ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.13ರಂದು ನಾರಾಯಣಪುರ ಜಲಾಶಯಕ್ಕೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಭೇಟಿ

|
Google Oneindia Kannada News

ಯಾದಗಿರಿ, ಜುಲೈ 12: "ಮಂಗಳವಾರ (ಜು.13)ದಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ (ಬಸವಸಾಗರ) ಜಲಾಶಯಕ್ಕೆ ಕೇಂದ್ರ ನೀರಾವರಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಭೇಟಿ ನೀಡಲಿದ್ದಾರೆ,'' ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಅಲ್ಲಿಂದ ಮಂಗಳವಾರ ಬೆಳಿಗ್ಗೆ ನಾರಾಯಣಪುರಕ್ಕೆ ಆಗಮಿಸಲಿರುವ ಸಚಿವರು, ಬಸವಸಾಗರ ಜಲಾಶಯ ವೀಕ್ಷಣೆ ಮತ್ತು ಸ್ಯಾಡಾ ಫೇಸ್ 10 ಅಡಿಯಲ್ಲಿ ನಿರ್ಮಿಸಲಾಗಿರುವ ಸ್ವಯಂಚಾಲಿತ ಗೇಟ್‌ಗಳ ನಿರ್ವಹಣೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಕೇಂದ್ರ ಸಚಿವರು ಗೇಟ್ ಸ್ಥಳಕ್ಕೂ ಭೇಟಿ ನೀಡಲಿದ್ದು, ಜಲಾಶಯದ ವಾಸ್ತವ ಪರಿಸ್ಥಿತಿಯನ್ನು ಅರಿಯಲಿದ್ದಾರೆ. ಸಚಿವ ಗಜೇಂದ್ರಸಿಂಗ್ ಶೆಖಾವತ್ ಆಗಮನದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಡಳಿತ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

Union Minister Gajendra Singh Shekhawat Will Visit Narayanapura Reservoir On July 13

ಈಗಾಗಲೇ ಸ್ಥಳಕ್ಕೆ ಸಹಾಯಕ ಆಯುಕ್ತ ಪ್ರಶಾಂತ್ ಅನಗುಂಡಿ ಹಾಗೂ ಹುಣಸಗಿ ತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ ನಾರಾಯಣಪುರಕ್ಕೆ ಭೇಟಿ ನೀಡಿ ಹೆಲಿಪ್ಯಾಡ್ ಸೇರಿದಂತೆ ವಿವಿಧ ಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.

Recommended Video

ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ ಪೃಥ್ವಿ ಶಾ | Oneindia Kannada

ಬಸವಸಾಗರ ಅಣೆಕಟ್ಟು ಕುರಿತು
ಬಸವಸಾಗರ ಅಣೆಕಟ್ಟು, ಈ ಹಿಂದೆ ನಾರಾಯಣಪುರ ಅಣೆಕಟ್ಟು ಎಂದು ಕರೆಯಲಾಗುತ್ತಿತ್ತು. ಇದು ಕೃಷ್ಣಾ ನದಿಗೆ ಅಡ್ಡಲಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ನಿರ್ಮಿಸಲಾಗಿದೆ. ಒಟ್ಟು 30 ಮೀಟರ್ ಎತ್ತರವಿದ್ದು, 37.965 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶದಿಂದ ೧೯೮೨ರಲ್ಲಿ ನಿರ್ಮಿಸಲಾಗಿದೆ.

English summary
Union Irrigation Minister Gajendra Singh Shekhawat will visit Narayanapura (Basavasagar) reservoir in Yadagiri district on July 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X