ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಲಭ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚಾರ

|
Google Oneindia Kannada News

ಜಿನೇವಾ, ಅಕ್ಟೋಬರ್ 06:ಕೊರೊನಾ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚರಿಸಿದೆ.

ಕೊರೊನಾ ಲಸಿಕೆ ಈ ವರ್ಷದ ಅಂತ್ಯದಲ್ಲೇ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಾಂಕ್ರಾಮಿಕ ರೋಗದ ಕುರಿತು ಕಾರ್ಯ ನಿರ್ವಾಹಕ ಮಂಡಳಿಯ ಎರಡು ದಿನಗಳ ಸಭೆಯನ್ನುದ್ದೇಶಿಸಿ ಡಬ್ಲ್ಯೂಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ ಮಾತನಾಡಿ, ಈ ವರ್ಷದ ಅಂತ್ಯದಲ್ಲಿ ನಮಗೆ ಕೊರೊನಾ ಲಸಿಕೆ ಸಿಗಬಹುದೆಂದು ಭರವಸೆ ಇದೆ ಎಂದರು.

ಜಾಗತಿಕ ಬಳಕೆಗೆ ಚೀನಾ ಕೊರೊನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ ಜತೆ ಮಾತುಕತೆ ಜಾಗತಿಕ ಬಳಕೆಗೆ ಚೀನಾ ಕೊರೊನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ ಜತೆ ಮಾತುಕತೆ

ಒಟ್ಟು 9 ಲಸಿಕೆಗಳ ಪ್ರಯೋಗ ನಡೆಯುತ್ತಿದೆ. 2021ರೊಳಗೆ 2 ಬಿಲಿಯನ್ ಲಸಿಕೆ ಉತ್ಪಾದನೆಯಾಗಲಿದೆ ಎಂದರು.ಚೀನಾವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವಂತೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಚೀನಾದೊಂದಿಗೆ ಮಾತುಕತೆ ನಡೆಸುತ್ತಿದೆ.

WHO Chief Says There Is Hope COVID-19 Vaccine May Be Ready By Year-End

ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಚೀನಾ ತನ್ನ ಲಸಿಕೆಗಳನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಜತೆ ಪ್ರಾಥಮಿಕ ಚರ್ಚೆ ನಡೆಸಿದೆ ಎಂದು ಹೇಳಿದರು.

ಈ ಲಸಿಕೆಗಳ ಗುಣಮಟ್ಟ ಮತ್ತು ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪಟ್ಟಿ ಮಾಡಲಾಗುತ್ತದೆ.ನಂತರ ಪರವಾನಗಿದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಅಂತಿಮ ಪ್ರಯೋಗದಲ್ಲಿ ಕನಿಷ್ಠ ನಾಲ್ಕು ಕೊರೊನಾ ಲಸಿಕೆಗಳಿವೆ. ಎರಡನ್ನು ನ್ಯಾಷನಲ್ ಬಯೋಟೆಕ್ ಗ್ರೂಪ್ ಅಭಿವೃದ್ಧಿಪಡಿಸಿದೆ. ಮತ್ತು ಉಳಿದ ಎರಡನ್ನು ಸಿನೋವಾಕ್ ಬಯೋಟೆಕ್ ಮತ್ತು ಕ್ಯಾನ್ಸಿನೋ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸಿದೆ.

Recommended Video

Gayle ಈಗಲೂ RCB ಗೆ ಸೇರಬಹುದು | Oneindia Kannada

English summary
A vaccine against COVID-19 may be ready by year-end, the head of the World Health Organization (WHO) said on Tuesday, without elaborating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X