ಅಮೆರಿಕದಲ್ಲಿ ಒಂದೇ ದಿನ 65000 ಕೊವಿಡ್ ಪ್ರಕರಣ ಪತ್ತೆ

ವಾಷಿಂಗ್ಟನ್, ಜುಲೈ 10: ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಕಡಿಮೆಯಾಗುವ ಸೂಚನೆಯೇ ಸಿಗುತ್ತಿಲ್ಲ. ಪ್ರತಿದಿನವೂ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ.

ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ 65 ಸಾವಿರಕ್ಕೂ ಹೆಚ್ಚು ಕೊವಿಡ್ ಕೇಸ್‌ಗಳು ಯುಎಸ್‌ನಲ್ಲಿ ದಾಖಲಾಗಿದೆ. ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿಯ ಪ್ರಕಾರ ಗುರುವಾರ ಒಂದೇ ದಿನ ಅಮೆರಿಕದಲ್ಲಿ 61,067 ಜನರಿಗೆ ಸೋಂಕು ತಗುಲಿದೆ.

ಈ ಮೂಲಕ ಕೊರೊನಾ ಹಾಟ್‌ಸ್ಪಾಟ್‌ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32.1 ಲಕ್ಷ (3,219,999) ದಾಟಿದೆ. ಕಳೆದ 24 ಗಂಟೆಯಲ್ಲಿ 960 ಜನರು ಅಮೆರಿಕದಲ್ಲಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ, ಯುಎಸ್ ಒಟ್ಟು ಮೃತರ ಸಂಖ್ಯೆ 135,822ಕ್ಕೆ ಏರಿದೆ.

us-reported-more-than-65-000-covid19-cases-in-last-24-hours

ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಗುರುವಾರ ಒಂದೇ ದಿನ 42,907 ಕೊರೊನಾ ಕೇಸ್ ವರದಿಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,759,103ಕ್ಕೆ ಜಿಗಿದಿದೆ.

ಅತಿ ಹೆಚ್ಚು ಕೊರೊನಾ ಸೋಂಕು ಹೊಂದಿರುವ ಜಗತ್ತಿನ ಟಾಪ್ ಐದು ದೇಶಗಳ ಪಟ್ಟಿ:
ಅಮೆರಿಕ: ಒಟ್ಟು ಸೋಂಕಿತರು - 3,219,999, ಒಟ್ಟು ಸಾವು 135,822
ಬ್ರೆಜಿಲ್: ಒಟ್ಟು ಸೋಂಕಿತರು - 1,759,103, ಒಟ್ಟು ಸಾವು 69,254
ಭಾರತ: ಒಟ್ಟು ಸೋಂಕಿತರು - 794,842, ಒಟ್ಟು ಸಾವು 21,623
ರಷ್ಯಾ: ಒಟ್ಟು ಸೋಂಕಿತರು - 707,301, ಒಟ್ಟು ಸಾವು 10,843
ಪೆರು: ಒಟ್ಟು ಸೋಂಕಿತರು - 316,448, ಒಟ್ಟು ಸಾವು 11,314

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+