ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ವೃತ್ತಕ್ಕೆ ಸಾವರ್ಕರ್ ಹೆಸರು ಮರುನಾಮಕರಣ ವಿರೋಧಿಸಿ ಪ್ರತಿಭಟನೆ

|
Google Oneindia Kannada News

ಯಾದಗಿರಿ, ನ. 29: ಟಿಪ್ಪು ವೃತ್ತವನ್ನು ಸಾವರ್ಕರ್ ವೃತ್ತ ಎಂದು ಮರುನಾಮಕರಣ ಮಾಡುವ ನಗರಸಭೆಯ ನಿರ್ಧಾರವನ್ನು ವಿರೋಧಿಸಿ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಮತ್ತು ಇತರ ಮುಸ್ಲಿಂ ಸಂಘಟನೆಗಳು ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು ತಮ್ಮ ಕೈಗಳಿಗೆ ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡು ನಗರಸಭೆ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿ ನಿರ್ಧಾರದ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಗರಸಭೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.

ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜಕನಸುಗಳು ಪುಸ್ತಕ ಮಾರಾಟ, ವಿತರಣೆಗೆ ತಡೆ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜಕನಸುಗಳು ಪುಸ್ತಕ ಮಾರಾಟ, ವಿತರಣೆಗೆ ತಡೆ

ಆದರೆ, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗರ ವೃತ್ತಕ್ಕೆ ಟಿಪ್ಪು ವೃತ್ತ ಎಂದು ನಾಮಕರಣ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಬಲಪಂಥೀಯ ಸಂಘಟನೆಗಳು ಸಾವರ್ಕರ್ ವೃತ್ತ ಎಂದು ಮರುನಾಮಕರಣ ಮಾಡಲು ಒತ್ತಾಯಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Muslim organisations protest against renaming Tipu Circle as Savarkar

"ಕೆಲವು ತಿಂಗಳ ಹಿಂದೆ ಹಿಂದೂ ಸಂಘಟನೆಗಳು ವೃತ್ತಕ್ಕೆ ವೀರ್ ಸಾವರ್ಕರ್ ಸರ್ಕಲ್ ಎಂದು ಹೆಸರಿಸುವಂತೆ ಮನವಿ ಮಾಡಿತ್ತು. 2010ರಲ್ಲಿ ಟಿಪ್ಪು ವೃತ್ತ ಎಂದು ನಾಮಕರಣ ಮಾಡಲು ಸರ್ಕಾರದಿಂದ ಅಧಿಕೃತವಾಗಿ ಆದೇಶ ಬಂದಿರಲಿಲ್ಲ. ವೃತ್ತಕ್ಕೆ ಟಿಪ್ಪು ಹೆಸರು ಇಡಲು ಯಾವುದೇ ಸರ್ಕಾರಿ ಆದೇಶ ಬಂದಿರಲಿಲ್ಲ. ಈಗ ವೀರ್ ಸಾವರ್ಕರ್ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರಕ್ಕೆ ಅಧಿಕೃತ ಮನವಿ ಕಳುಹಿಸಿದ್ದೇವೆ" ಎಂದು ಸುರೇಶ ಅಂಬಿಗರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನು, ವೃತ್ತಕ್ಕೆ ಅಧಿಕೃತವಾಗಿ ಟಿಪ್ಪು ಸರ್ಕಲ್ ಎಂದು ಹೆಸರಿಸಲಾಗಿದೆ ಎಂದು ಸಾಬೀತುಪಡಿಸಲು ಸರಿಯಾದ ದಾಖಲೆಗಳಿವೆ ಎಂದು ಪ್ರತಿಭಟನಕಾರರಲ್ಲಿ ಒಬ್ಬರಾದ ವಾಹಿದ್ ಮಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜೊತೆಗೆ ನಗರಸಭೆ ಪ್ರಾದೇಶಿಕವಾಗಿ ಕೋಮು ಸೌಹಾರ್ದತೆ ಹಾಳು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವೃತ್ತಕ್ಕೆ ಟಿಪ್ಪು ಸರ್ಕಲ್ ಎಂದು ಹೆಸರಿಡಲಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರದ ಅಡಿಯಲ್ಲಿ ಇದನ್ನು ವೀರ್ ಸಾವರ್ಕರ್ ಎಂದು ಮರುನಾಮಕರಣ ಮಾಡಲು ಹೊರಟಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ನಗರಸಭೆ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಂದು ವಾಹಿದ್ ಮಿಯಾ ಹೇಳಿದ್ದಾರೆ.

English summary
Muslim organisations protested in Yadgiri against municipal council’s decision renaming Tipu Circle as Savarkar Circle. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X