CBSE Results 2026: ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುಗಡೆ ಅಪ್ಡೇಟ್ಸ್, ಇಲ್ಲಿವೆ ಲಿಂಕ್ಸ್

ನವದೆಹಲಿ: ದೇಶಾದ್ಯಂತ ಸಾವಿರಾರು ಕೇಂದ್ರಗಳಲ್ಲಿ 12ನೇ ತರಗತಿ 2026 ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಬಿಡುಗಡೆ ಮಾಡಲಿರುವ ಪಲಿತಾಂಶ ವೀಕ್ಷಣೆಗೆ ಕಾಯುತ್ತಿದ್ದಾರೆ. ಅವರ ಕುತೂಹಲಕ್ಕೆ ಇನ್ನೊಂದು ವಾರದಲ್ಲಿ ತೆರೆ ಬೀಳುವ ಸಾಧ್ಯತೆ ಇದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಾರ್ಷಿಕ ಪರೀಕ್ಷೆ ಬರೆದ ಭಾರತದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇದರ ಆಧಾರದಲ್ಲಿ ಮುಂದಿನ ಕಾಲೇಜು, ತೆಗೆದುಕೊಳ್ಳುವ ಕೋರ್ಸ್‌ಗಳನ್ನು ನಿರ್ಧರಿಸಲು ಪೋಷಕರು ಹೆಚ್ಚು ತಲೆಕೆಸಿಕೊಂಡಿದ್ದಾರೆ. ಮೇ ಮೂರನೇ ವಾರದ ಹೊತ್ತಿಗೆ ಅಥವಾ ಅದಕ್ಕು ಮುನ್ನವೇ CBSE 12ನೇ ತರಗತಿಯ ಫಲಿತಾಂಶ 2026 ಬಿಡುಗಡೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಂತೆ ಆನ್‌ಲೈನ್‌ನ ವಿವಿಧ ವೇದಿಕೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

CBSE Class 12 Results 2026

120 ವಿಷಯಗಳಿಗೆ ಮೇಲೆ ಸಿಬಿಎಸ್‌ಇ ಪರೀಕ್ಷೆ

ಪ್ರಸ್ತಕ ವರ್ಷ ದೇಶಾದ್ಯಂತ 7,574 ಕೇಂದ್ರಗಳಲ್ಲಿ ನಡೆದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ (CBSE) 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲಾಯಿತು. ಎಲ್ಲಿಯೂ ಅಹಿತಕರ ಘಟನೆಗಳು ವರದಿ ಆಗಿಲ್ಲ. ಫೆಬ್ರವರಿ 17 ಮತ್ತು ಏಪ್ರಿಲ್ 10ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದವು. ಒಟ್ಟು ಸುಮಾರು 18,59,551 ವಿದ್ಯಾರ್ಥಿಗಳು ಒಟ್ಟು 120 ವಿಷಯಗಳಿಗೆ ಮೇಲೆ ಪರೀಕ್ಷೆಗಳನ್ನು ಎದುರಿಸಿದ್ದರು ಎಂದು ಮಂಡಳಿ ತಿಳಿಸಿದೆ.

ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ: ಮಧು ಬಂಗಾರಪ್ಪ ಅಪ್ಡೇಟ್ಸ್‌
ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿ: ಮಧು ಬಂಗಾರಪ್ಪ ಅಪ್ಡೇಟ್ಸ್‌

ಅಂತಿಮ ಹಂತದಲ್ಲಿದೆ ಮೌಲ್ಯಮಾಪನ

ಸಿಬಿಎಸ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಪೈಕಿ 10,27,552 ವಿದ್ಯಾರ್ಥಿಗಳು ಮತ್ತು 8,31,999 ವಿದ್ಯಾರ್ಥಿನಿಯರು ಇದ್ದಾರೆ. ಅವರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಫಲಿತಾಂಶ ಬಿಡುಗಡೆ, ಅದರ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ತುದಿಗಾಲಿಯಲ್ಲಿ ನಿಂತಿದ್ದಾರೆ. ಪೋಷಕರು ಮಕ್ಕಳ ಭವಿಷ್ಯ, ಕಾಲೇಜು, ಕೋರ್ಸ್ ಸೇರ್ಪಡೆ, ಶುಲ್ಕದ ಬಗ್ಗೆ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.

ಮೇ 3ನೇ ವಾರ ಫಲಿತಾಂಶ ಪ್ರಕಟ

CBSE ಹತ್ತನೇ ತರಗತಿ ಪರೀಕ್ಷೆಗಳನ್ನು ನಿರೀಕ್ಷೆಯಂತೆ ಮತ್ತು ಹಿಂದಿನ ವರ್ಷದಂತೆ ಏಪ್ರಿಲ್‌ನಲ್ಲಿ ಘೋಷಿಸಲಾಗಿತ್ತು. ಅದೇ ರೀತಿ 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಿಸುವ ದಿನಾಂಕ ದೃಢೀಕರಿಸದಿದ್ದರೂ, ಹಿಂದಿನ ವರ್ಷಗಳ ಪ್ರವೃತ್ತಿ ಆಧಾರದ ಮೇಲೆ ಮೇ ಮೂರನೇ ವಾರದ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ.

ಫಲಿತಾಂಶ ನೋಡಲು ಹೀಗೆ ಮಾಡಿ, ಇಲ್ಲಿವೆ ಲಿಂಕ್

ಸಿಬಿಎಸ್‌ಇ ಫಲಿತಾಂಶ ಘೋಷಿಸುತ್ತಿದ್ದಂತೆ ವಿದ್ಯಾರ್ಥಿಗಳು ಬೋರ್ಡ್‌ನ ಅಧಿಕೃತ ಜಾಲತಾಣ cbseresults.nic.in ಮತ್ತು results.cbse.nic.in ಗೆ ಭೇಟಿ ನೀಡಬೇಕು. ಇದರೊಂದಿಗೆ DigiLocker ಮತ್ತು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿನ CBSE 12 Exam Results 2026 ವಿಭಾಗದಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಜನ್ಮದಿನಾಂಕ ಸೇರಿ ಅಗತ್ಯ ಮಾಹಿತಿ ನಮೂದಿಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

Today Gold Rate: ಗ್ರಾಹಕರಿಗೆ ಗುಡ್‌ನ್ಯೂಸ್, ಸತತ 3ನೇ ದಿನವೂ ಚಿನ್ನದ ದರ ಕುಸಿತ, ಬೆಂಗಳೂರಲ್ಲಿ ಎಷ್ಟಿದೆ?
Today Gold Rate: ಗ್ರಾಹಕರಿಗೆ ಗುಡ್‌ನ್ಯೂಸ್, ಸತತ 3ನೇ ದಿನವೂ ಚಿನ್ನದ ದರ ಕುಸಿತ, ಬೆಂಗಳೂರಲ್ಲಿ ಎಷ್ಟಿದೆ?

ಆನ್‌ಲೈನ್ ಮೂಲಕ ಸಿಬಿಎಸ್‌ಇ ತಾತ್ಕಾಲಿಕ ಫಲಿತಾಂಶ ಡೌನ್‌ಲೋಡ್ ಮಾಡುವ ವಿದ್ಯಾರ್ಥಿಗಳು ತಮ್ಮ ಮುಂದಿನ ಕೋರ್ಸ್, ಕಾಲೇಜು ಪ್ರವೇಶ, ಇನ್ನಿತರ ಶೈಕ್ಷಣಿಕ ಉದ್ದೇಶಗಳಿಗಾಗಿ ಅದನ್ನು ಬಳಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+