ವಿಶ್ವದಾದ್ಯಂತ ದಾಖಲೆ ಪ್ರಮಾಣದ ಕೊರೊನಾ ಸೋಂಕಿತರು ಪತ್ತೆ: WHO
ವಾಷಿಂಗ್ಟನ್, ಸೆಪ್ಟೆಂಬರ್ 22: ಒಂದು ವಾರದ ಹಿಂದೆ ವಿಶ್ವದಾದ್ಯಂತ ದಾಖಲೆ ಪ್ರಮಾಣದ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಈ ಅವಧಿಯಲ್ಲಿ ಸುಮಾರು 2 ಮಿಲಿಯನ್ ಸೋಂಕಿತರು ಪತ್ತೆಯಾಗಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಆಫ್ರಿಕಾವನ್ನು ಹೊರತುಪಡಿಸಿ ವಿಶ್ವದ ಇತರೆ ಪ್ರದೇಶಗಳಲ್ಲಿ ಕಳೆದ ಏಳು ದಿನಗಳಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ.
ಅಮೆರಿಕದಲ್ಲಿ ಕೊವಿಡ್-19 ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ ಮತ್ತು ಕಳೆದ ವಾರದಲ್ಲಿ ವರದಿಯಾದ ಎಲ್ಲಾ ಹೊಸ ಪ್ರಕರಣಗಳಲ್ಲಿ ಶೇ 38ಕ್ಕಿಂತ ಹೆಚ್ಚಿನ ಪ್ರಕರಣಗಳು ಇಲ್ಲಿಯೇ ವರದಿಯಾಗಿವೆ.

ಯುರೋಪ್‌ನಲ್ಲಿ ಕಳೆದ ವಾರದಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 27ರಷ್ಟು ಸಾವುಗಳು ಹೆಚ್ಚಳವಾಗಿದೆ.
ಸೆಪ್ಟೆಂಬರ್ 14 ರಿಂದ 20ರ ಅವಧಿಯಲ್ಲಿ ಸುಮಾರು ಎರಡು ಮಿಲಿಯನ್ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಳವಾಗಿದೆ ಮತ್ತು ಕೊವಿಡ್-19 ಪ್ರಾರಂಭವಾದಾಗಿನಿಂದಲೂ ವಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ಇದೇ ಅವಧಿಯಲ್ಲಿ, ಸಾವಿನ ಸಂಖ್ಯೆಯಲ್ಲಿ ಶೇ 10 ರಷ್ಟು ಇಳಿಕೆ ಕಂಡುಬಂದಿದ್ದು, ಕಳೆದ ಏಳು ದಿನಗಳಲ್ಲಿ 36,764 ಸಾವುಗಳು ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.












Click it and Unblock the Notifications