ್ತಲ್ಲ, ಹಾಗಾಗಿ ಮೈಕ್‌ ಕಂಬದ ಮುಂದೆ ನಿಂತು ಮಾತನ್ನೊಪ್ಪಿಸುವ ಅಸಹಜತೆಯಿಂದ ನೀವು ತಪ್ಪಿಸಿಕೊಂಡಿದ್ದಿರಿ; ಒಳ್ಳೆಯದೇ ಆಗಿತ್ತು . ವೇದಿಕೆಯ ಅಲ್ಲಿ ಇಲ್ಲಿ ಮೂಲೆ ಮೂಲೆಗಳಲ್ಲಿ ನಿಂತೋ ಕುಳಿತೋ ಪುಸ್ತಕ ಓದುತ್ತಲೋ ಏನೋ ಬೇರೆ ಕೆಲಸ ಮಾಡುತ್ತಾ ಅಲ್ಲಿಂದಲೇ ಮಾತನಾಡಿದರೆ ಸಹಜತೆ ಮೂಡುತ್ತದೆ. ಇಷ್ಟೆಲ್ಲಾ ಹೇಳಿದರೂ ಹರಿತವಾದ ಮಾತಿನ ಚಕಮಕಿಯಿಂದ ಪ್ರೇಕ್ಷಕರ ಮನಸ್ಸನ್ನ ಗೆದ್ದ ಅಲಮೇಲು ಅವರ ಕಲಾ ನೈಪುಣ್ಯ, ಸೊಗಸಾಗಿ ಅಭಿನಯಿಸಿದ ಜಾಣ್ಮೆ, ಹಿತಮಿತವಾದ ದೃಶ್ಯಾಂತರ ಹಿನ್ನೆಲೆ ಸಂಗೀತ, ಪ್ರಹಸನಕ್ಕೆ ಮೆರಗನ್ನಿತ್ತಿತು.
    - ಹೆಸರು ಬೇಡ!
ಇಂಗ್ಲಿಷಿನಲ್ಲಿ ಬಂದ ಪ್ರತಿಕ್ರಿಯೆಗಳ ಭಾವಾನುವಾದ :

  • ತುಂಬಾ ಚೆನ್ನಾಗಿತ್ತು. ಪ್ರತಿಯಾಬ್ಬ ಕಲಾವಿದರದ್ದೂ ಅಮೋಘ ಅಭಿನಯ. ಉತ್ತಮ ಕಥಾವಸ್ತು .
    - ಹೆಸರು ಇಲ್ಲ !
  • ಅಮೋಘ ನಾಟಕ !
    - ಕಿರಣ್‌ [email protected]
  • ಅತಿ ಉತ್ತಮ ಮಟ್ಟದ ನಾಟಕ . ಚೆನ್ನಾಗಿ ಪ್ರದರ್ಶಿತವಾಯಿತು. (ಆದರೆ) ಧ್ವನಿವರ್ಧಕ ವ್ಯವಸ್ಥೆ ಬಲಹೀನವಾಗಿತ್ತು !
    - ಹೆಸರು ಇಲ್ಲ !
  • ಬಹಳ ಒಳ್ಳೆಯ ನಾಟಕ ಮತ್ತು ಸಂಭಾಷಣೆ. ರಮೇಶನ ತಾಯಿಯಾಗಿ ಅಲಮೇಲು ಐಯಂಗಾರ್‌ ಮತ್ತು ಕ್ಯಾಥರೀನ್‌ ಆಗಿ ವಾಸುದೇವ ಅವರದ್ದು ಅತ್ಯುತ್ತಮ ಅಭಿನಯ !
    - ಆರ್‌. ಗುರುದೇವ್‌ [email protected]
  • ಅತ್ಯುತ್ತಮವಾಗಿ ನಿರ್ದೇಶಿಸಲ್ಪಟ್ಟ ಒಳ್ಳೆಯ ನಾಟಕ !
    - ಹೆಸರು ಇಲ್ಲ. [email protected]
  • 1. ಹೊಟ್ಟೆ ಹುಣ್ಣಾಗಿಸುವಷ್ಟು , ಪಕ್ಕೆಲುಬಿಗೆ ಕಚಗುಳಿ ಕೊಡುವಷ್ಟು ನಾಟಕ ನಕ್ಕು ನಲಿಯುವಂತಿತ್ತು. 2. ಅಮೆರಿಕದಲ್ಲಿ ಕನ್ನಡ ಮಾತನಾಡುವವರ ಮನೆಗಳಲ್ಲಿ ನಡೆಯವ ಆಧುನಿಕ ಜೀವನದ ಒಂದು ಸಮರ್ಪಕ ವ್ಯಾಖ್ಯಾನದಂತೆ ನಾಟಕ ಇತ್ತು. 3. ನಟ-ನಟಿಯರು ಮಾತನಾಡುವಾಗ ಕಾಲನ್ನು ಅತ್ತಿಂದಿತ್ತ ಇಟ್ಟು ಬದಲಾಯಿಸುತ್ತಿದ್ದುದು ಬೇಕಾಗಿರಲಿಲ್ಲ. 4. ಅಲ್ಲಲ್ಲಿ ಧ್ವನಿವರ್ಧಕ ವ್ಯವಸ್ಥೆ ಕೈಕೊಟ್ಟಿತು !
    - ಹರೀಶ್‌ ಭಟ್‌ [email protected]
  • ಅತ್ಯುತ್ತಮ ಮತ್ತು ಅಮೋಘ ನಾಟಕ, ತುಂಬಾ ತಮಾಷೆಯಿಂದ ಕೂಡಿತ್ತು. ಇಂಥದನ್ನೇ ಇನ್ನೂ ಹೆಚ್ಚು ಹೆಚ್ಚು ಮುಂದೆ ನೋಡುವಂತಾಗಲಿ ! ಅಭಿನಂದನೆಗಳೊಂದಿಗೆ,
    -ಸತೀಶ್‌ ತ್ಯಾಮನ ಹಳ್ಳಿ ಮತ್ತು ಶ್ರೀಮತಿ ಸತೀಶ್‌
  • ಅಲಮೇಲು, ನಿಮ್ಮ ನಾಟಕವಂತೂ ಬಹಳ ಚೆನ್ನಾಗಿತ್ತು. ನೀವು ನಿಮ್ಮನ್ನೇ ಮೀರಿಸಿ ವಿಕ್ರಮ ಸಾಧಿಸಿದಿರಿ; ನಿಮ್ಮ ಟೊಪ್ಪಿಗೆ ಇದು ಇನ್ನೊಂದು ಪುಕ್ಕ !
    - ಶುಭಾ ಮೂರ್ತಿ ಮತ್ತು ಡಾ. ಕೃಷ್ಣ ಮೂರ್ತಿ
  • ಇದೊಂದು ಬಲು ಒಳ್ಳೆಯ ಸುಖಾಂತ ನಾಟಕ (ಕಾಮೆಡಿ). ಸಂಭಾಷಣೆಗಳನ್ನು ನಾನು ತುಂಬಾ ಇಷ್ಟಪಟ್ಟೆ. ಮುಕುಟಗೀತೆ(ಟೈಟಲ್‌ ಸಾಂಗ್‌) ಅಂತೂ ಬಹಳ ಚೆನ್ನಾಗಿತ್ತು .
    - ಹೆಸರು ಇಲ್ಲ
  • ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡ ಭಾರತ ಸಂಜಾತರ (ಇಂಡಿಯಾ ಬಾರ್ನ್‌ ಕನ್ಫ್ಯೂಸ್‌ಡ್‌ ದೇಸಿಗಳ ) ಮನೆಗೆ ಭೇಟಿಕೊಟ್ಟು, ಇಲ್ಲಿ ಅಮೆರಿಕಾದಲ್ಲಿ ಹುಟ್ಟಿ ತಳಮಳಗುಡುತ್ತಿರುವ ಅವರ ಮಕ್ಕಳನ್ನು (ಅಮೆರಿಕಾ ಬಾರ್ನ್‌ ಕನ್ಫ್ಯೂಸ್‌ಡ್‌ ದೇಸಿಗಳನ್ನು) ನೋಡುತ್ತಾರಲ್ಲ, ಅಂಥ ಇಲ್ಲಿನ ವಿದೇಶವಾಸೀ ಭಾರತೀಯರ ಅಪ್ಪ ಅಮ್ಮಂದಿರು ಪಡುವ ಪಾಡನ್ನು ನೈಜವಾಗಿ ಚಿತ್ರಿಸಿರುವ ಒಂದು ನಾಟಕ ಇದು !
    - ಎಸ್‌ .ಎಸ್‌. ರಾವ್‌ [email protected]
  • ನಗಲು ಒಂದು ದೊಡ್ಡ ದಾರಿ ತೋರಿದಿರಿ !
    - ಉಮಾಮಹೇಶ್ವರ ರಾವ್‌ [email protected]
  • ಅಮೋಘವಾದ ನಾಟಕ ! ಈ ಸಂಜೆ ನಾವು ಕಳೆದ ಕಾಲ ಬಹಳ ಸೊಗಸಾಗಿತ್ತು ! ನಾವಿರುವ ಈ ಉತ್ತರ ಕ್ಯಾಲಿಫೋರ್ನಿಯಾ ಪ್ರದೇಶದ (ಬೇ ಏರಿಯಾದ) ಜನಜೀವನದ ಎಳೆಯನ್ನ ತಂತಿಯನ್ನ ಬಲು ಚೆನ್ನಾಗಿ ಮೀಟಿದಿರಿ ! ಶ್ರೀನಾಥರ ಪಾತ್ರ ಶ್ಲಾಘನೀಯವಾಗಿತ್ತು. ಮುಂದಿನ ಇಂಥದೇ ನಾಟಕವನ್ನು ಎದುರುನೋಡುತ್ತಿದ್ದೇವೆ.
    - ಹೆಸರು ಇಲ್ಲ !
  • ನಾವು ನೋಡಿದ ಎಲ್ಲ ಸುಖಾಂತ (ಕಾಮೆಡಿ) ನಾಟಕಗಳಲ್ಲಿ ಇದೊಂದು ಬಹಳ ಉತ್ತಮ ಪ್ರಯೋಗ. ಎಲ್ಲ ಪಾತ್ರಗಳೂ, ಅವರ ಅಭಿನಯವೂ ಚೆನ್ನಾಗಿದ್ದವು.
    - ರಾಜೇಂದ್ರ ಮತ್ತು ಉಷಾ .
  • ಎಲ್ಲ ಪಾತ್ರಗಳ ಕಲಾವಿದರೂ ಚೆನ್ನಾಗಿ ಅಭಿನಯಿಸಿ ಪ್ರದರ್ಶಿಸಿದ ಒಂದು ಚೊಕ್ಕ ನಗೆ ನಾಟಕ.
    - ಲೀಲಾಪ್ರಸಾದ್‌ [email protected]
  • ಒಂದು ನಗೆ ಬುಗ್ಗೆ ಚಿಮ್ಮಿದ ನಾಟಕ; ಅದರಲ್ಲೂ ನಾಗರತ್ನಳ ಅತ್ತೆಯ ಪಾತ್ರ ಬಲು ಸೊಗಸಾಗಿತ್ತು !
    - ಶ್ರೀನಿವಾಸ್‌
  • ಪ್ರಹಸನ ಚೆನ್ನಾಗೇನೋ ಇತ್ತು. ಆದರೆ, ಇವುಗಳೂ ಇದ್ದಿದ್ದರೆ ನಾಟಕ ಇನ್ನೂ ಹೆಚ್ಚು ಹಾಸ್ಯಮಯವಾಗಿ ಇರುತ್ತಿತ್ತು : 1. ಸಂಭಾಷಣೆಯಲ್ಲಿ ಸಮತೋಲನ (ಸಿಂಕ್ರೋನೈಝೇಷನ್‌). 2. ಮಾತುಕತೆ ಮತ್ತು ಆಗಮನ ನಿರ್ಗಮನಗಳಲ್ಲಿ ಸಮತೋಲನ. 3. ರಂಗಸಜ್ಜಿಕೆ (ಸ್ಟೇಜ್‌ ಕ್ರಾಫ್ಟ್‌) ನಲ್ಲಿ ಇದ್ದ ಕೊರತೆಗಳ ಕಡೆ ಗಮನ. ನನಗೆ ಅನಿಸಿದುದು ಹೀಗೆ: ನಾಟಕದ ಬೇರೆ ಬೇರೆ ಪಾತ್ರಧಾರಿಗಳೊಂದಿಗೆ ನಿರ್ದೇಶಕರು ಇನ್ನಷ್ಟು , ಇನ್ನೂ ಹೆಚ್ಚು ವಿಚಾರ ವಿನಿಮಯ ಮಾಡಬೇಕಿತ್ತೇನೋ, ಇನ್ನೂ ಸ್ವಲ್ಪ ಹೆಚ್ಚು ಅಭ್ಯಾಸ (ತಯಾರಿ) ಮಾಡಿದ್ದರೆ ಒಳ್ಳೆಯದಿತ್ತೇನೋ. ಇದು ಒಂದು ಮಾರ್ಗದರ್ಶಕ ಸಲಹೆ ಮಾತ್ರ ; ಈ ನನ್ನ ಟೀಕೆ- ಪ್ರತಿಯಾಬ್ಬ ನಟರ ಅತ್ಯುತ್ತಮ ಅಭಿನಯದಿಂದ ಕೂಡಿದ ನಾಟಕವನ್ನು ಕುರಿತು ನನ್ನ ಮೆಚ್ಚುಗೆ ಇದ್ದೇ ಇದೆಯಲ್ಲ , ಅದನ್ನೇನೂ ಕುಂಠಿತಗೊಳಿಸದು! ಸಂಘಟಕರಿಗೆ ಧನ್ಯವಾದಗಳು !
    - ಟಿ.ಎನ್‌. ಶೇಷಾದ್ರಿ [email protected]
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X