ಸನಿವೇಲ್‌ನಲ್ಲಿ ಪುರಂದರ ದಾಸರಿಗೆ ನಮನ, ಐವರು ವಿದ್ವನ್ಮಣಿಗಳಿಗೆ ಸನ್ಮಾನ !
*ಎಸ್. ಕೆ. ಹರಿಹರೇಶ್ವರ, ಸ್ಟಾಕ್‌ಟನ್, ಕ್ಯಾಲಿಫೋರ್ನಿಯಾ
ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ದಾಸವರೇಣ್ಯ ಪುರಂದರ ದಾಸರನ್ನು ಶ್ರದ್ಧಾ ಭಕ್ತಿಗಳಿಂದ ನೆನೆಸಿಕೊಳ್ಳುವುದಕ್ಕೆ ಉತ್ತರ ಕ್ಯಾಲಿಫೋರ್ನಿಯಾದ ಸಂಗೀತಾಸಕ್ತರು ಸಿದ್ಧವಾಗುತ್ತಿದ್ದಾರೆ.
ವೇದೋಪನಿಷತ್ತುಗಳ ಶ್ರುತಿ ಸ್ಮೃತಿಗಳ, ಪುರಾಣೇತಿಹಾಸಗಳ, ಜಾನಪದ ಆಖ್ಯಾನಗಳ ಸಾರಸರ್ವಸ್ವವನ್ನು ಕನ್ನಡದ ಆಡು-ನುಡಿಯಲ್ಲಿ ಸರಳವಾಗಿ ತಿಳಿ ಹೇಳುವ ಅತಿ ಸುಲಭ ಮಾರ್ಗವೊಂದನ್ನು ದೇವರನಾಮ ಕೀರ್ತನೆಗಳ ರೂಪದಲ್ಲಿ ಬಿತ್ತರಿಸಿದ ಮಹಾನುಭಾವರು ಪುರಂದರ ದಾಸರು. ಕರ್ನಾಟಕ ಸಂಗೀತ ಪದ್ಧತಿಗೆ ಭದ್ರ ಬುನಾದಿ ಹಾಕುವುದರ ಜೊತೆಗೆ, ಭಕ್ತಿಯ ಆರೋಗಣೆಯನ್ನು ವಿವಿಧ ರಾಗ-ತಾಳಗಳ ವಿನ್ಯಾಸದಲ್ಲಿ ಷಡ್ರಸೋಪೇತವಾಗಿಸಿ ವಿಠ್ಠಲನಿಗೆ ಸಮರ್ಪಿಸುವುದರ ಮೂಲಕ, ಜನರ ನಡೆ ನುಡಿ ತಿಳಿವಳಿಕೆಗಳಿಗೆ ಸಂಸ್ಕಾರ ಜಾಗೃತಿ ಪುನಶ್ಚೇತನವಿತ್ತ ಕ್ರಾಂತಿ ಪುರುಷರು ಇವರು.
ಪುರಂದರ ದಾಸರನ್ನು ನೆನೆಸಿಕೊಳ್ಳುವುದಕ್ಕೆ ಅವರ ಕೀರ್ತನೆಗಳನ್ನೇ ಹಾಡಿ, ಅಲ್ಲಿ ಅವರು ತೋರುವ ‘ದರ್ಶನ’ವನ್ನು ಕಾಣಲು ಪ್ರಯತ್ನಿಸುವುದಕ್ಕಿಂತ ಬೇರೆ ಉತ್ತಮ ಮಾರ್ಗ ಇನ್ನೇನಿದೆ ? ಇದನ್ನೇ ಉತ್ತರ ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೋ ಸುತ್ತ ಮುತ್ತಣ ಕೊಲ್ಲಿ ಪ್ರದೇಶ ಸಂಗೀತಾಭಿಮಾನಿಗಳು ಮಾಡ ಹೊರಟಿರುವುದು.
ಫೆಬ್ರವರಿ 9, 2002 ರ ಶನಿವಾರ: ಈ ದಿನದ ಪುರಂದರ ದಿನಾಚರಣೆಯಂದು ನಡೆಯಲಿರುವ ಇನ್ನೊಂದು ವಿಶಿಷ್ಟ ಗಮನಾರ್ಹ ಸಂಗತಿಯೆಂದರೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ, ಶಿಷ್ಯವರ್ಗವನ್ನು ಬೆಳಸುತ್ತಿರುವ ಇಲ್ಲಿರುವ ಐವರು ವಿದ್ವನ್ಮಣಿಗಳಿಗೆ ವಿಶೇಷ ಸನ್ಮಾನದ ಒಂದು ಸಮಾವೇಶ: ಸಂಗೀತ ವಿದ್ವಾನ್ ಪ್ರಾಧ್ಯಾಪಕ ಮೈಸೂರು ವಿ. ರಾಮರತ್ನಮ್, ವೈಣಿಕ ವಿದ್ವಾನ್ ಶ್ರೀಕಾಂತ್ ಚಾರಿ, ಸಂಗೀತ ವಿದುಷಿ ಪ್ರಾಧ್ಯಾಪಕಿ ಲಲಿತಾ ವೆಂಕಟರಾಮನ್, ಸಂಗೀತ ವಿದುಷಿ ಜಯಶ್ರೀ ವರದರಾಜನ್ ಮತ್ತು ಸಂಗೀತ ವಿದುಷಿ ವಸಂತಲಕ್ಷ್ಮಿ ಅವರುಗಳಿಗೆ ಗೌರವ ಪ್ರಶಸ್ತಿ ಸಮರ್ಪಣೆ.
ಇನ್ನಿತರ ವಿಶೇಷಾಂಶಗಳು :
- ಸನಿವೇಲ್ ಹಿಂದೂ ಮಂದಿರದವರು, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗ ಮತ್ತು ‘ ಲೋಟಸ್’ ಸಂಸ್ಥೆಯ ಸಹಯೋಗದೊಂದಿಗೆ ಈ ಪುರಂದರ ದಿನಾಚರಣೆಯನ್ನು ನಡೆಸುತ್ತಿದ್ದಾರೆ.
- ಆಬಾಲವೃದ್ಧರಾಗಿ, ಎಲ್ಲ ವಯಸ್ಸಿನ ಜನ, ಮನೆಯಲ್ಲಿ ಕನ್ನಡ ತಮಿಳು , ತೆಲಗು ಮಲೆಯಾಳಮ್, ಮರಾಠಿ, ಕೊಂಕಣಿ, ಹಿಂದಿ, ಗುಜರಾತಿ - ಮುಂತಾದ ಬೇರೆ ಬೇರೆ ಭಾಷೆಗಳನ್ನಾಡುವ ಸಂಗೀತಾಸಕ್ತರೆಲ್ಲ, ಈ ಫೆಬ್ರವರಿ 9ರ ಶನಿವಾರ ಇಲ್ಲಿನ ಸನಿವೇಲ್ ಹಿಂದೂ ಮಂದಿರ ಸಮುದಾಯ ಕೇಂದ್ರದಲ್ಲಿ ಸೇರಲಿದ್ದಾರೆ.
- ಬೆಳಗ್ಗೆ 9.30 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭ. ರಾತ್ರೆ 8.00ರ ವೇಳೆಗೆ ಕಾರ್ಯಕ್ರಮ ಮುಕ್ತಾಯ. ಒಟ್ಟು ನೂರಾ ಮೂವತ್ತೆಂಟು (138) ಮಂದಿ ಹಾಡುಗಾರರೂ ಪಕ್ಕ ವಾದ್ಯದವರೂ ಭಾಗವಹಿಸುತ್ತಿದ್ದಾರೆ.
- ಸಮಾವೇಶ 1; (ಪ್ರತಿಭಾವಂತ ಮಕ್ಕಳು ಮತ್ತು ಕಿರಿಯ ಕಲಾವಿದರ ವಿಭಾಗ): ಬೆಳಗ್ಗೆ 9.30 ರಿಂದ 10.40ರವರೆಗೆ. ಹತ್ತೊಂಬತ್ತು ಮಕ್ಕಳು ಪ್ರತ್ಯೇಕವಾಗಿ ಹಾಡುತ್ತಾರೆ. ಕಾರ್ಯಕ್ರಮ ನಿರೂಪಣೆ : ಸಂಧ್ಯಾರಾಮ್ ಕೆದಲಾಯ.
- ಸಮಾವೇಶ 2 ; ಬೆಳಗ್ಗೆ 10.45ರಿಂದ 11.00; ಪಕ್ಕವಾದ್ಯ ಇಲ್ಲದ ವೈಯಕ್ತಿಕ ಗಾಯನ ; ಐದು ಮಂದಿ ಗಾಯಕರು.
- ಸಮಾವೇಶ 3; ಬೆಳಗ್ಗೆ 11.15ರಿಂದ 12.00ರವರೆಗೆ. ವೃಂದಗಾನ(ಶೃತಿ 5.25) ಇಪ್ಪತ್ತು ಮೂರು ಮಂದಿ ಸಂಗೀತಗಾರರು.(ಶುಭಾ ನರಸಿಂಹನ್ ಪಿಟೀಲು, ವಾದಿರಾಜಭಟ್ ಮೃದಂಗ, ರಾಜೀವ್ ಸುಬ್ಬರಾವ್ ಘಟ, ಅರುಣಾಚಲಂ ಮಹಾದೇವನ್ ಮೋರ್ಸಿಂಗ್ ) ನಿರೂಪಣೆ : ಸಂಧ್ಯಾ ರಾಮ್ ಕೆದಲಾಯ.
- ಸಮಾವೇಶ 4; ಮಧ್ಯಾಹ್ನ 12.00 ರಿಂದ 12.45ರವರೆಗೆ. ವೈಯಕ್ತಿಕ ಗಾನ. (ಶೃತಿ 4.5); ಎಂಟು ಮಂದಿ ಸಂಗೀತಗಾರರು. (ಬಾಲಾಜಿ ಶ್ರೀನಿವಾಸನ್ ವಯಲಿನ್, ವಾದಿರಾಜಭಟ್ ಮೃದಂಗ) ನಿರೂಪಣೆ : ಪದ್ಮಜಾ ಕಿಶೋರ್.
ವಿಶೇಷ ಸನ್ಮಾನ ಸಮಾವೇಶ : ಸಂಗೀತ ವಿದ್ವಾನ್ ಮೈಸೂರು ವಿ. ರಾಮರತ್ನಮ್, ವೈಣಿಕ ಸಂಗೀತ ವಿದ್ವಾನ್ ಶ್ರೀಕಾಂತ್ ಚಾರಿ, ಸಂಗೀತ ವಿದುಷಿ ಲಲಿತಾ ವೆಂಕಟರಾಮನ್, ಸಂಗೀತ ವಿದುಷಿ ಜಯಶ್ರೀ ವರದರಾಜನ್ ಮತ್ತು ಸಂಗೀತ ವಿದುಷಿ ವಸಂತಲಕ್ಷ್ಮಿ ಅವರುಗಳಿಗೆ ಗೌರವ ಪ್ರಶಸ್ತಿ ಸಮರ್ಪಣೆ. ನಿರೂಪಣೆ : ಎಸ್. ಕೆ. ಹರಿಹರೇಶ್ವರ.
***
- ಸಮಾವೇಶ 5, ಭಾಗ 1 : ಮಧ್ಯಾಹ್ನ 1.05 ರಿಂದ 2.45ರವರೆಗೆ; ವೈಯಕ್ತಿಕ ಗಾನ (ಶೃತಿ 5.0) ; ಹದಿನಾರು ಮಂದಿ ಸಂಗೀತಗಾರರು. (ಆನಂದ ಕಲ್ಯಾಣರಾಮನ್ ವಯಲಿನ್, ರಾಜೀವ್ ಸುಬ್ಬರಾವ್ ಮೃದಂಗ) ನಿರೂಪಣೆ : ಪದ್ಮಜಾ ಕಿಶೋರ್.
- ಸಮಾವೇಶ 5, ಭಾಗ 2 : ಮಧ್ಯಾಹ್ನ 2.45ರಿಂದ 4.25ರವರೆಗೆ ; ವೈಯಕ್ತಿಕ ಗಾನ (ಶೃತಿ 5.0) ; ಹದಿನಾರು ಮಂದಿ ಸಂಗೀತಗಾರರು. (ಸುಶೀಲಾ ನರಸಿಂಹನ್ ವಯಲಿನ್, ರಾಮನಾಥ್ ರಾಮದಾಸ್ ಮೃದಂಗ) ನಿರೂಪಣೆ: ಸಂಧ್ಯಾ ರಾಮ್ ಕೆದಲಾಯ.
- ಸಮಾವೇಶ 6 ಭಾಗ 1 : ಮಧ್ಯಾಹ್ನ 4.30ರಿಂದ 5.15ರವರೆಗೆ; ನವರತ್ನ ಕೀರ್ತನ ಗಾನ(ಶೃತಿ 5.5) ; ಹತ್ತು ಮಂದಿ ಸಂಗೀತಗಾರರ ವೃಂದಗಾನಗಳು. (ರೂಪೇಶ್ ಎ ವಯಲಿನ್, ನಟರಾಜನ್ ಶ್ರೀನಿವಾಸನ್ ಮೃದಂಗ, ರಾಜೀವ್ ಸುಬ್ಬರಾವ್ ಘಟಮ್, ಅರುಣಾಚಲಂ ಮಹದೇವನ್ ಮೋರ್ಸಿಂಗ್) ನಿರೂಪಣೆ : ಪದ್ಮಜಾ ಕಿಶೋರ್.
- ಸಮಾವೇಶ 6, ಭಾಗ 2 : ಸಂಜೆ 5.20 ರಿಂದ 6.35ರವರೆಗೆ ; ವೈಯಕ್ತಿಕ ಗಾನ (ಶೃತಿ 5.5) ; ಹದಿನಾಲ್ಕು ಮಂದಿ ಸಂಗೀತಗಾರರು . (ರೂಪೇಶ್ ಎ ವಯಲಿನ್ , ನಟರಾಜನ್ ಶ್ರೀನಿವಾಸನ್ ಮೃದಂಗ, ರಾಜೀವ್ ಸುಬ್ಬರಾವ್ ಘಟಮ್)ನಿರೂಪಣೆ : ಪರಿಮಳಾ ಮುರಳೀಧರ್
- ಸಮಾವೇಶ 7 ; ಸಂಜೆ 6.40ರಿಂದ 715ರವರೆಗೆ; ವಾದ್ಯ ಸಂಗೀತ (ಶೃತಿ 2.5), ಆರು ಮಂದಿ ವಾದ್ಯ ಸಂಗೀತಗಾರರು. ಜಯ ನರಹರಿ, ರವಿದತ್, ರೂಪೇಶ್ ಎ, ಸುಶೀಲಾ ನರಸಿಂಹನ್- ವಯಲಿನ್; ಗಿರಿಧರ್ ಎಸ್. ತಿರುಮಲೈ ಕೊಳಲು (ಅಲೆಕ್ಸ್ ಬಾಬು ಅರುಳನಾಥ್ ತಬಲಾ; ಅರುಣಾಚಲ ಮಹಾದೇವನ್ ಮೃದಂಗ) ನಿರೂಪಣೆ: ಮೀರಾ ಮಾರ್ಗಪುರಮ್
- ಸಮಾವೇಶ 8; ಸಂಜೆ 7.15ರಿಂದ 7.55ರವರೆಗೆ ; ವೈಯಕ್ತಿಕ ಗಾನ (ಶೃತಿ 1.0) ;ಏಳು ಮಂದಿ ಸಂಗೀತಗಾರರು. (ಅಜಯ್ ನರಸಿಂಹನ್ ವಯಲಿನ್, ವಾದಿರಾಜ ಭಟ್ ಮೃದಂಗ, ರಾಮನಾಥ್ ರಾಮದಾಸ್ ಘಟಮ್, ಅಲೆಕ್ಸ್ ಬಾಬು ಅರುಳನಾಥ್ ತಬಲಾ) ನಿರೂಪಣೆ : ಪದ್ಮಜಾ ಕಿಶೋರ್.
---------
ಪ್ರವೇಶ ಉಚಿತ ; ಎಲ್ಲ ಸಂಗೀತ ಅಭಿಮಾನಿಗಳಿಗೆ ಸ್ವಾಗತ; ಕಾಲಕ್ಕೆ ಸರಿಯಾಗಿ ಸಮಾವೇಶಗಳು ಪ್ರಾರಂಭವಾಗಿ ಮುಗಿಯುವಂತೆ ನಡೆಸಲು ಕಲಾವಿದರೆಲ್ಲರೂ ದಯವಿಟ್ಟು ಸಹಕರಿಸಬೇಕು. ಇಂಗ್ಲಿಷಿನಲ್ಲಿರುವ ಹೆಚ್ಚಿನ ವಿವರಗಳಿಗೆ, ಗಾಯಕರೆಲ್ಲರ ಹೆಸರುಗಳಿಗೆ ಈ ಜಾಲ ತಾಣಕ್ಕೆ ಭೇಟಿ ಕೊಡಿ : http://www.svlotus.com
ವಿವರಗಳಿಗೆ ಸಂಪರ್ಕಿಸಿ:
ಗಜಾನನ ಜೋಶಿ : (408)734-4554 ;
ಪದ್ಮಜಾ ಕಿಶೋರ್ : (408)441-6732;
ಎಸ್. ಕೆ. ಹರಿಹರೇಶ್ವರ : (209)957-6825
ಬಿ.ವಿ. ಮುರಳೀಧರ್ [email protected] ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications