ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಹೂದಿಗಳ ಶ್ರದ್ಧಾ ಕೇಂದ್ರದಲ್ಲಿ ಗುಂಡು ಹಾರಿಸಿ ಮಹಿಳೆ ಸಾವು

|
Google Oneindia Kannada News

ಹತ್ತೊಂಬತ್ತು ವರ್ಷದ ಬಂದೂಕುಧಾರಿ ಗುಂಡು ಹಾರಿಸಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಪೊವೆಯಲ್ಲಿರುವ ಪೊವೆ ಸಿನಗಾಗ್ ನಲ್ಲಿ (ಯಹೂದಿಗಳ ಶ್ರದ್ಧಾ ಕೇಂದ್ರ) ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊವೆ ಮೇಯರ್ ಸ್ಟೀವ್ ವಾಸ್ ಹಾಗೂ ಸ್ಯಾನ್ ಡಿಯೆಗೋ ಕೌಂಟಿ ಶೆರಿಫ್ ವಿಲಿಯಂ ಗೋರೆ ನೀಡಿದ ಮಾಹಿತಿ ಪ್ರಕಾರ, ಗುಂಡಿನ ದಾಳಿಯಲ್ಲಿ ಗಾಯಗೊಂಡ ನಾಲ್ವರನ್ನು ಪಲೋಮರ್ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ಮೃತರ ಪೈಕಿ ಒಬ್ಬ ಮಹಿಳೆ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಇತರ ಮೂವರ ಪೈಕಿ ಒಂದು ಹೆಣ್ಣು ಮಗು, ಇಬ್ಬರು ಪುರುಷರು ಗಾಯಗೊಂಡಿದ್ದಾರೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನ

ಪಿಟ್ಸ್ ಬರ್ಗ್ ನ ಅತ್ಯಂತ ಹಳೆಯ ಸಿನಗಾಗ್ ನಲ್ಲಿ ಆರು ತಿಂಗಳ ಹಿಂದೆ ನಡೆದ ಹತ್ಯಾಕಾಂಡದಲ್ಲಿ ಶೂಟರ್ ವೊಬ್ಬ ಹನ್ನೊಂದು ಮಂದಿಯನ್ನು ಕೊಂದಿದ್ದ. ಆರು ಮಂದಿ ಗಾಯಗೊಂಡಿದ್ದರು. ಪೊವೆಯಲ್ಲಿ ಘಟನೆ ನಡೆದಿರುವುದು ಚಬಾದ್ ನಲ್ಲಿ. ಈ ಯಹೂದಿಗಳ ಶ್ರದ್ಧಾ ಕೇಂದ್ರಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶ ಇದೆ.

Shoot out

ಶನಿವಾರ ಬೆಳಗ್ಗೆ ಹನ್ನೊಂದರಿಂದ ರಾತ್ರಿ ಏಳು ಗಂಟೆ ತನಕ ವಿಶೇಷ ಕಾರ್ಯಕ್ರಮ ಇತ್ತು. ಬಂದೂಕುಧಾರಿಯು ಬೆಳಗ್ಗೆ ಹನ್ನೊಂದು ಮೂವತ್ತಕ್ಕೆ ಸ್ವಲ್ಪ ಮುಂಚೆ ಸಿನಗಾಗ್ ಪ್ರವೇಶಿಸಿದ್ದಾನೆ. ಗುಂಡು ಹಾರಿಸುವ ವೇಳೆ ಎರಡು ಪ್ರಾರ್ಥನೆ ನಡೆಯುತ್ತಿತ್ತು. ಗುಂಡು ಹಾರಿಸಿದ ಹತ್ತೊಂಬತ್ತು ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆ ಬಗ್ಗೆ ಸಂತಾಸ ಸೂಚಿಸಿದ್ದಾರೆ.

English summary
A 19-year-old gunman opened fire at the Chabad of Poway synagogue in Poway, California, on Saturday morning, leaving one dead and three injured, according to authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X