ಉಪಾಸನಾ ರಾಮ್‌ಚರಣ್ ಡೆಲಿವರಿ ಡೇಟ್ ಫಿಕ್ಸ್; ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ!
ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮನೆಗೆ ಮತ್ತೆ ಹೊಸ ಅತಿಥಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಉಪಾಸನಾ ಅವಳಿ ಮಕ್ಕಳ ಗರ್ಭಿಣಿಯಾಗಿದ್ದು ಇನ್ನೆರಡು 2 ದಿನಗಳಲ್ಲಿ ಹೆರಿಗೆ ಆಗಲಿದೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ನಡೀತಿದೆ. ಇದು ಮೆಗಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಎರಡೂವರೆ ವರ್ಷಗಳ ಹಿಂದೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಆದರೆ ಈವರೆಗೆ ಮಗಳ ಫೋಟೊವನ್ನು ರಿವೀಲ್ ಮಾಡಿಲ್ಲ. ಕೆಲವೇ ತಿಂಗಳ ಹಿಂದೆ ಉಪಾಸನಾ ಮತ್ತೆ ಗರ್ಭಿಣಿ ಆಗಿದ್ದಾರೆ. ಈ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ಈ ವಿಚಾರವನ್ನು ದಂಪತಿ ಬಹಿರಂಗಪಡಿಸಿದ್ದರು. ಜನವರಿ 31ರಂದು ಉಪಾಸನಾಗೆ ಡೆಲಿವರಿ ಡೇಟ್ ಕೊಟ್ಟಿರುವುದಾಗಿ ವರದಿಯಾಗಿದೆ. ಮೆಗಾ ವಾರಸ್ದಾರರು ಬರ್ತಾರೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ 'ಬ್ರಹ್ಮಾಆನಂದಂ' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಲಿಂಗ ತಾರತಮ್ಯದ ಬಗ್ಗೆ ನಟ ಚಿರಂಜೀವಿ ಆಡಿದ್ದ ಮಾತುಗಳು ವೈರಲ್ ಆಗಿತ್ತು. ನಮ್ಮ ಮನೆಯ ತುಂಬಾ ಹೆಣ್ಣುಮಕ್ಕಳು. ನಮ್ಮ ವಂಶವನ್ನು ಉದ್ಧಾರ ಮಾಡಲು ಮನೆಗೊಬ್ಬ ಮೊಮ್ಮಗ ಬೇಕಿತ್ತು ಎಂದು ಚಿರಂಜೀವಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಚಿರಂಜೀವಿ ರೀತಿಯ ಜನಪ್ರಿಯ ನಟರೊಬ್ಬರು ಇಂತಹ ಹೇಳಿಕೆ ನೀಡುವುದು ತಪ್ಪಾಗುತ್ತದೆ ಎಂದು ಕೆಲವರ ಬೇಸರ ವ್ಯಕ್ತಪಡಿಸಿದ್ದರು. ಅವರು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ, ಅದು ಬಿಟ್ಟು ತಪ್ಪಾಗಿ ಏನು ಹೇಳಿಲ್ಲ ಎಂದು ಕೆಲವರು ಚಿರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ವೇದಿಕೆಯಲ್ಲಿ ಮೊಮ್ಮಗಳ ಜೊತೆ ಚಿರಂಜೀವಿ ಇರುವ ಫೋಟೊ ಪ್ರದರ್ಶಿಸಲಾಯಿತು. ಇದನ್ನು ನೋಡಿ ಅವರು ಮಾತನಾಡಿದ್ದರು. "ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್ ವಾರ್ಡನ್ ತರ ಭಾಸವಾಗುತ್ತದೆ, ಸುತ್ತಾ ಹೆಣ್ಣು ಮಕ್ಕಳೇ. ಚರಣ್ ಈ ಬಾರಿ ಒಂದು ಗಂಡು ಮಗು ಬೇಕು ಕಣೋ, ನಮ್ಮ ಲೆಗಸಿ ಮುಂದುವರೆಯಬೇಕು. ಕ್ಲಿಂಕಾರ ಅಂದ್ರೆ ಬಹಳ ಮುದ್ದು, ಆದರೆ ಚರಣ್‌ಗೆ ಮತ್ತೊಂದು ಹೆಣ್ಣು ಆಗುತ್ತಾ ಎಂದು ಭಯ ಕಾಡುತ್ತಿದೆ" ಎಂದು ನಕ್ಕು ಸುಮ್ಮನಾಗಿದ್ದಾರೆ.
Upasana Kamineni Konidela and Ram Charan to Welcome Twins Soon, Parents Give Glimpses into their Intimate Baby Shower Ceremony
— Tupaki (@tupaki_official) October 23, 2025
Upasana Kamineni Konidela and Ram Charan have embarked on exciting new chapters of their lives this Diwali! The couple is all set to welcome twins soon,… pic.twitter.com/Pw3i0ohlQo
ಅಪೋಲೊ ಸಮೂಹದ ಸ್ಥಾಪಕ ಡಾ. ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ. ಆಕೆ ಕೂಡ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ನ ಉಪಾಧ್ಯಕ್ಷೆ ಮತ್ತು ಅಪೋಲೊ ಲೈಫ್‌ನ ಎಂಡಿ ಆಗಿ ಗುರ್ತಿಸಿಕೊಂಡಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮೊದಲ ಮಗುವಿಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆ ಉಪಾಸನಾ ಬಹಿರಂಗವಾಗಿ ಮಾತನಾಡಿದ್ದರು.
ಮದುವೆ, ಮಕ್ಕಳು ಎಂದು ಆತುರ ಪಡುವುದು ಬೇಡ ಮೊದಲು ಕರಿಯರ್ ಕಡೆ ಗಮನ ಹರಿಸಿ ಎಂದು ಕೆಲ ದಿನಗಳ ಉಪಾಸನಾ ಸಂದೇಶ ನೀಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು. ಹೈದರಾಬಾದ್ ಐಐಟಿ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಈ ಹೇಳಿಕೆ ಕೊಟ್ಟಿದ್ದರು. "ಮೊದಲು ನಿಮ್ಮ ಕಾಲಮೇಲೆ ನೀವು ನಿಲ್ಲಬೇಕು, ಆ ಬಳಿಕ ಮಕ್ಕಳನ್ನು ಹೆರುವ ಬಗ್ಗೆ ಚಿಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಯವರೆಗೆ ನಿಮ್ಮ ಅಂಡಾಣು ಫ್ರೀಜ್(ಅಂಡಾಣು ಮೊಟ್ಟೆ ಶೇಖರಣೆ) ಮಾಡಿಸಿ" ಎಂದು ಉಪಾಸನಾ ತಮ್ಮದೇ ಉದಾಹರಣೆ ನೀಡಿ ಆಕೆ ಸಲಹೆ ಕೊಟ್ಟಿದ್ದರು. ಇದು ಚರ್ಚೆ ಹುಟ್ಟು ಹಾಕಿತ್ತು.
Credit: Filmibeat
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications