ಟಿಕ್‌ಟಾಕ್ ಸೇರಿ ಚೀನಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಲು ಅಮೆರಿಕ ಚಿಂತನೆ

ವಾಷಿಂಗ್ಟನ್, ಜುಲೈ 7: ಟಿಕ್‌ಟಾಕ್ ಸೇರಿ ಚೀನಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಲು ಅಮೆರಿಕ ಚಿಂತನೆ ನಡೆಸಿದೆ.

ಮೈಕ್ ಪಾಂಪಿಯೋ ಈ ಕುರಿತು ಮಾಹಿತಿ ನೀಡಿದ್ದು, ಇದೆಲ್ಲವನ್ನೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿಡಲು ಬಯಸುವುದಿಲ್ಲ, ಆದರೆ ಈ ವಿಷಯಗಳ ಕುರಿತು ನಾವು ಗಮನಹರಿಸಿದ್ದೇವೆ.

ಟಿಕ್ ಟಾಕ್ ಅಪ್ಲಿಕೇಷನ್ ಚೀನಾದಲ್ಲಿ ಇಲ್ಲ, ಅವರೇ ತಮ್ಮ ಅಪ್ಲಿಕೇಷನ್‌ಗಳಿಂದ ದೂರ ಇದ್ದಾರೆ.ಹಾಗಿದ್ದ ಮೇಲೆ ಅವರ ಅಪ್ಲಿಕೇಷನ್‌ಗಳನ್ನು ನಾವು ಬಳಕೆ ಮಾಡಿ ಪ್ರಯೋಜನವೇನಿದೆ ಎಂದಿದ್ದಾರೆ.

Looking At Banning Chinese Social Media Apps Says Mike Pompeo

ಟಿಕ್‌ಟಾಕ್ ಅಪ್ಲಿಕೇಷನ್ ಚೀನಾ ಮೂಲದ ಬೈಟ್‌ ಡ್ಯಾನ್ಸ್ ಕಂಪನಿಯದ್ದಾಗಿದ್ದು, ಇತ್ತೀಚೆಗಷ್ಟೇ ಭಾರತವು ಟಿಕ್‌ ಟಾಕ್ ಸೇರಿ ಒಟ್ಟು 59 ಚೀನಾ ಮೂಲದ ಅಪ್ಲಿಕೇಷನ್‌ಗೆ ನಿರ್ಬಂಧ ಹೇರಿತ್ತು.

ಕೊರೊನಾ ವೈರಸ್ ಹರಡುವಿಕೆ ಕುರಿತು ಅಮೆರಿಕ ಹಾಗೂ ಚೀನಾದ ನಡುವೆ ಉದ್ವಿಗ್ನತೆ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಡ್ರೇಟ್ ವಾರ್ ಮುಂದುವರೆಯುತ್ತಲೇ ಇದೆ.

ಜೂನ್ 28 ರಂದು ಭಾರತೀಯ ಸರ್ಕಾರಕ್ಕೆ ಟಿಕ್‌ಟಾಕ್ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ಮೇಯರ್ ಬರೆದ ಪತ್ರವನ್ನು ನೋಡಿದೆ ಎಂದು ವರದಿ ಮಾಡಿರುವ ರಾಯಿಟರ್ಸ್ ಪ್ರಕಾರ, ಚೀನಾ ಸರ್ಕಾರ ಎಂದಿಗೂ ಬಳಕೆದಾರರ ಡೇಟಾವನ್ನು ಕೋರಿಲ್ಲ, ಅಥವಾ ಕೇಳಿದರೆ ಕಂಪನಿಯು ಅದನ್ನು ನೀಡುವುದಿಲ್ಲ ಎಂದು ಕೆವಿನ್ ಮೇಯರ್ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+