ಎರಡನೇ ಬಾರಿ ಕೊರೊನಾಗೆ ತುತ್ತಾಗಿರುವವರಿಂದ ಸೋಂಕು ಹರಡುತ್ತಾ?

ವಾಷಿಂಗ್ಟನ್, ಆಗಸ್ಟ್ 31: ಎರಡನೇ ಬಾರಿಗೆ ಕೊರೊನಾ ಸೋಂಕಿಗೆ ತುತ್ತಾಗಿರುವವರಿಂದ ಸೋಂಕು ಹರಡುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

Recommended Video

      Foreign ಹೋಗೋ ಪ್ಲಾನ್ ಇದ್ರೆ ಮರೆತುಬಿಡಿ | Oneindia Kannada

      ಅಮೆರಿಕದ ರೋಗ ನಿಯಂತ್ರಣ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಯಾರಿಗೂ ಕೊರೊನಾ ಸೋಂಕು ಮರುಕಳಿಸಿಲ್ಲ, ಆದರೆ ಕೊರೊನಾ ಸೋಂಕಿತರು ಮೂರು ತಿಂಗಳುಗಳ ಕಾಲ ಸಣ್ಣ ಪ್ರಮಾಣದ ಸೋಂಕನ್ನು ಹೊಂದಿರುತ್ತಾರೆ, ಇವರು ಮತ್ತೊಬ್ಬರಿಗೆ ಸೋಂಕು ಹರಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

      ಸ್ವಲ್ಪ ದಿನಗಳ ಹಿಂದೆ ಹಾಂಗ್‌ಕಾಂಗ್‌ನಲ್ಲಿ ಇಂಥಹದ್ದೊಂದು ಪ್ರಕರಣ ಕಾಣಿಸಿಕೊಂಡಿತ್ತು. ಚೀನಾದ 33 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ನಾಲ್ಕೂವರೆ ತಿಂಗಳ ಬಳಿಕ ಸೋಂಕು ಮತ್ತೆ ಕಾಣಿಸಿಕೊಂಡಿತ್ತು. ಆತ ಈ ಸಂದರ್ಭದಲ್ಲಿ ಸ್ಪೇನ್‌ಗೆ ತೆರಳಿದ್ದ. ಬೆಲ್ಜಿಯಂ, ನೆದರ್‌ಲೆಂಡ್‌ನಲ್ಲಿ ಪ್ರಕರಣಗಳು ಪತ್ತೆಯಾಗಿವೆ.

      Why First Reinfection Cases Do Not Change Much In Approach To Coronavirus

      ಸೋಂಕು ಮರುಕಳಿಸುವುದು ನಿಜವೇ?: ಹೌದು ಚೀನಾದ ಆ ವ್ಯಕ್ತಿಯಲ್ಲಿ ಎರಡನೇ ಬಾರಿಗೆ ಸೋಂಕು ಕಾಣಿಸಿಕೊಂಡಿದ್ದು, ಹೌದು. ವ್ಯಕ್ತಿಯು ಕೊರೊನಾವೈರಸ್‌ನ ಎರಡು ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾನೆ. ವೈರಸ್‌ಗಳು ಸಮಯದೊಂದಿಗೆ ರೂಪಾಂತರಗೊಳ್ಳುತ್ತವೆ. ಅವರ ಹುಟ್ಟಿನಲ್ಲಿ ಸಣ್ಣ ಬದಲಾವಣೆ ಇರುತ್ತದೆ.ಇದು ಸಂಶೋಧಕರಿಗೆ ಸೋಂಕಿನ ಮೂಲವನ್ನು ಕಂಡು ಹಿಡಿಯಲು ಅನುವು ಮಾಡಿಕೊಡುತ್ತದೆ.

      ಸಾಕಷ್ಟು ಮಂದಿಯ ದೇಹದಲ್ಲಿ ಎರಡನೇ ಬಾರಿಗೆ ಸೋಂಕು ಕಾಣಿಸಿಕೊಂಡಿರಬಹುದು ಆದರೆ ಮೊದಲ ಸೋಂಕಿನ ಯಾವುದೇ ಗುರುತು ಎರಡನೇ ಬಾರಿಗೆ ಸೋಂಕಿಗೆ ಒಳಗಾದಾಗ ಇರುವುದಿಲ್ಲ. ಹೀಗಾಗಿ ಅದನ್ನು ಪತ್ತೆ ಹಚ್ಚುವುದು ಕಷ್ಟ.

      ಸಾಕಷ್ಟು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ, ಅದರಿಂದ ಗುಣಮುಖರಾಗಿದ್ದಾರೆ, ಆದರೆ ಅವರೆಲ್ಲರದೇಹದಲ್ಲೂ ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗಿದೆ ಎಂದುಕೊಳ್ಳುವುದು ತಪ್ಪಾಗುತ್ತದೆ. ಕೊರೊನಾ ಲಸಿಕೆ ಬಳಕೆಯಲ್ಲಿದ್ದಾಗ ವೈರಸ್ ರೂಪಾಂತರಗೊಳ್ಳಬಹುದು.

      ಲಸಿಕೆಯು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ರಕ್ಷಣೆ ನೀಡಲು ಸಾಧ್ಯವಿಲ್ಲ. ರೋಗ ನಿರೋಧಕ ಶಕ್ತಿ ತಮ್ಮಲ್ಲಿಯೇ ವೃದ್ಧಿಯಾಗಬೇಕು ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+