ಶಹಾಪುರದಲ್ಲಿ ಬುದ್ಧ ಮಲಗಿರುವ ನಿಸರ್ಗದತ್ತ ವೈಶಿಷ್ಟ್ಯ!

By: ನಮ್ಮ ಪ್ರತಿನಿಧಿ
Subscribe to Oneindia Kannada

ಶಹಾಪುರದ ಗಿರಿಯಲ್ಲಿ ವ್ಯಕ್ತಿ ಮಲಗಿರುವ ದೃಶ್ಯ ಕಂಡು ಬರುತ್ತದೆ. ಆದರೆ ಚಿತ್ರಣ ನೋಡಿದರೆ ನಿಮಗೆ ಓರ್ವ ವಿಶೇಷ ವ್ಯಕ್ತಿ ನಿಮ್ಮ ಕಣ್ಣಿಗೆ ಕಾಲ್ಪನಿಕವಾಗಿ ಕಾಣಬಹುದು. ಅದುವೇ ಬುದ್ಧ, ಅದುವೇ ಬುದ್ಧ ಮಲಗಿದ ದೃಶ್ಯ. ಆ ಈ ಬೆಟ್ಟವೇ ಬುದ್ಧ ಮಲಗಿದ ಬೆಟ್ಟ.

ಭೂಮಿಗೆ ಸೋಕುತ್ತಿರುವ ನೇಸರನ ಕಿರಣಗಳು. ಸೂರ್ಯೋದಯ ಸುಂದರ ವೇಳೆಯಲ್ಲಿ ಬೆಟ್ಟದ ಮೇಲೆ ವ್ಯಕ್ತಿ ಮಲಗಿರುವ ದೃಶ್ಯ. ದಿಟ್ಟಿಸಿ ನೋಡಿದರೆ ಅಲ್ಲಿ ಬುದ್ಧ ಮಲಗಿದ್ದಾನೆಂಬ ಕಾಲ್ಪನಿಕ ಚಿತ್ರಣ. ಹೌದು ಪ್ರಕೃತಿಯ ಇಂತಹ ವೈಶಿಷ್ಟ್ಯತೆ ಯಾದಗಿರಿ ಜಿಲ್ಲೆಯ ಶಹಾಪುರ ಹೊರವಲಯದ ಬೆಟ್ಟದಲ್ಲಿ ಕಂಡು ಬರುತ್ತದೆ.

ಶಹಾಪುರದಿಂದ ಕಲಬುರಗಿಗೆ ತೆರಳುವ ರಸ್ತೆಯ ಎಡಭಾಗದಲ್ಲಿ ಈ ವಿಶಿಷ್ಟ ಬೆಟ್ಟ ಕಾಣಸಿಗುತ್ತದೆ. ಗಿರಿಶಿಖರವನ್ನ ನೋಡಿದವರೆಲ್ಲ ಇಲ್ಲಿ ಗೌತಮ ಬುದ್ಧ ಮಲಗಿದ್ದಾನೆಂದು ಹೆಸರಿಡುತ್ತಾರೆ. ವಿಶಾಲವಾದ ಬೆಟ್ಟದ ಮೇಲೆ ಮೇಲ್ಮುಖವಾಗಿ ವ್ಯಕ್ತಿಯೊಬ್ಬರು ಮಲಗಿರುವ ದೃಶ್ಯ ಪ್ರಾಕೃತಿಕವಾಗಿ ರಚನೆಯಾಗಿದೆ....

ನಿಸರ್ಗದತ್ತವಾಗಿರುವ ಶಹಾಪುರದ ಬೆಟ್ಟ

ನಿಸರ್ಗದತ್ತವಾಗಿರುವ ಶಹಾಪುರದ ಬೆಟ್ಟ

ನಿಸರ್ಗದತ್ತವಾಗಿರುವ ಶಹಾಪುರದ ಬೆಟ್ಟದಲ್ಲಿ ಬುದ್ಧ ಮಲಗಿರುವಂತೆ ಕಾಣುವುದು ಸೃಷ್ಠಿಯ ವೈಶಿಷ್ಟ. ಹೈದ್ರಾಬಾದ್​​ ಕರ್ನಾಟಕದಲ್ಲಿ ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಒಲವಿರುವುದರಿಂದ ಬೆಟ್ಟದಲ್ಲಿರುವ ವ್ಯಕ್ತಿಯ ದೃಶ್ಯದಲ್ಲಿ ಶಾಂತಿಧೂತ ಗೌತಮ ಬುದ್ಧನನ್ನು ಕಾಣುತ್ತಾರೆ.

ವಿದೇಶಿ ಅಧ್ಯಯನಕಾರರಿಂದ ಉಲ್ಲೇಖ

ವಿದೇಶಿ ಅಧ್ಯಯನಕಾರರಿಂದ ಉಲ್ಲೇಖ

ವ್ಯಕ್ತಿಯೊಬ್ಬ ಬೆಟ್ಟದ ಮೇಲೆ ಮಲಗಿರುವಂತೆ ಸೃಷ್ಟಿಯಾಗಿರುವುದು ಪ್ರಕೃತಿ ವಿಚಿತ್ರತೆ. ಈ ದೃಶ್ಯದಲ್ಲಿ ಮುಖ, ಮೂಗು, ಹೊಟ್ಟೆ ಭಾಗಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಬುದ್ಧ ಮಲಗಿರುವ ದೃಶ್ಯ ಗುರುತಿಸಿರುವ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಆದರೆ ವಿದೇಶಿ ಅಧ್ಯಯನಕಾರರೊಬ್ಬರು ಪ್ರವಾಸದ ವೇಳೆ ಕಂಡುಬಂದಿರೋದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗುತ್ತಿದೆ.

ಪ್ರಚಾರ ಪಡೆದ ಬುದ್ಧ ಮಲಗಿರುವ ದೃಶ್ಯ

ಪ್ರಚಾರ ಪಡೆದ ಬುದ್ಧ ಮಲಗಿರುವ ದೃಶ್ಯ

ವಿದೇಶಿ ಅಧ್ಯಯನಕಾರರಿಂದ ಮೊದಲಿಗೆ ಉಲ್ಲೇಖವಾದ ಈ ನೈಸರ್ಗಿಕ ವಿಚಿತ್ರ. ಮುಂದೆ ಬುದ್ಧ ಮಲಗಿರುವ ದೃಶ್ಯದ ಕುರಿತು ಪ್ರಚಾರ ಪಡೆಯಿತು ಎನ್ನುತ್ತಾರೆ. ಶಹಾಪುರದ ಬುದ್ಧ ಮಲಗಿರುವ ಸ್ಥಳಕ್ಕೆ ವಿದ್ಯಾರ್ಥಿಗಳು, ಸಂಶೋಧಕರು ಆಗಮಿಸುತ್ತಾರೆ. ಆದರೆ, ಬುದ್ಧ ಮಲಗಿರುವ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿ ಮಾತ್ರ ಕುಂಠಿತಗೊಂಡಿದೆ.

ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಲಕ್ಷ್ಯ

ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಲಕ್ಷ್ಯ

ಪ್ರವಾಸೋಧ್ಯಮ ಇಲಾಖೆಯಿಂದ ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಪ್ರಯೋಜನ ಮಾತ್ರವಾಗಿಲ್ಲ. ಇನ್ನು ಅಧಿಕಾರಿಗಳ ನಿರ್ಲ್ಯಕ್ಷ ಹಾಗೂ ನಿರ್ವಹಣೆಯ ಕೊರತೆಯಿಂದ ಬುದ್ಧ ಮಲಗಿರುವ ಬೆಟ್ಟದ ಬಳಿಯ ಕೆರೆ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ ಜಾಲಿಗಿಡಗಳ ಪಾಲಾಗಿವೆ. ಜಿಲ್ಲೆಯ ಉಸ್ತುವಾರಿ ಸಚಿವರೇ ಪ್ರವಾಸೋದ್ಯಮ ಖಾತೆ ನಿಭಾಯಿಸುತ್ತಿರುವುದರಿಂದ ಜನರು ನಿರೀಕ್ಷೆಯಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sleeping Buddha Hill is located near Shahapur town Shahapur taluk of Yadgir district in Karnataka.The hill is made up of 4 small hills that gives the impression of Sleeping Buddha when viewed horizontally in Southwest direction

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ