ವಿಡಿಯೋ: ಮಕ್ಕಳ ಆಸ್ಪತ್ರೆಯಲ್ಲಿ ಅಚ್ಚರಿ, ಸಾಂತಾಕ್ಲಾಸ್ ಆಗಿ ಒಬಾಮಾ!
ವಾಷಿಂಗ್ಟನ್ ಡಿಸಿ, ಡಿಸೆಂಬರ್ 20: ಅನಾರೋಗ್ಯದಿಂದ ಬಳಲುತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಎದುರಲ್ಲಿ ರಾಷ್ಟ್ರದ ಮಾಜಿ ಅಧ್ಯಕ್ಷರು ಬಂದು ನಿಂತರೆ ಹೇಗಾಗಬೇಡ?! ತಲೆ ಮೇಲೆ ಸಾಂತಾ ಟೋಪಿ, ಹೆಗಲ ಮೇಲೆ ಗಿಫ್ಟಿನ ಬ್ಯಾಗು! ಕಣ್ಣುಜ್ಜಿಕೊಂಡು, ಕೆನ್ನೆ ಹಿಂಡಿಕೊಂಡು ನೋಡಿದರೂ ಇದು ಕನಸಲ್ಲ, ಸತ್ಯವೇ!
ಹೌದು, ಅಮೆರಿಕದ ವಾಷಿಂಗ್ಟನ್ನಿನ ಆಸ್ಪತ್ರೆಯಲ್ಲಿ ಇಂಥದೊಂದು ಅಚ್ಚರಿ ನಡೆಯಿತು. ಸದಾ ತಮ್ಮ ಒಂದಿಲ್ಲೊಂದು ಮಾನವೀಯ ನಡೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಂತಾಕ್ಲಾಸ್ ವೇಷ ತೊಟ್ಟು ಇಲ್ಲಿನ ಮಕ್ಕಳ ಆಸ್ಪತ್ರೆಯೊಂದಕ್ಕೆ ತೆರಳಿದ್ದರು.
Thank you @BarackObama for making our patients’ day so much brighter. Your surprise warmed our hallways and put smiles on everyone’s faces! Our patients loved your company…and your gifts! https://t.co/bswxSrA4sQ ❤️ #HolidaysAtChildrens #ObamaAndKids pic.twitter.com/qii53UbSRS
— Children's National 🏥 (@childrenshealth) December 19, 2018
ಅಲ್ಲಿನ ಮಕ್ಕಳ ಮನಸ್ಸಲ್ಲಿ ಸಾಂತ್ವನ ತುಂಬಿ, ಕೈತುಂಬ ಉಡುಗೊರೆ ನೀಡಿ, ಜೀವನ ಪ್ರೀತಿಯ ಹುಮ್ಮಸ್ಸನ್ನು ಮೊಗೆ ಮೊಗೆದು ಸುರಿದು ಹೋದರು ಒಬಾಮಾ. ಒಬಾಮಾ ಅವರ ಈ ಮಾನವೀಯ ನಡೆಯನ್ನು ಕಂಡು ಚಿಲ್ಡ್ರನ್ ನ್ಯಾಶನಲ್ ಆಸ್ಪತ್ರೆಯ ಮೇಲಧಿಕಾರಿಗಳು ಹೃದಯ ತುಂಬಿ ಧನ್ಯವಾದ ಅರ್ಪಿಸಿದ್ದಾರೆ.

ಅಮೆರಿಕದ 44 ನೇ ಅಧ್ಯಕ್ಷರಾದ ಬರಾಕ್ ಒಬಾಮಾ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ನನಗೆ ಮಕ್ಕಳ ಕಷ್ಟ, ನೋವು ಅರ್ಥವಾಗುತ್ತದೆ ಎಂದಿದ್ದಾರೆ.












Click it and Unblock the Notifications