ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕಿಗೆ ಪಡೆಯುತ್ತಿರುವ ಚಿಕಿತ್ಸೆ ಏನು?

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು ತಗುಲಿದೆ.

Recommended Video

Trump ದಂಪತಿಗಳಿಗೆ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಕೊರೊನ | Oneindia Kannada

ಈ ಕುರಿತು ಸ್ವತಃ ಟ್ರಂಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಮೊದಲ ಅವರ ಸಹಾಯಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು, ಬಳಿಕ ಇವರು ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ್ದರು. ಆದರೆ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು.

ಆಂಧ್ರದಲ್ಲಿ ಟ್ಯೂಷನ್ ಟೀಚರಿಂದ 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಆಂಧ್ರದಲ್ಲಿ ಟ್ಯೂಷನ್ ಟೀಚರಿಂದ 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟ್ಟರ್‌ನಲ್ಲಿ ಹಾರೈಸಿದ್ದರು. ಅಮೆರಿಕದಲ್ಲಿ ಇನ್ನೂ ಯಾವ ಲಸಿಕೆಗಳಿಗೂ ಅನುಮತಿ ಸಿಕ್ಕಿಲ್ಲ, ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವು ಅರ್ಧಕ್ಕೆ ನಿಂತಿದೆ ಹಾಗಾದರೆ ಟ್ರಂಪ್ ದಂಪತಿ ಕೊರೊನಾ ಸೋಂಕಿಗೆ ಯಾವ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸಂಗತಿ ಕುತೂಹಲ ಮೂಡಿಸಿದೆ.

 ಡೊನಾಲ್ಡ್ ಟ್ರಂಪ್ ಅವರ ವಯಸ್ಸು, ತೂಕ ಕೊರೊನಾ ಹೆಚ್ಚಿಸುವ ಸಾಧ್ಯತೆ

ಡೊನಾಲ್ಡ್ ಟ್ರಂಪ್ ಅವರ ವಯಸ್ಸು, ತೂಕ ಕೊರೊನಾ ಹೆಚ್ಚಿಸುವ ಸಾಧ್ಯತೆ

ಡೊನಾಲ್ಡ್ ಟ್ರಂಪ್ ಅವರ ವಯಸ್ಸು ಹಾಗೂ ತೂಕ ಕೊರೊನಾ ಸೋಂಕನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ. ಅದರಿಂದ ಸಾವಿನ ಶೇ.4ರಷ್ಟು ಅಪಾಯವನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

 ಟ್ರಂಪ್‌ಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು

ಟ್ರಂಪ್‌ಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು

74 ವರ್ಷದ ಡೊನಾಲ್ಡ್ ಟ್ರಂಪ್‌ಗೆ ಸ್ವಲ್ಪ ಜ್ವರವಿತ್ತು. ಮುಂದಿನ ಕೆಲವು ದಿನಗಳವರೆಗೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

 ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ಪ್ರಾಯೋಗಿಕ ಪರೀಕ್ಷೆ ಏನು?

ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ಪ್ರಾಯೋಗಿಕ ಪರೀಕ್ಷೆ ಏನು?

ಪ್ರಾಯೋಗಿಕ ಕೊವಿಡ್ 19 ಔಷಧವೆಂದರೆ ಮೊನೊಕ್ಲೋನಲ್ ಪ್ರತಿಕಾಯಗಳು, ವೈರಸ್‌ಗೆ ಮಾನವ ಪ್ರತಿಕಾಯಗಳ ಪ್ರತಿಯನ್ನು ತಯಾರಿಸಲಾಗುತ್ತದೆ. ಚುಚ್ಚುಮದ್ದಿನ ಆಂಟಿಬಾಡಿಗಳನ್ನು ತಕ್ಷಣವೇ ವೈರಸ್ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದೆ. ಮತ್ತು ಕೊವಿಡ್ 19 ಅನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಈ ಮೊನೊಕ್ಲೋನಲ್ ಆಂಟಿಬಾಟಿ ಅಭಿವೃದ್ಧಿಪಡಿಸಲಾಗುತ್ತಿದೆ.

 ಟ್ರಂಪ್ ತೆಗೆದುಕೊಳ್ಳುತ್ತಿರುವ ಚಿಕಿತ್ಸೆ ಏನು?

ಟ್ರಂಪ್ ತೆಗೆದುಕೊಳ್ಳುತ್ತಿರುವ ಚಿಕಿತ್ಸೆ ಏನು?

ಆಸ್ಪತ್ರೆಗೆ ದಾಖಲಾಗದ ಕೊವಿಡ್ 19 ರೋಗಿಗಳಲ್ಲಿ ಸುಧಾರಿತ ರೋಗಲಕ್ಷಣಗಳನ್ನು ವರದಿ ಮಾಡಿರುವ ರೆಜೆನೆರಾನ್ ಫಾರ್ಮಾಸ್ಯುಟಿಕಲ್ ಇಂಕ್ ಪರೀಕ್ಷಿಸುತ್ತಿರುವ ಪ್ರತಿಕಾಯ ಕಾಕ್ಟೈಲ್ ಅನ್ನು ಟ್ರಂಪ್ ತೆಗೆದುಕೊಳ್ಳುತ್ತಿದ್ದಾರೆ. ಈ ಪ್ರಯೋಗದಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ.

 ಹಲವಾರು ರೀತಿಯ ಕಾಯಿಲೆಗಳ ಚಿಕಿತ್ಸೆಗೆ ಈ ತಂತ್ರ ಬಳಕೆಯಲ್ಲಿದೆ

ಹಲವಾರು ರೀತಿಯ ಕಾಯಿಲೆಗಳ ಚಿಕಿತ್ಸೆಗೆ ಈ ತಂತ್ರ ಬಳಕೆಯಲ್ಲಿದೆ

ಹಲವಾರು ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ತಂತ್ರವು ಈಗಾಗಲೇ ವ್ಯಾಪಕ ಬಳಕೆಯಲ್ಲಿದೆ. ಇದುವರೆಗಿನ ದತ್ತಾಂಶವು ಕೊವಿಡ್ 19 ಪ್ರತಿಕಾಯಗಳಿಗೆ ಸೀಮಿತವಾಗಿದೆ.

ಟ್ರಂಪ್‌ಗೆ ಉಸಿರಾಟದ ಸಮಸ್ಯೆ ಉಂಟಾದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಕೆಲವರಿಗೆ ಎರಡನೇ ವಾರದಲ್ಲಿ ಸಮಸ್ಯೆ ತೀವ್ರಗೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.
 ಕಡಿಮೆ ಲಕ್ಷಣಗಳಿದ್ದರೆ ಯಾವ ಚಿಕಿತ್ಸೆ ಪಡೆಯಬೇಕು?

ಕಡಿಮೆ ಲಕ್ಷಣಗಳಿದ್ದರೆ ಯಾವ ಚಿಕಿತ್ಸೆ ಪಡೆಯಬೇಕು?

ಕೊರೊನಾಗೆ ಇದೀಗ ನಿರ್ದಿಷ್ಟ ಚಿಕಿತ್ಸೆಗಳಿಲ್ಲ, ಟ್ರಂಪ್ ವಿಟಮಿನ್ ಡಿ, ಮಿನರಲ್ ಜಿಂಕ್, ಮೆಲಟಾನಿನ್ ತೆಗೆದುಕೊಳ್ಳುತ್ತಿದ್ದಾರೆ, ಅದಕ್ಕೂ ಮುನ್ನ ಪ್ರತಿನಿತ್ಯ ಆಸ್ಪಿರಿನ್ ಮಾತ್ರೆಗಳನ್ನು ಅವರು ತೆಗೆದುಕೊಳ್ಳುತ್ತಿದ್ದರು.

ಕೊರೊನಾ ಸೋಂಕು ಅಮೆರಿಕದಲ್ಲಿ ಹೆಚ್ಚಾಗುತ್ತಿದ್ದರೆ ಆಂಟಿ ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಅನ್ನು ತೆಗೆದುಕೊಳ್ಳಿ ಎಂದು ಹೇಳಿದ್ರು. ಹಾಗೆಯೇ ಟ್ರಂಪ್ ಕೂಡ ಅದನ್ನೇ ತೆಗೆದುಕೊಳ್ಳುತ್ತಿದ್ದರು. ಸ್ವಲ್ಪ ತಿಂಗಳ ಬಳಿಕ ಈ ಹೈಡ್ರಾಕ್ಸಿಕ್ಲೋರೊಕ್ವಿನ್‌ ಇಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರೇ ಹೇಳಿದ್ದರು.

English summary
US President Donald Trump on Friday said he and his wife Melania had tested positive for COVID-19, and the White House said he was given an experimental treatment designed to combat the virus as well as a small array of treatments including aspirin and Vitamin D.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X