• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ವೈಟ್‌ಹೌಸ್‌ನಲ್ಲಿ ಪುರೋಹಿತರಿಂದ ಶಾಂತಿ ಮಂತ್ರ ಪಠಣ

|

ವಾಷಿಂಗ್ಟನ್, ಮೇ 8: ಅಮೆರಿಕದ ವೈಟ್‌ಹೌಸ್‌ನಲ್ಲಿ ಹಿಂದೂ ಪುರೋಹಿತರು ಶಾಂತಿ ಮಂತ್ರ ಪಠಣ ಮಾಡಿದ್ದಾರೆ.

   ಬನ್ನಿ ಎಲ್ಲರೂ ಕೆಲಸಕ್ಕೆ ಹಿಂದಿರುಗೋಣ ಎಂದ ಟ್ರಂಪ್ | Donald Trump | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ನರಳುತ್ತಿದ್ದು, ಲಕ್ಷಾಂತರ ಮಂದಿ ಈ ಸೋಂಕಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಯೋಗ ಕ್ಷೇಮಕ್ಕಾಗಿ ಅಮೆರಿಕದ ವೈಟ್‌ಹೌಸನ ರೋಸ್ ಗಾರ್ಡನ್‌ ಅಲ್ಲಿ ಹಿಂದೂ ಪುರೋಹಿತರೊಬ್ಬರು ಶಾಂತಿ ಮಂತ್ರವ ಪಠಣ ಮಾಡಿದ್ದಾರೆ.

   ಅಮೆರಿಕದ ಪ್ರಾರ್ಥನಾ ಸೇವೆಯ ದಿನ ವೈಟ್‌ಹೌಸ್‌ನಲ್ಲಿ ಎಲ್ಲಾ ಧರ್ಮಗಳ ಧರ್ಮಗುರುಗಳ ಉಪಸ್ಥಿತಿಯಲ್ಲಿ ಈ ಶಾಂತಿ ಮಂತ್ರ ಪಠಿಸಲಾಗಿದೆ.

   ಅಮೆರಿಕದಲ್ಲಿ ಹಿಂದೂ ಧಾರ್ಮಿಕ ಮಂತ್ರಪಠಣ ಹಿಂದಿನಿಂದಲೂ ನಡೆದುಬಂದಿದೆ. 2008ರಲ್ಲಿ ವಾಷಿಂಗ್ಟನ್ ರಾಜ್ಯದ ವಿಧಾನಸಭೆಯ ಅಧಿವೇಶನವನ್ನು ಹಿಂದೂ ಮಂತ್ರೋಚ್ಛಾರದ ಮೂಲಕ ಆರಂಭಿಸಲಾಗಿತ್ತು. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಶ್ವೇತ ಭವನದಲ್ಲಿ ಹಲವು ಬಾರಿ ವೇದ ಮಂತ್ರ ಪಠಣವಾಗಿದೆ.

   ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

   ವೇದಮಂತ್ರ ಪಠಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳೂ ವ್ಯಕ್ತವಾಗಿವೆ. ಅಮೆರಿಕದಲ್ಲಿ ಕೊವಿಡ್ ಬಿಕ್ಕಟ್ಟನ್ನು ನೀಗಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಅಧ್ಯಕ್ಷರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

   ಅರ್ಚಕರು ಸಂಸ್ಕೃತದಲ್ಲಿ ಪಠಿಸಿದ ಯಜುರ್ವೇದ ಶಾಂತಿ ಪಥ ಶ್ಲೋಕದ ಅರ್ಥವನ್ನು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿ ಅಲ್ಲಿ ಹಾಜರಿದ್ದ ಟ್ರಂಪ್, ಅವರ ಪತ್ನಿ ಮೆಲನಿಯಾ ಟ್ರಂಪ್ ಹಾಗೂ ಇತರರಿಗೆ ತಿಳಿಸಲಾಯಿತು.

   English summary
   The National Day of Prayer Service was marked at the Rose Garden of the White House on Thursday (7 May). Religious leaders from different faiths offered prayers.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X