Gold: ಇನ್ನೊಂದು ವರ್ಷ ನೀವು ಚಿನ್ನ ಖರೀದಿ ಮಾಡಬಾರದೇ: ನೀವು ತಿಳಿಯಬೇಕಾದ 5 ವಿಷಯಗಳು

Gold: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಂದು ವರ್ಷದ ಅವಧಿಯ ವರೆಗೆ ಭಾರತೀಯರು ಚಿನ್ನ ಖರೀದಿ ಮಾಡಬೇಡಿ ಅಂತ ಹೇಳಿದ್ದಾರೆ. ಇರಾನ್-ಅಮೆರಿಕ ಯುದ್ಧದ ಆರ್ಥಿಕ ಪರಿಣಾಮಗಳು ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆಗಳೊಂದಿಗೆ ದೇಶವು ಹೋರಾಡುತ್ತಿದೆ. ಹೀಗಾಗಿ, ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವುದನ್ನು ತಪ್ಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಾಗೂ ಇರಾನ್ - ಅಮೆರಿಕಾ, ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧವು ಯಾವ ರೀತಿ ಭಾರತೀಯ ಚಿನ್ನದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನುವ ವಿವರ ಈ ಲೇಖನದಲ್ಲಿದೆ.

ಚಿನ್ನದ ಮಾರುಕಟ್ಟೆಯಲ್ಲಿ ಎರಡು ವಿಧಗಳಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಹೂಡಿಕೆಯ ಚಿನ್ನದ ಮೇಲೆ ಮಾತ್ರ. ಹಾಗಾದರೆ ಹೂಡಿಕೆ ಅಥವಾ ಬಂಡವಾಳ ಚಿನ್ನ ಎಂದರೇನು ಹಾಗೂ ಬಳಕೆಯ ಚಿನ್ನಾಭರಣ ಎಂದರೇನು. ಮುಂದಿನ ದಿನಗಳಲ್ಲಿ ಭಾರತದಲ್ಲಿ ಚಿನ್ನಾಭರಣ ಬೆಲೆ ಹೆಚ್ಚಳವಾಗಲಿದೆಯೇ ಅದರ ಸಂಪೂರ್ಣ ವಿವರ ಇಲ್ಲಿದೆ.

Gold Price Boom

1. ಚಿನ್ನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದೇನು

ಭಾರತೀಯರಿಗೆ ಮುಂದಿನ ಒಂದು ವರ್ಷದ ಅವಧಿಗೆ ಹೂಡಿಕೆಯ ಚಿನ್ನವನ್ನು ಖರೀದಿ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಿದೇಶಿ ವಿನಿಮಯ ಅಥವಾ ಡಾಲರ್ ವಹಿವಾಟು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದೇ ಆಗಿದೆ. ಇರಾನ್ - ಅಮೆರಿಕ, ಇಸ್ರೇಲ್ ದೇಶಗಳ ನಡುವಿನ ಯುದ್ಧವು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು ವಾರಗಳವರೆಗೆ ಭಾಗಶಃ ಅಸ್ತವ್ಯಸ್ತಗೊಳಿಸಿದೆ. ಇದು ದೀರ್ಘಕಾಲದ ಕಚ್ಚಾ ತೈಲ ಪೂರೈಕೆ ಕೊರತೆಯ ಭಯವನ್ನು ಮಾತ್ರವಲ್ಲ ಚಿನ್ನದ ಮೇಲೆಯೂ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿ ಮಾಡಿದೆ.

ಇಂಧನ ಮಿತ ಬಳಕೆ, ಚಿನ್ನ ಖರೀದಿಸದಂತೆ ನರೇಂದ್ರ ಮೋದಿ ಕರೆ: ಇದರ ಹಿಂದಿನ ಉದ್ದೇಶವೇನು?
ಇಂಧನ ಮಿತ ಬಳಕೆ, ಚಿನ್ನ ಖರೀದಿಸದಂತೆ ನರೇಂದ್ರ ಮೋದಿ ಕರೆ: ಇದರ ಹಿಂದಿನ ಉದ್ದೇಶವೇನು?

2. ಬಳಕೆಯ ಚಿನ್ನ ಖರೀದಿಯ ಮೇಲೆ ಯಾವುದೇ ಪರಿಣಾಮ ಇಲ್ಲ: ಟಿ.ಎ. ಶರವಣ

ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ಬಂಡವಾಳ ಚಿನ್ನದ ಹೂಡಿಕೆಯ ಬಗ್ಗೆ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಗಟ್ಟಿ ಚಿನ್ನ, ಗೋಲ್ಡ್‌ ಬಾರ್, ಗೋಲ್ಡ್‌ ಕಾಯಿನ್ಸ್‌ ಹಾಗೂ ಗೋಲ್ಡ್‌ ಬಿಸ್ಕೆಟ್ಸ್‌ ಇರುತ್ತವೆ. ಇದನ್ನು ಜಾಸ್ತಿ ಬಳಕೆ ಮಾಡುವುದು ಬೇಡ ಎನ್ನುವುದು ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಆದರೆ ಆಭರಣ ಚಿನ್ನ ಎನ್ನುವುದು ಬೇರೆ ಇದು ಸಾಮಾನ್ಯವಾಗಿ ಜನ ವಿಶೇಷ ಕಾರ್ಯಕ್ರಮಗಳಿಗೆ ಹಾಗೂ ನಿತ್ಯ ಬಳಕೆಗೆ ಬಳಸುವ ಚಿನ್ನ ಈ ಚಿನ್ನಾಭರಣಗಳನ್ನು ಖರೀದಿ ಮಾಡುವುದರ ಮೇಲೆ ಯಾವುದೇ ಪರಿಣಮ ಬೀರುವ ಸಾಧ್ಯತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿರುವ ಟಿ.ಎ. ಶರವಣ ಅವರು ಹೇಳಿದ್ದಾರೆ. ಸಾಮಾನ್ಯ ಬಳಕೆಯ ಚಿನ್ನವನ್ನು ವಿವಿಧ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಅನಿವಾರ್ಯತೆ ಇರುತ್ತದೆ. ಹೀಗಾಗಿ, 22 ಕ್ಯಾರೆಟ್ ಚಿನ್ನವನ್ನು ಅವಶ್ಯಕತೆಗೆ ಅನುಗುಣವಾಗಿ ಖರೀದಿ ಮಾಡಬಹುದು ಎಂದು ಟಿ.ಎ. ಶರವಣ ಅವರು ಅಭಿಪ್ರಾಯಪಟ್ಟಿದ್ದಾರೆ.

3. ಮುಂದಿನ ದಿನಗಳಲ್ಲಿ ಚಿನ್ನ - ಬೆಳ್ಳಿ ಬೆಲೆ ಏರಿಕೆ ಆಗಲಿದೆಯೇ

ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಲಿದೆಯೇ ಎನ್ನುವುದು ಈಗ ಎದುರಾಗಿರುವ ಯಕ್ಷ ಪ್ರಶ್ನೆಯಾಗಿದೆ. ಇರಾನ್ - ಅಮೆರಿಕದ ನಡುವೆ ದೀರ್ಘಕಾಲದ ಯುದ್ಧವು ಭೌಗೋಳಿಕವಾಗಿ ಅನಿಶ್ಚಿತತೆ ಸೃಷ್ಟಿ ಮಾಡಿದೆ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದ್ದು. ಸಹಜವಾಗಿಯೇ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರದಲ್ಲಿ ನಿಖರೆ ಇಲ್ಲ.

ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮಿತವ್ಯಯದ ಕರೆ: ಇದು ಸರ್ಕಾರದ ವೈಫಲ್ಯಕ್ಕೆ ಪುರಾವೆಗಳು ಎಂದ ರಾಹುಲ್‌ ಗಾಂಧಿ
ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮಿತವ್ಯಯದ ಕರೆ: ಇದು ಸರ್ಕಾರದ ವೈಫಲ್ಯಕ್ಕೆ ಪುರಾವೆಗಳು ಎಂದ ರಾಹುಲ್‌ ಗಾಂಧಿ

4. ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಕಡಿಮೆ ಮಾಡಿದರೆ ಚಿನ್ನದ ಬೆಲೆ ಇಳಿಕೆ

ಇನ್ನು ಚಿನ್ನದ ಬೆಲೆ ಇಳಿಕೆ ಹಾಗೂ ಹೆಚ್ಚಳ ಮಾಡುವ ಆಯ್ಕೆಯು ಭಾರತ ಸರ್ಕಾರದ ಕೈಯಲ್ಲಿ ಇಲ್ಲ. ಚಿನ್ನದ ಬೆಲೆ ಏರಿಕೆ ಹಾಗೂ ಇಳಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ ಮಾಡಿದರೆ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. 2026ರ ಮೇ ತಿಂಗಳಿನ ಸುಂಕವನ್ನು ನೋಡುವುದಾದರೆ, ಚಿನ್ನದ ಆಮದಿನ ಮೇಲಿನ ಕೇಂದ್ರ ಸರ್ಕಾರದ ಕಸ್ಟಮ್ಸ್ ಸುಂಕವು 6% ಆಗಿದೆ. ಇದರಲ್ಲಿ 5% ಮೂಲ ಕಸ್ಟಮ್ಸ್ ಸುಂಕ (BCD) ಮತ್ತು 1% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಸೇರಿವೆ. ಈ ದರವು ಹೆಚ್ಚಿನ ವಾಣಿಜ್ಯ ಆಮದುಗಳಿಗೆ ಅನ್ವಯಿಸುತ್ತದೆ. ಇದನ್ನು ಕಡಿಮೆ ಮಾಡಬೇಕು ಎಂದು ಚಿನ್ನಾಭರಣ ಮಳಿಗೆಗಳ ಮಾಲೀಕರು ಹಾಗೂ ಕೆಲವು ಚಿನ್ನ ಪ್ರಿಯರು ಸಹ ಒತ್ತಾಯಿಸುತ್ತಿದ್ದಾರೆ.

5. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಚಿನ್ನ ಖರೀದಿ ಬೇಡ ಎಂದ ಪ್ರಧಾನಿ ಮೋದಿ

ಇನ್ನು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹೂಡಿಕೆಯ ಚಿನ್ನವನ್ನು ಮುಂದಿನ ಕನಿಷ್ಠ ಒಂದು ವರ್ಷದ ಅವಧಿಗೆ ಖರೀದಿ ಮಾಡಬೇಡಿ ಅಂತ ಹೇಳಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಆಮದು ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಹೀಗಾಗಿ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಮೋದಿ ಭಾರತೀಯರಿಗೆ ಮನವಿ ಮಾಡಿದ್ದಾರೆ. ಚಿನ್ನದ ಖರೀದಿಯು ವಿದೇಶಿ ವಿನಿಮಯವನ್ನು ವ್ಯಾಪಕವಾಗಿ ಬಳಸುವ ಮತ್ತೊಂದು ಕ್ಷೇತ್ರವಾಗಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ, ನಾವು ಒಂದು ವರ್ಷ ಚಿನ್ನವನ್ನು ಖರೀದಿಸದಿರಲು ಸಂಕಲ್ಪ ಮಾಡಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+