H-1B ವೀಸಾ ಶುಲ್ಕ ಶೇ22ರಷ್ಟು ಏರಿಕೆಗೆ ಮುಂದಾದ ಯುಎಸ್

ವಾಷಿಂಗ್ಟನ್, ಜೂನ್ 1: ಕೊರೊನಾವೈರಸ್, ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ ಜೊತೆ ಹೋರಾಟ ನಡೆಸಿರುವ ಡೊನಾಲ್ಡ್ ಟ್ರಂಪ್ ನೇತೃತ್ವ ಅಮೆರಿಕ ಸರ್ಕಾರವು ಈಗ ವೀಸಾ ಶುಲ್ಕಗಳನ್ನು ಹೆಚ್ಚಳ ಮಾಡಲು ಸಿದ್ಧತೆ ನಡೆಸಿರುವ ಸುದ್ದಿ ಬಂದಿದೆ.

ಎಚ್ 1 ಬಿ ವೀಸಾ ಶುಲ್ಕವನ್ನು ಶೇ 22ರಷ್ಟು ಏರಿಕೆ ಸೇರಿದಂತೆ ಕೆಲ ವೀಸಾ ನಿಯಮಗಳ ಬದಲಾವಣೆ ಕುರಿತ ಶಿಫಾರಸ್ಸನ್ನು ಯುಎಸ್ ನಾಗರಿಕ ಹಾಗೂ ವಲಸೆ ಸೇವೆ ಸಂಸ್ಥೆ (USCIS) ಮಾಡಿದೆ. ಈ ಶಿಫಾರಸ್ಸುಗಳನ್ನು ಅಧ್ಯಕ್ಷರ ಕಚೇರಿಗೆ ಕಳಿಸಲಾಗಿದೆ. ಈ ವಾರದಲ್ಲಿ ಶಿಫಾರಸ್ಸುಗಳಿಗೆ ಅಂಕಿತ ಬೀಳುವ ಸಾಧ್ಯತೆಯಿದೆ.

USCIS ಶಿಫಾರಸ್ಸಿನಂತೆ ಎಚ್ 1 ಬಿ ವೀಸಾ ಶುಲ್ಕ ಶೇ 22ರಷ್ಟು, ತಂತ್ರಜ್ಞಾನ ಆಧಾರಿತ ಸಂಸ್ಥೆಗಳಿಗೆ ಮಾತ್ರ ನೀಡುವ ಎಲ್ 1 ವೀಸಾ ಶುಲ್ಕ ಶೇ 77ರಷ್ಟು ಹೆಚ್ಚಳ ಮಾಡಲು ಸೂಚಿಸಲಾಗಿದೆ. ವೀಸಾ ಶುಲ್ಕ ಹೆಚ್ಚಳ ಅನಿವಾರ್ಯವಾಗಿದ್ದು, ವೀಸಾ ಶುಲ್ಕ ಆದಾಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

US Govt likely to Hike H-1B Fees 22%

ಶಿಫಾರಸ್ಸುಗಳಿಗೆ ಅಂಕಿತ ಬಿದ್ದರೆ, ಎಚ್ 1 ಬಿ ವೀಸಾ ಶುಲ್ಕ ಶೇ 22ರಷ್ಟು ಏರಿಕೆ ಕಂಡು 560 ಯುಎಸ್ ಡಾಲರ್ ನಷ್ಟಾಗಲಿದೆ. ಎಲ್ 1 ಇಂಟ್ರಾ ಕಂಪನಿ ವರ್ಗಾವಣೆಗೆ ಬಳಸುವ ಎಲ್ 1 ವೀಸಾ ಶುಲ್ಕ ಶೇ 77ರಷ್ಟು ಏರಿಕೆ ಕಂದು 815 ಯುಎಸ್ ಡಾಲರ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+