ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ವರ್ಷಗಳ ಹಿಂದೆಯೇ ಕೊರೊನಾ: ಚೀನಾ ಗುಟ್ಟು ಬಿಚ್ಚಿಟ್ಟ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 18: ಇಡೀ ವಿಶ್ವವನ್ನೇ ನಡುಗಿಸಿರುವ ಈ ಕೊರೊನಾ ಬಂದಿದ್ದು ಆರೇಳು ತಿಂಗಳ ಹಿಂದಲ್ಲಾ, ಎಂಟು ವರ್ಷಗಳ ಹಿಂದೆ ಎನ್ನುವ ಗುಟ್ಟನ್ನು ಅಮೆರಿಕ ಬಿಚ್ಚಿಟ್ಟಿದೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಅದಕ್ಕೂ ಮೊದಲು ಇದರ ಅರಿವೇ ಇರಲಿಲ್ಲ ಎಂದೇನು ಚೀನಾ ಹೇಳುತ್ತಿದೆ ಅದು ಸಂಪೂರ್ಣ ಸುಳ್ಳು ಎಂಬ ಅಂಶವನ್ನು ಅಮೆರಿಕದ ಸಂಶೋಧಕರು ದಾಖಲೆ ಸಹಿತವಾಗಿ ಬಹಿರಂಗಪಡಿಸಿದ್ದಾರೆ.

ಎಂಟು ವರ್ಷಗಳ ಹಿಂದೆಯೇ ಈ ಕೊವಿಡ್ ರೋಗ ಚೀನಾವನ್ನು ಕಾಡಿತ್ತು. ಅದರ ಭಯಾನಕತೆಯ ಅರಿವು ಚೀನಾಕ್ಕೆ ಮೊದಲೇ ಇತ್ತು, ಅಷ್ಟಾದರೂ ಇಡೀ ವಿಶ್ವಕ್ಕೆ ವೈರಸ್‌ ಹರಡಲು ಅದು ಕಾರಣವಾಗಿದೆ ಎಂಬ ಅಂಶವನ್ನು ಅಮೆರಿಕದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ರಷ್ಯಾ ಆಸಕ್ತಿ? ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ರಷ್ಯಾ ಆಸಕ್ತಿ?

ಚೀನಾದಲ್ಲಿ ಈ ಸೋಂಕು 2012ರಲ್ಲಿ ಪತ್ತೆಯಾದ ಸಮಯದಲ್ಲಿಯೇ ಫಿಲಿಪ್ಪೀನ್ಸ್‌ ಕ್ವಿಜೋನ್ ಸಿಟಿಯಲ್ಲಿ ಜಿ -614 ಪತ್ತೆಯಾಗಿದೆ, ಇದು ವುಹಾನ್ ವೈರಸ್‌ಗಿಂತ 1.22 ಪಟ್ಟು ವೇಗವಾಗಿ ಹರಡಿತ್ತು. ಮಲೇಷ್ಯಾದಲ್ಲಿ ಜಿ -614 ಎಂಬ ವೈರಸ್‌ ಹರಡಿತ್ತು. ಇವೆಲ್ಲವೂ ಚೀನಾದ ಕರೊನಾ ವೈರಸ್‌ನ ವಿವಿಧ ರೂಪಾಂತರಗಳೇ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಈ ಹಿಂದೆ ಕರೊನಾದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಚೀನಾ ಹೇಳುತ್ತಿದೆ. ಆದರೆ ಇದು ಸಂಪೂರ್ಣ ಸುಳ್ಳು, ಪ್ರಬಂಧವೇ ಇದರ ಬಗ್ಗೆ ಬಿಚ್ಚಿಡುತ್ತಿದೆ. ಕಾರ್ಮಿಕರ ಮಾದರಿಗಳನ್ನು ವುಹಾನ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ವೈರಸ್ ಸೋರಿಕೆಯಾಗಿದೆ. ಅಲ್ಲಿಂದಲೇ ಈ ವೈರಸ್‌ ಬೆಳವಣಿಗೆ ಶುರುವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚೀನಾದ ಗಣಿಯಲ್ಲಿ ಈ ವೈರಸ್ ಪತ್ತೆ

ಚೀನಾದ ಗಣಿಯಲ್ಲಿ ಈ ವೈರಸ್ ಪತ್ತೆ

ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ದೇಶಗಳು ವುಹಾನ್ ಲ್ಯಾಬ್‌ನಲ್ಲಿ ಉದ್ದೇಶಪೂರ್ವಕವಾಗಿ ವೈರಸ್ ಉತ್ಪಾದಿಸಲ್ಪಟ್ಟಿದೆ ಎಂದು ಹೇಳುತ್ತಿವೆ.

ಸುಮಾರು ಎಂಟು ವರ್ಷಗಳ ಹಿಂದೆ ಚೀನಾದ ಗಣಿಯಲ್ಲಿ ಈ ವೈರಸ್ ಪತ್ತೆಯಾಗಿದ್ದು, ಇದರ ಸಂಪೂರ್ಣ ಅರಿವು ಚೀನಾಕ್ಕೆ ಇದೆ ಎಂದು ಅವರು ಹೇಳಿದ್ದಾರೆ.
ಮಾಂಸದ ಮಾರುಕಟ್ಟೆಯಲ್ಲಿ ವೈರಸ್ ಪತ್ತೆ

ಮಾಂಸದ ಮಾರುಕಟ್ಟೆಯಲ್ಲಿ ವೈರಸ್ ಪತ್ತೆ

ಮಾಂಸ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಪತ್ತೆಯಾಗಿದೆ ಎಂದು ಚೀನಾ ಹೇಳುತ್ತಿದೆ. ಆದರೆ ವಿಜ್ಞಾನಿಗಳು ಈ ವೈರಸ್‌ ಕುರಿತು ಎಂಟು ವರ್ಷಗಳ ಮೊದಲೇ ಚೀನಾದಲ್ಲಿ ಪತ್ತೆಯಾಗಿದೆ ಎಂದಿದ್ದಾರೆ.

ಕೊರೊನಾ ವೈರಸ್ ತೀವ್ರತೆಯ ಅರಿವು ಚೀನಾಕ್ಕೆ ಇತ್ತು

ಕೊರೊನಾ ವೈರಸ್ ತೀವ್ರತೆಯ ಅರಿವು ಚೀನಾಕ್ಕೆ ಇತ್ತು

ಈ ವೈರಸ್‌ನ ತೀವ್ರತೆಯ ಬಗ್ಗೆ ಅರಿವಿದ್ದರೂ ಅದರ ಬಗ್ಗೆ ಮುಚ್ಚಿಟ್ಟ ಚೀನಾ ಇದೀಗ ಇಡೀ ವಿಶ್ವಕ್ಕೆ ಸೋರಿಕೆ ಆಗುವ ಹಾಗೆ ಮಾಡಿದೆ ಎನ್ನುವುದು ವಿಜ್ಞಾನಿಗಳ ಆರೋಪ.

ಆ ಸಮಯದಲ್ಲಿ ಅನಾರೋಗ್ಯ ಪೀಡಿತ ರೋಗಿಗಳಲ್ಲಿ ಮೂವರು ಮೃತಪಟ್ಟಿದ್ದರು. ಈ ಎಲ್ಲಾ ಮಾಹಿತಿಯು ಚೀನಾದ ವೈದ್ಯ ಲಿ ಕ್ಸು ಅವರ ಸ್ನಾತಕೋತ್ತರ ಪ್ರಬಂಧದ ಭಾಗವಾಗಿದೆ. ಪ್ರಬಂಧವನ್ನು ಡಾ. ಜೊನಾಥನ್ ಲಾಥಮ್ ಮತ್ತು ಡಾ. ಆಲಿಸನ್ ವಿಲ್ಸನ್ ಅನುವಾದಿಸಿದ್ದಾರೆ ಮತ್ತು ಅಧ್ಯಯನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ವೈರಸ್ ಮೊದಲು ಪತ್ತೆಯಾಗಿದ್ದೆಲ್ಲಿ?

ವೈರಸ್ ಮೊದಲು ಪತ್ತೆಯಾಗಿದ್ದೆಲ್ಲಿ?

ಈ ಕುರಿತು ದಾಖಲೆ ಸಹಿತ ವಿವರಿಸಿರುವ ವಿಜ್ಞಾನಿಗಳು, ಚೀನಾದ ನೈಋತ್ಯ ದಿಕ್ಕಿನ ಯುನ್ನಾನ್ ಪ್ರಾಂತ್ಯದ ಮೊಜಿಯಾಂಗ್ ಗಣಿ ಬಳಿ ಈ ವೈರಸ್‌ ಮೊದಲು ಪತ್ತೆಯಾಗಿದೆ. 2012ರಲ್ಲಿ ಕೆಲವು ಕಾರ್ಮಿಕರನ್ನು ಸತ್ತು ಬಿದ್ದಿದ್ದ ಬಾವಲಿಗಳನ್ನು ಸ್ವಚ್ಛಗೊಳಿಸಲು ಗಣಿಗೆ ಕಳುಹಿಸಲಾಗಿದೆ. ಈ ಕಾರ್ಮಿಕರು ಗಣಿಯಲ್ಲಿ 14 ದಿನಗಳನ್ನು ಅಲ್ಲಿ ಕಳೆದಿದ್ದರು. ನಂತರ 6 ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದರು. ಈ ರೋಗಿಗಳಿಗೆ ಹೆಚ್ಚಿನ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ತೋಳು ಮತ್ತು ಕಾಲುಗಳಲ್ಲಿ ತೀವ್ರವಾದ ನೋವು, ತಲೆನೋವು ಮತ್ತು ಗಂಟಲು ನೋವು ಇತ್ತು. ಈ ಎಲ್ಲಾ ಲಕ್ಷಣಗಳು ಇಂದು ಕೋವಿಡ್ -19 ರೋಗದ ಲಕ್ಷಣಗಳು ಎಂದಿದ್ದಾರೆ.

English summary
Two US researchers have made shocking disclosures about Covid-19. These researchers believe that the virus was found in a mine in China about eight years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X