ತನ್ನದೇ ದಾಖಲೆ ಮುರಿಯಲು ಹೋಗಿ ಅಸುನೀಗಿದ ವಿಶ್ವದ ವೇಗದ ಮಹಿಳೆ!
ವಾಷಿಂಗ್ಟನ್, ಆಗಸ್ಟ್ 29: ತಮ್ಮದೇ ದಾಖಲೆಯನ್ನು ಮುರಿಯಲು ಹೋಗಿ ಅಪಘಾತಕ್ಕೊಳಗಾಗಿ ಜೆಸ್ಸಿ ಕಾಂಬ್ಸ್ ಎಂಬ ವಿಶ್ವದ ಅತೀ ವೇಗದ ಮಹಿಳೆ ಮೃತರಾದ ಘಟನೆ ಆ.27 ರಂದು ನಡೆದಿದೆ. ಅಮೆರಿಕದ ಒರೆಗಾನ್ ನಲ್ಲಿ ಘಟನೆ ಸಂಭವಿಸಿದ್ದು, 36 ವರ್ಷ ವಯಸ್ಸಿನ ಕಾಂಬ್ಸ್ ಸಾವಿಗೆ ಆಕೆಯ ಅಭಿಮಾನಿಗಳು, ಕುಟುಂಬ ವರ್ಗ ಕಂಬನಿ ಮಿಡಿದಿದ್ದಾರೆ.
ಅತೀ ವೇಗದ ಕಾರು ಚಾಲನೆಯಲ್ಲಿ ಖ್ಯಾತಿ ಪಡೆದಿದ್ದ ಕಾಂಬ್ಸ್ ಗಂಟೆಗೆ 769 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಾಂಬ್ಸ್ ಪಾತ್ರರಾಗಿದ್ದರು. ತಾವು 2016 ರಲ್ಲಿಮಾಡಿದ್ದ ಈ ದಾಖಲೆಯನ್ನು ತಾವೇ ಮುರಿಯಲು ಹೋಗಿ ಗಂಟೆಗೆ 777 ಕಿ.ಮೀ.ವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗ ಅಪಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ.

Recommended Video
1976 ರಲ್ಲಿ ಕಿಟ್ಟಿ ಒ ನಿಯೆಲ್ ಎಂಬುವವರು ಗಂಟೆಗೆ 823 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುವ ಮೂಲಕ ಭೂಮಿಯ ಮೇಲೆ ಅತೀ ಹೆಚ್ಚು ವೇಗವಾಗಿ ವಾಹನ ಚಲಾಯಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು ಮುರಿಯುವ ಪ್ರಯತ್ನದಲ್ಲಿದ್ದ ಜೆಸ್ಸಿ ದುರಂತ ಅಂತ್ಯ ಕಂಡಿದ್ದಾರೆ.












Click it and Unblock the Notifications