Soft Jowar Roti Tips: ಮೃದುವಾದ ಜೋಳದ ರೊಟ್ಟಿ ಮಾಡಬೇಕಾ, ಈ ಟಿಪ್ಸ್ ಫಾಲೋ ಮಾಡಿ
Soft Jowar Roti Tips: ಜೋಳದ ರೊಟ್ಟಿ ಆರೋಗ್ಯಕರ ಮತ್ತು ಗ್ಲುಟೆನ್ ಮುಕ್ತ ಆಹಾರಗಳಲ್ಲಿ ಇದು ಒಂದು ಪ್ರಮುಖವಾದ ಆಹಾರವಾಗಿದೆ. ಆದರೆ, ಇದನ್ನು ಮೃದುವಾಗಿ ಮಾಡುವುದು ಅಷ್ಟು ಸುಲಭವಲ್ಲ. ಗೋಧಿ ಹಿಟ್ಟಿನಂತೆ ಜೋಳದ ಹಿಟ್ಟಿಗೆ ಅಂಟಿಕೊಳ್ಳುವ ಗುಣ ಇಲ್ಲದ ಕಾರಣ ಹಿಟ್ಟು ಒಡೆಯುವುದು, ರೊಟ್ಟಿ ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಆದರೆ ಸರಿಯಾದ ವಿಧಾನ ಅನುಸರಿಸಿದರೆ ಮೃದುವಾದ, ತೆಳುವಾದ ಜೋಳದ ರೊಟ್ಟಿಯನ್ನು ಸುಲಭವಾಗಿ ಮಾಡಬಹುದು.
ಜೋಳದ ರೊಟ್ಟಿಯಲ್ಲಿ ಯಾಕೆ ಬಿರುಕು ಮೂಡುತ್ತದೆ ?
ಜೋಳದ ಹಿಟ್ಟು ಹಾಕಿಸಿ ಜಾಸ್ತಿ ದಿನಗಳು ಕಳೆದಿದ್ದರೆ, ಹಿಟ್ಟನ್ನು ಚೆನ್ನಾಗಿ ಕಲೆಸದೆ (ನಾದದೆ) ಇರುವುದು ಅಥವಾ ಸರಿಯಾದ ಪ್ರಮಾಣದ ಬಿಸಿಯಾದ ನೀರು ಬಳಸದೇ ಇದ್ದರೆ, ರೊಟ್ಟಿಯಲ್ಲಿ ಬಿರುಕು ಬಿಡುತ್ತದೆ. ತುಂಬಾ ಒತ್ತಿ ಲಟ್ಟಿಸುವುದೂ ಮತ್ತೊಂದು ಕಾರಣ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಬಿಸಿ ನೀರು ಬಳಸುವುದು ಮತ್ತು ಹಿಟ್ಟನ್ನು ಮೃದುವಾಗಿ ನಾದುವುದು ಬಹಳ ಮುಖ್ಯ ಜೋಳದ ರೊಟ್ಟಿ ಮಾಡುವಲ್ಲಿ ಗಮನಿಸಬೇಕಾದ ಅಂಶಗಳಾಗಿವೆ.

ಮೃದುವಾದ ಜೋಳದ ರೊಟ್ಟಿಯ ರಹಸ್ಯವೇನು?
ಫೈಬರ್ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ
ತೂಕ ಇಳಿಕೆಗೆ ಸಹಾಯ ಮಾಡುತ್ತದೆ
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನೆರವಾಗುತ್ತದೆ
ಗ್ಲುಟೆನ್ ಮುಕ್ತ ಆಗಿರುವುದರಿಂದ ಆರೋಗ್ಯಕರ ಆಯ್ಕೆ
ಹೃದಯದ ಆರೋಗ್ಯಕ್ಕೂ ಉತ್ತಮ
ಜೋಳದ ಹಿಟ್ಟಿಗೆ ಗೋಧಿಯಂತೆ ಏಕೆ ಅಂಟಿಕೊಳ್ಳುವ ಗುಣ ಇಲ್ಲ?
ಗೋಧಿಯಲ್ಲಿ ಗ್ಲುಟೆನ್ ಇರುವುದರಿಂದ ಚಪಾತಿ ಸುಲಭವಾಗಿ ಲಟ್ಟಿಸಲು ಸಾಧ್ಯವಾಗುತ್ತದೆ. ಆದರೆ ಜೋಳದಲ್ಲಿ ಗ್ಲುಟೆನ್ ಇಲ್ಲದ ಕಾರಣ ರೊಟ್ಟಿ ಬೇಗ ಒಣಗುತ್ತದೆ ಅಥವಾ ಬಿರುಕು ಬಿಡುತ್ತದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಹಿಟ್ಟು ತಯಾರಿಸುವುದು ಮುಖ್ಯ.

ಜೋಳದ ರೊಟ್ಟಿ ಮಾಡುವ ವಿಧಾನ
* ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಬೇಕು.
* ನಂತರ ಅರ್ಧ ಚಮಚ ಉಪ್ಪು ಮತ್ತು ಸ್ವಲ್ಪ ತುಪ್ಪ ಅಥವಾ ಎಣ್ಣೆ ಸೇರಿಸಬಹುದು.
* ನಂತರ ಗ್ಯಾಸ್ ಆಫ್ ಮಾಡಿ, ಜೋಳದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಕಲೆಸಬೇಕು.
* ಒಟ್ಟಿಗೆ ಹಾಕಿದರೆ ಗಂಟು ಗಂಟು ಆಗುವ ಸಾಧ್ಯತೆ ಇರುತ್ತದೆ. ಹಿಟ್ಟು ಸ್ವಲ್ಪ ಅಂಟಿಕೊಳ್ಳುವಂತಿದ್ದರೂ ಪರವಾಗಿಲ್ಲ.
* ಬಳಿಕ ಚಪಾತಿ ಮಾಡುವಾಗ ಮಾಡುವಷ್ಟು ಸಣ್ಣ ಉಂಡೆಯನ್ನು ಮಾಡಿಕೊಂಡು ಅದಕ್ಕೆ ಒಣ ಹಿಟ್ಟು ಹಚ್ಚಿ ತಟ್ಟಬೇಕು.
*ಸಣ್ಣ ಉಂಡೆಯನ್ನು ತಟ್ಟುತ್ತಲೇ ತಿರುಗಿಸಬೇಕು. ಹೀಗೆ ಮಾಡುವುದರಿಂದ ರೊಟ್ಟಿ ಅಗಲವಾಗುತ್ತದೆ. ಜೊತೆಗೆ ಅಂಟಿಕೊಳ್ಳುವುದಿಲ್ಲ.
ತದನಂತರ ಪಾತ್ರೆಯನ್ನು ಮುಚ್ಚಿ ಕೆಲವು ನಿಮಿಷ ಬಿಟ್ಟು, ಕೈ ಹಿಡಿಯುವಷ್ಟು ಬಿಸಿ ಇರುವಾಗ ಚೆನ್ನಾಗಿ ನಾದಬೇಕು. ಹಿಟ್ಟು ಮೃದುವಾಗಿದ್ದರೆ ರೊಟ್ಟಿ ಸುಲಭವಾಗಿ ಲಟ್ಟಿಸಬಹುದು.
ರೊಟ್ಟಿ ಮೃದುವಾಗಿಸಲು ಸುಲಭ ವಿಧಾನ ಅನುಸರಿಸಿ
ಯಾವಾಗಲೂ ಬಿಸಿ ನೀರನ್ನೇ ಬಳಸಬೇಕಾಗುತ್ತದೆ
ಹಿಟ್ಟನ್ನು ಚೆನ್ನಾಗಿ ನಾದಬೇಕು
ರೊಟ್ಟಿ ಲಟ್ಟಿಸುವಾಗ ನಿಧಾನವಾಗಿ ಒತ್ತಿ
ಪ್ರಾರಂಭದಲ್ಲಿ ಕಲಿಯುತಿದ್ದರೆ ಪ್ಲಾಸ್ಟಿಕ್ ಶೀಟ್ ಬಳಸಿ ಲಟ್ಟಿಸಬಹುದು
ಮಧ್ಯಮ ಉರಿಯಲ್ಲಿ ಬೇಯಿಸಿದರೆ ರೊಟ್ಟಿ ಸಾಫ್ಟ್ ಆಗಿರುತ್ತದೆ
ಜೋಳದ ರೊಟ್ಟಿಗೆ ಯಾವ ಪಲ್ಯ ಬೆಸ್ಟ್?
ಜೋಳದ ರೊಟ್ಟಿಯನ್ನು ಬೆಳ್ಳುಳ್ಳಿ ಚಟ್ನಿ, ಮೊಸರು, ಹೆಸರುಕಾಳು ಪಲ್ಯ, ಮೊಳಕೆ ಕಾಳು ಪಲ್ಯ ಅಥವಾ ಬದನೆಕಾಯಿ ಪಲ್ಯ ಜೊತೆಗೆ ತಿಂದರೆ ರುಚಿಯು ಅದ್ಬುತವಾಗಿರುತ್ತದೆ. ಸರಿಯಾದ ವಿಧಾನದಲ್ಲಿ ಮಾಡಿದ ಜೋಳದ ರೊಟ್ಟಿ ಕಾಟನ್ ತರ ಮೃದುವಾಗಿದ್ದು, ಆರೋಗ್ಯಕ್ಕೂ ಅತ್ಯುತ್ತಮ ಆಹಾರವಾಗುತ್ತದೆ.














Click it and Unblock the Notifications