ವಿಶ್ವ ಜನಸಂಖ್ಯೆಯ ಶೇ.10 ರಷ್ಟು ಮಂದಿ ಕೊರೊನಾಗೆ ತುತ್ತಾಗಬಹುದು: WHO

ಜಿನೇವಾ, ಅಕ್ಟೋಬರ್ 05: ವಿಶ್ವ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಂದಿ ಕೊರೊನಾಗೆ ತುತ್ತಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮೈಕ್ ರಯಾನ್ ಮಾತನಾಡಿ, ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತಿದೆ.ಯುರೋಪ್ ಹಾಗೂ ಪೂರ್ವ ಮೆಡಿಟರೇನಿಯನ್ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರಕರಣಗಳು ಮತ್ತು ಸಾವುಗಳು ಹೆಚ್ಚು ಸಂಭವಿಸುತ್ತಿವೆ ಎಂದು ಮಾಹಿತಿ ನೀಡಿದರು.

ನಮ್ಮ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆಯ ಶೇ.10ರಷ್ಟು ಮಂದಿ ಸೋಂಕಿಗೆ ಒಳಗಾಗಬಹುದು. ಇದು ದೇಶವನ್ನು ಅವಲಂಬಿಸಿರುತ್ತದೆ. ಇದು ನಗರದಿಂದ ಗ್ರಾಮೀಣಕ್ಕೆ ಬದಲಾಗುತ್ತದೆ.

WHO Says 10 Per Cent Of World Population May Have Been Infected With COVID-19

ಆದರೆ ಇದರ ಅರ್ಥವೇನೆಂದರೆ ಪ್ರಪಂಚದ ಬಹುಪಾಲು ದೇಶಗಳು ಅಪಾಯದಲ್ಲಿವೆ. ನಾವು ಈಗ ಅತ್ಯಂತ ಕಠಿಣ ಅವಧಿಗೆ ಹೋಗುತ್ತಿದ್ದೇವೆ.ರೋಗ ವ್ಯಾಪಿಸುತ್ತಿದೆ ಎಂದು ಹೇಳಿದರು.

ಕೊರೊನಾವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಚೀನಾದಲ್ಲಿ ಅಂತಾರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ತಜ್ಞರ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಸಲ್ಲಿಸಿದೆ ಎಂದು ಚೀನಾ ತಿಳಿಸಿದೆ.

ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಅಪಹಾಸ್ಯ ಮಾಡಿದೆ. ಮೊದಲು ಕೊರೊನಾ ಸೋಂಕಿನ ತೀವ್ರತೆ ನಿಮಗೆ ಅರ್ಥವಾಗಲಿಲ್ಲ, ಅದನ್ನು ನಿರ್ಲಕ್ಷಿಸಿದಿರಿ, ಈಗ ನೋಡಿ ನೀವೇ ಸೋಂಕಿಗೆ ಒಳಗಾಗಿದ್ದೀರಾ, ಈ ಹಿಂದೆ ಚೀಣಾ ಬಗ್ಗೆ ಬರಳಮಾಡಿ ತೋರಿಸುತ್ತಾ ನಿಮ್ಮ ಸಮಯ ವ್ಯರ್ಥಮಾಡಿಕೊಂಡಿರಿ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+