ಯಾದಗಿರಿಯಲ್ಲಿ ಅನಾಥ ನವಜಾತ ಗಂಡು ಶಿಶು ಪತ್ತೆ
ಯಾದಗಿರಿ, ಡಿಸೆಂಬರ್ 29 : ಜಿಲ್ಲೆಯ ಸುರಪುರ ತಾಲೂಕಿನ ರಾಜನಕೋಳೂರು ಗ್ರಾಮದ ಹೊರವಲಯದಲ್ಲಿ ಅನಾಥ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ.
ಗುರುವಾರ ಬೆಳಗಿನಜಾವ ಶಿಶು ಜನಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆ ಮಗು ಜನಿಸಿರಬಹುದು ಎಂದು ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸ್ಥಳೀಯ ಕುರಿಗಾಯಿ ಮಾಹಿತಿ ಮೇರೆಗೆ ಶಿಶುವನ್ನು ರಕ್ಷಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣೆ ಘಟಕ ಅಧಿಕಾರಿಗಳ ವಶಕ್ಕೆ ಮಗುವನ್ನು ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೊಡೆಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ತಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications