Today Gold Rate: ಗ್ರಾಹಕರಿಗೆ ಗುಡ್‌ನ್ಯೂಸ್, ಸತತ 3ನೇ ದಿನವೂ ಚಿನ್ನದ ದರ ಕುಸಿತ, ಬೆಂಗಳೂರಲ್ಲಿ ಎಷ್ಟಿದೆ?

Today Gold Rate: ಚಿನ್ನಾಭರಣಪ್ರಿಯರಿಗೆ ವಾರದ ಮೊದಲ ದಿನ ಸೋಮವಾರ (ಮೇ 11) ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಕಾರಣ ಚಿನ್ನದ ಬೆಲೆಯು ಸತತವಾಗಿ ಕುಸಿಯುತ್ತಿದೆ. ಖರೀದಿದಾರರಿಗೆ ಇದೊಂದು ಸೂಕ್ತ ಕಾಲವಾಗಿದೆ. ಮತ್ತೊಂದೆಡೆ ಚಿನ್ನ ಖರೀದಿಸದಂತೆ ಪ್ರಧಾನಿಯವರೇ ಕರೆ ಕೊಟ್ಟ ಮೇಲೆ ಖರೀದಿಸಬೇಕೋ? ಬೇಡವೋ ಎಂಬ ಗೊಂದಲವು ಕೆಲವರಲ್ಲಿದೆ. ಇದರ ನಡುವೆ ಬಂಗಾರದ ಬೆಲೆ ಇಳಿಕೆ ಆಗಿದ್ದೆಷ್ಟು, ಕಾರಣಗಳು, ಬೆಂಗಳೂರು ಸೇರಿದಂತೆ ದೇಶದಲ್ಲಿ ಇಂದಿನ ಚಿನ್ನದ ಬೆಲೆ ಮಾಹಿತಿ ಇಲ್ಲಿದೆ.

ಮದುವೆ ಇನ್ನಿತರ ಸಮಾರಂಭಗಳು ಹೆಚ್ಚಿರುವ ಇಂದಿನ ಸನ್ನಿವೇಶದಲ್ಲಿ ಬಂಗಾರದ ಬೆಲೆಯು ನಿರಂತರವಾಗಿ ಕುಸಿಯುತ್ತಿದೆ. ಬೆಳ್ಳಿಯು ಕಳೆದ ಮೂರು ದಿನಗಳಿಂದ ಯಥಾಸ್ಥಿತಿಯಲ್ಲಿದ್ದು ಅಚ್ಚರಿ ಮೂಡಿಸಿದೆ. ಜಾಗತಿಕ ಕಾರಣಗಳಿಂದ 22 ಕ್ಯಾರಟ್ ಚಿನ್ನ ಹಾಗೂ 24ಕ್ಯಾರಟ್ ಚಿನ್ನದಲ್ಲಿ ಭರ್ಜರಿ ಇಳಿಕೆ ಆಗಿದೆ.

Gold Rate Today

ಸೋಮವಾರವು ಕುಸಿತ ಕಂಡ ಬಂಗಾರದ ಬೆಲೆ

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂಗೆ 200 ರೂಪಾಯಿ ಕುಸಿತ ಕಂಡು 1,39,450 ರೂಪಾಯಿ ತಲುಪಿದೆ. ಇತ್ತ 24 ಕ್ಯಾರಟ್ ಅಷ್ಟೇ ಪ್ರಮಾಣದ ಚಿನ್ನವು ಸಹಿತ 220 ರೂ.ಕುಸಿತ ಕಾಣುವ ಮೂಲಕ 1,52,130 ರೂಪಾಯಿ ಮುಟ್ಟಿದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆ ದಾಖಲಾಗಿದೆ. MCX ಮಾರುಕಟ್ಟೆಯಲ್ಲೂ ಚಿನ್ನದ ಫ್ಯೂಚರ್ಸ್ ಮತ್ತು ಬೆಳ್ಳಿಯ ದರಗಳು ಕುಸಿತ ಕಂಡಿವೆ ಎಂದು ವರದಿ ಆಗಿದೆ.

Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್, ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತ
Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್, ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತ

ನಾಲ್ಕೇ ದಿನಕ್ಕೆ 870 ರೂಪಾಯಿ ಕುಸಿತ

* 24 ಕ್ಯಾರಟ್ ಚಿನ್ನದ 10 ಗ್ರಾಂಗೆ ನಾಲ್ಕು ದಿನಗಳಲ್ಲಿ 870 ರೂಪಾಯಿ ಕುಸಿದಿದೆ.

* 22 ಕ್ಯಾರಟ್ ಚಿನ್ನದ 10 ಗ್ರಾಂಗೆ ನಾಲ್ಕು ದಿನಗಳಲ್ಲಿ 800 ರೂಪಾಯಿ ಇಳಿಕೆಯಾಗಿದೆ.

ಚಿನ್ನದ ದರ ಕುಸಿತಕ್ಕೆ ಪ್ರಮುಖ ಕಾರಣಗಳು

ಅಮೆರಿಕಾದ ಡಾಲರ್ ಮೌಲ್ಯ ಕುಸಿಯುತ್ತಿದ್ದಂತೆ ಅದರ ಪರಿಣಾಮ ಚಿನ್ನ, ಇನ್ನಿತರ ಹೂಡಿಕೆಗಳ ಮೇಲೆ ಆಗುತ್ತದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳ ಮಧ್ಯದ ಯುದ್ಧದ ಕಾರಣದಿಂದಾಗಿ ಆಮದು ಸುಂಕ, ವಿದೇಶಿ ವಿನಿಮಯ ವೆಚ್ಚ ಅಧಿಕವಾಗುತ್ತದೆ. ಮುಖ್ಯವಾಗಿ ಅಮೆರಿಕ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದರಿಂದ ಬಾಂಡ್‌ಗಳ ಮೇಲಿನ ಆದಾಯ ಏರಿಕೆ ಆಗುತ್ತದೆ. ಅಧಿಕ ಲಾಭದ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರು ಬಾಂಡ್‌ಗಳತ್ತ ವಾಲಿದ್ದಾರೆ. ಚಿನ್ನಕ್ಕಿಂತಲೂ ಅಧಿಕ ಲಾಭ ಸಿಗುವ ಕಾರಣಕ್ಕೆ ಚಿನ್ನ ಮಾರಾಟ ಮಾಡಿ ಬಾಂಡ್ ಖರೀದಿಸುತ್ತಿದ್ದಾರೆ. ಹೀಗೆ ವಿವಿಧ ಕಾರಣಗಳಿಂದ ಚಿನ್ನಕ್ಕೆ ಬೇಡಿಕೆ ಕುಸಿದು ದರ ಇಳಿಕೆ ಆಗುತ್ತಿದೆ.

20,000 ರೂ ಹೆಚ್ಚಿಸಿಕೊಂಡಿದ್ದ ಬೆಳ್ಳಿ ದರ ಇಂದು ಸ್ಥಿರ

ಮೇ 6 ರಿಂದ 8ರ ವರೆಗೆ ಒಟ್ಟು ಮೂರೇ ದಿನಕ್ಕೆ ಬರೋಬ್ಬರಿ 20,000 ರೂಪಾಯಿ ಹೆಚ್ಚಿಸಿಕೊಂಡಿದ್ದ ಬೆಳ್ಳೆಯ ದರವು ಮೇ 09ರಿಂದ ಕಳೆದ ಮೂರು ದಿನ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಳಿಕೆಯು ಆಗಿಲ್ಲ. ಏರಿಕೆಯೂ ಆಗಿಲ್ಲ. ಸದ್ಯ ಒಂದು ಕೆಜಿ ಬೆಳ್ಳಿಯ ದರವು 2,75,000 ರೂಪಾಯಿ ಇದೆ. ಮೂರು ದಿನಗಳಿಂದ ಇದೇ ಬೆಲೆಗೆ ಮಾರಾಟವಾಗುತ್ತಿದೆ. ಮಂಗಳವಾರ ಕೊಂಚ ಇಳಿಕೆ ಆಗುವ ಸಾಧ್ಯತೆಯು ಇದ್ದು, ಕಾದು ನೋಡಬೇಕಿದೆ.

ವಿವಿಧ ನಗರಗಳಲ್ಲಿ 22k ಚಿನ್ನದ ಬೆಲೆ ಎಷ್ಟಿದೆ?

ಚೆನ್ನೈ : 14,100 ರೂ.

ಮುಂಬೈ : 13,945 ರೂ.

ದೆಹಲಿ : 14,960 ರೂ.

ಕೊಲ್ಲತ್ತ : 13,945 ರೂ.

ಬೆಂಗಳೂರು : 13,945 ರೂ.

ಹೈದರಾಬಾದ್ : 13,945 ರೂ.

ಕೇರಳ : 13,945 ರೂ.

ಪುಣೆ : 13,945 ರೂ.

ಅಹಮದಾಬಾದ್ : 13,950 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+