ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಗುರುವಿಗೆ ದೇಶ ವಿದೇಶಗಳಲ್ಲಿ ಶಿಷ್ಯರು

By Staff
|
Google Oneindia Kannada News

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಈ ಪ್ರಕಾಂಡ ಪಂಡಿತರನ್ನು ಗುರುವಾಗಿ ಅರಸಿಕೊಂಡು ಬಂದ ಭಾರತದ ಮತ್ತು ವಿದೇಶಗಳ ಶಿಷ್ಯರ ಪಟ್ಟಿ (ಅಮೆರಿಕಾದ ಎಡ್ವಿನ್‌ ಗೆರೋವ್‌ ಮತ್ತು ಈಗ ಜರ್ಮನಿಯಲ್ಲಿ ಕನ್ನಡ ಪಾಠ ಹೇಳಿಕೊಡುತ್ತಿರುವ, ನೆದರ್‌ಲ್ಯಾಂಡ್‌ನ ರಾಬರ್ಟ್‌ ಜೈಡೆನ್ಬೋಸ್‌ ಇದರಲ್ಲಿ ಸೇರಿ, ಪಟ್ಟಿ) ಬಲು ದೊಡ್ಡದು.

ಜಡಭರತರ ‘ಸತ್ತವರ ನೆರಳು’ ನಾಟಕದಲ್ಲಿ ಬರುವ ಸಂಸ್ಕೃತ- ಸಂಭಾಷಣೆಯ ಭಾಗವನ್ನು ಬರೆದವರು. ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಬನ್ನಂಜೆಯವರು. ಜಿ.ವಿ. ಅಯ್ಯರ್‌ ಅವರು ಶ್ರೀ ಶಂಕರಾಚಾರ್ಯ, ಶ್ರೀ ಮಧ್ವಾಚಾರ್ಯ ಮುಂತಾದ ಅಪೂರ್ವ ಚಲನ ಚಿತ್ರಗಳನ್ನು ದಿಗ್ದರ್ಶಿಸಿದಾಗ ಅದರಲ್ಲಿನ ಸಂಸ್ಕೃತ ಸಂಭಾಷಣೆಯ ಪೂರ್ಣ ಹೊಣೆ ಹೊತ್ತವರೂ ಬನ್ನಂಜೆಯವರೇ.

ಪ್ರತಿಭೆ- ಪಾಂಡಿತ್ಯವಿದ್ದಲ್ಲಿ ಪ್ರಶಸ್ತಿಗಳಿಗೇನು ಕೊರತೆ !
ಬನ್ನಂಜೆಯವರನ್ನು ಹುಡುಕಿಕೊಂಡು ಬಂದು ಅವರನ್ನು ಅಲಂಕರಿಸಿದ ಪ್ರಶಸ್ತಿಗಳೂ ಅಪಾರ: ಪಂಡಿತರತ್ನ, ಪಂಡಿತ ಶಿರೋಮಣಿ, ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ, ಪ್ರತಿಭಾಂಬುಧಿ, ಶಾಸ್ತ್ರ ಸವ್ಯಸಾಚಿ, ಸಾಹಿತ್ಯ ಸಾರ್ವಭೌಮ, ಸಂಶೋಧನ ವಿಚಕ್ಷಣ-ರೆನಿಸಿ ಪುರಸ್ಕೃತರಾಗಿ, ಭಾರತದ ಹಲವೆಡೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗೋಷ್ಠಿಗಳ ಪರಿಷತ್ತುಗಳ ಸಮಾವೇಶಗಳ ಅಧ್ಯಕ್ಷತೆ ವಹಿಸಿದ ಇವರು ಕರ್ನಾಟಕ ರಾಜ್ಯ ಮತ್ತು ಭಾರತ ರಾಷ್ಟ್ರದ ಸನ್ಮಾನಿತರು.

Bannanje Govindacharya1979ರಲ್ಲಿ ಅಮೆರಿಕಾದ ನ್ಯೂಜೆರ್ಸಿ ಪ್ರದೇಶದ ಪ್ರಿನ್ಸ್‌ಟನ್‌ನಲ್ಲಿ ಜರುಗಿದ ಜಾಗತಿಕ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದವರು. ಇಪ್ಪತ್ತೆರಡು ವರ್ಷಗಳ ತರುವಾಯ ಮತ್ತೆ ಇತ್ತ ಬರುತ್ತಿದ್ದಾರೆ, ನಮ್ಮ ಬನ್ನಂಜೆಯವರು.

ಬನ್ನಿ, ಅವರನ್ನ ನಾವೆಲ್ಲ ಸ್ವಾಗತಿಸೋಣ. ಅವರ ಕಾಲಾವಕಾಶ, ಅನುಕೂಲ, ಸೌಕರ್ಯಗಳನ್ನು ಗಮನದಲ್ಲಿರಿಸಿಕೊಂಡು, ಅವರನ್ನು ನಮ್ಮ ನಮ್ಮ ಊರುಗಳಿಗೆ ಬರಮಾಡಿಕೊಂಡು, ಅವರ ವಿದ್ವತ್‌ಪೂರ್ಣ ಸ್ವಾರಸ್ಯಮಯ ಕನ್ನಡ (ಮತ್ತು ಸಂಸ್ಕೃತ)ಪ್ರವಚನಗಳನ್ನು ಕೇಳಿ ಆನಂದಿಸೋಣ; ಬನ್ನಂಜೆ ಗೋವಿಂದಾಚಾರ್ಯರ ಜ್ಞಾನ ಯಜ್ಞದಲ್ಲಿ ನಾವೂ ಪಾಲ್ಗೊಳ್ಳೋಣ!

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -

ಪಿ.ಆರ್‌. ಮುಕುಂದ (716) 264-9433 [email protected]
ಸೀತಾರಾಮ್‌ಭಟ್‌ - (718)526-3163 [email protected]
ವಾಸು ಮೂರ್ತಿ- (301)838-5585 [email protected]
ಕೆ. ಮುರಳೀಧರ (248)348-6857 [email protected]
ಬಿ. ಗೋಪಾಲ ಕೃಷ್ಣ - (408)737- 1516 [email protected]
ಎಸ್‌. ಕೆ. ಹರಿಹರೇಶ್ವರ - (209)957-6825 [email protected]


What do you think about this article?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X