ಮುಖಪುಟ ಸಾಹಿತ್ಯ ಸೊಗಡು ಹೊಂಬೆಳಕ ಹೊನಲು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅರಳಿ ಅಮೇರಿಕೆಯಲ್ಲಿ ಘಮಘಮಿಸುತ್ತಿರುವ ಎಸ್‌.ಕೆ. ಹರಿಹರೇಶ್ವರ ಅವರದು ಅಕ್ಷರಶಃ ದಶಾವತಾರ ಪ್ರತಿಭೆ. ಪ್ರಸ್ತುತ ಸ್ಟಾಕ್‌ಟನ್‌ನಲ್ಲಿ ನೆಲೆಸಿರುವ ಅವರು ಕವಿ, ಪತ್ರಕರ್ತ, ಸಂಘಟಕರಾಗಿ ಪ್ರಸಿದ್ಧರಾದರೂ ಕನ್ನಡ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ಅವರ ಪಾತ್ರ ದೊಡ್ಡದು. 'ಅಮೆರಿಕನ್ನಡ'ದ ಮೂಲಕ ಅನೇಕ ಪ್ರತಿಭೆಗಳಿಗೆ ನೀರೆರದ ಹರಿ, ಸ್ವತಃ ಲೇಖಕರೂ ಹೌದು. ಅವರ ಹರಿತ ಲೇಖನಿ, ಕನ್ನಡ ಕಳಕಳಿ ಹಾಗೂ ಸಮೃದ್ಧ ಅನುಭವದ ಕನ್ನಡಿ 'ಹೊಂಬೆಳಕ ಹೊನಲು'.

ಮಂತ್ರ ಪುಷ್ಟ ನೀರನ್ನು ಕುರಿತು ವಿಚಾರಲಹರಿಗಳು ನೀರು ಎಂದರೇನು? ಬರಗಾಲ ಪೀಡಿತ ರಾಜ್ಯದ ಜನತೆ ಜೀವ ಎಂದಾರು! ಹೌದು, ನೀರು ನಮ್ಮನೆಲ್ಲ ಪೊರೆವ ತಾಯಿ. ನೀರಿಂದಲೆ ಹಸಿರು, ಉಸಿರು! ಇಂಥ ನೀರಿನ ನಾನಾ ಮುಖ, ಅರ್ಥ ಆಳವನ್ನು ಕುರಿತ ಎಸ್‌.ಕೆ.ಹರಿಹರೇಶ್ವರ ಅವರ ವಿಚಾರ ಲಹರಿ ಕಂತು ಕಂತಾಗಿ ಹರಿಯಲಿದೆ. ಮೊದಲ ಹನಿ ಒಪ್ಪಿಸಿಕೊಳ್ಳಿ. ಮತ್ತೆ ತೋಯಲು ಬುಧವಾರದವರೆಗೆ ಕಾಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+