ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ!

ವಾಷಿಂಗ್ಟನ್, ಡಿಸೆಂಬರ್ 23: ಅಮೆರಿಕ ಸರಕಾರವನ್ನೇ ಭಾಗಶಃ ಬಂದ್ ಮಾಡಿ ಭಾನುವಾರಕ್ಕೆ ಎರಡನೇ ದಿನ. ಇದು ಕ್ರಿಸ್ ಮಸ್ ತನಕ ಮುಂದುವರಿಯುವ ಅಂದಾಜಿದೆ. ಕಾಂಗ್ರೆಸ್ ವಾರಾಂತ್ಯದ ತನ ಮುಂದೂಡಲಾಗಿದೆ. ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಮಾಡುವುದಕ್ಕೆ ಹಣಕಾಸು ಒದಗಿಸುವುದಕ್ಕೆ ಸಂಬಂಧಿಸಿದಂತೆ ಟ್ರಂಪ್ ವಾದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದೆ.

ಇದೀಗ ಸರಕಾರವೇ ಸ್ಥಗಿತ ಆಗಿರುವುದರಿಂದ ಶನಿವಾರದಿಂದಲೇ ಹಲವು ಮುಖ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿಲ. ಕ್ರಿಸ್ ಮಸ್ ನಲ್ಲಿ ಫ್ಲೋರಿಡಾಗೆ ಹೋಗುವ ಬದಲು ವಾಷಿಂಗ್ಟನ್ ನಲ್ಲೇ ಉಳಿಯುವುದಾಗಿ ಟ್ರಂಪ್ ಹೇಳಿದ್ದಾರೆ. ನಾನು ವೈಟ್ ಹೌಸ್ ನಲ್ಲೇ ಇದ್ದೇನೆ. ಶ್ರಮಪಟ್ಟು ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಗಡಿ ಸುರಕ್ಷತೆ (ತಂಡಗಳು, ಮಾದಕ ವಸ್ತುಗಳು, ಮಾನವ ಕಳ್ಳಸಾಗಣೆ ಇನ್ನಷ್ಟು) ಬಗ್ಗೆ ಡೆಮಾಕ್ರಟ್ ಗಳ ಜತೆ ಚರ್ಚೆ ನಡೆಸಿದೆವು. ಆದರೆ ಅದು ಬಹಳ ಸಮಯ ಹಿಡಿಸಿತು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಂದುಕೊಂಡಿರುವಂತೆ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಐದು ಬಿಲಿಯನ್ ಅಮೆರಿಕನ್ ಡಾಲರ್ ಹಣ ಬೇಕು.

ಚುನಾವಣೆ ವೇಳೆ ಭರವಸೆ ನೀಡಿದ್ದರು

ಚುನಾವಣೆ ವೇಳೆ ಭರವಸೆ ನೀಡಿದ್ದರು

ಅನಧಿಕೃತ ವಲಸೆಗೆ ತಡೆ ಒಡ್ಡಬೇಕು ಎಂಬ ಕಾರಣಕ್ಕೆ ಈ ಗೋಡೆ ನಿರ್ಮಾಣದ ಭರವಸೆಯನ್ನು ಚುನಾವಣೆ ಪ್ರಚಾರದ ವೇಳೆ ಅವರು ನೀಡಿದ್ದರು. ಅದಕ್ಕೆ ಡೆಮಾಕ್ರಟ್ಸ್ ವಿರೋಧ ವ್ಯಕ್ತಪಡಿಸಿದ್ದರು. ವ್ಯವಹಾರಕ್ಕೆ ಗೈರಾಗಿದ್ದರಿಂದ ಹಲವಾರು ಸಂಸ್ಥೆಗಳಿಗೆ ಶುಕ್ರವಾರದ ರಾತ್ರಿಯಿಂದಲೇ ಸರಕಾರದ ಹಣಕಾಸು ಬಿಡುಗದೆ ಆಗುವುದು ನಿಂತುಹೋಗಿದೆ. ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಹಾಗೂ ಸೆನೆಟ್ ಸದಸ್ಯರು ಶನಿವಾರ ಅಧಿವೇಶನದಲ್ಲಿ ಸೇರಿದ್ದರು. ಆದರೆ ಯಾವುದೇ ಒಪ್ಪಂದಕ್ಕೆ ಬರಲಾಗದೇ ಮುಂದೂಡಲಾಗಿದೆ. ಗುರುವಾರದ ತನಕ ಯಾವುದೇ ಮತದ ನಿರೀಕ್ಷೆ ಕೂಡ ಇಲ್ಲವಾಗಿದೆ.

ಲಿಬರ್ಟಿ ಸ್ಟ್ಯಾಚ್ಯು ಹಾಗೂ ಎಲ್ಲಿಸ್ ದ್ವೀಪ ತೆರೆದಿವೆ

ಲಿಬರ್ಟಿ ಸ್ಟ್ಯಾಚ್ಯು ಹಾಗೂ ಎಲ್ಲಿಸ್ ದ್ವೀಪ ತೆರೆದಿವೆ

ಸಾರ್ವಜನಿಕ ಶೌಚಾಲಯಗಳು ಬಾಗಿಲು ಮುಚ್ಚಿವೆ. ಅಷ್ಟೇ ಅಲ್ಲ, ವೈಟ್ ಹೌಸ್ ಸಂದರ್ಶಕರ ಕೇಂದ್ರ, ರಾಷ್ಟ್ರೀಯ ಕ್ರಿಸ್ ಮಸ್ ಟ್ರೀ, ನ್ಯಾಷನಲ್ ಆರ್ಕೈವ್ಸ್ ಇತರ ಸರಕಾರಿ ನಿಯಂತ್ರಿತ ಸ್ಥಳಗಳು ಬಂದ್ ಆಗಿವೆ. ನ್ಯೂಯಾರ್ಕ್ ಗವರ್ನರ್ ಅನುದಾನ ಒದಗಿಸಿರುವುದರಿಂದ ಲಿಬರ್ಟಿ ಸ್ಟ್ಯಾಚ್ಯು ಹಾಗೂ ಎಲ್ಲಿಸ್ ದ್ವೀಪ ತೆರೆದಿವೆ.

ಮೂರನೇ ಬಾರಿಗೆ ಸರಕಾರ ಭಾಗಶಃ ಬಂದ್

ಮೂರನೇ ಬಾರಿಗೆ ಸರಕಾರ ಭಾಗಶಃ ಬಂದ್

ಹೌಸ್ ಹಾಗೂ ಸೆನೆಟ್ ಎರಡೂ ಕಡೆ ಟ್ರಂಪ್ ರ ಸ್ವಂತ ರಿಪಬ್ಲಿಕನ್ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಈ ವರ್ಷದಲ್ಲಿ ಮೂರನೇ ಬಾರಿಗೆ ಸರಕಾರ ಭಾಗಶಃ ಬಂದ್ ಆಗಿದೆ. ಜನವರಿಯಲ್ಲಿ ಇದು ಬದಲಾಗಲಿದ್ದು, ಹೌಸ್ ಡೆಮಾಕ್ರಟಿಕ್ ಕೈಗೆ ಸಿಗಲಿದೆ. ಡೆಮಾಕ್ರಟ್ ಉನ್ನತ ಸೆನೆಟ್ ಪ್ರಕಾರ, ಈಗಿನ ಸ್ಥಿತಿಗೆ ಟ್ರಂಪ್ ಕಾರಣ. ಈ ಸ್ಥಗಿತ ಆಗಿರುವುದು ಗಡಿ ಸುರಕ್ಷತೆಗಾಗಿ ಅಂತಲ್ಲ: ಅಧ್ಯಕ್ಷ ಟ್ರಂಪ್ ಬಿಲಿಯನ್ ಗಟ್ಟಲೆ ಡಾಲರ್ ಗಳನ್ನು ಒತ್ತಾಯಿಸುತ್ತಿರುವುದು ದುಬಾರಿ, ಪರಿಣಾಮ ಬೀರದ ಗೋಡೆ ನಿರ್ಮಾಣಕ್ಕೆ. ಅದಕ್ಕೆ ಅಮೆರಿಕದ ಬಹುಸಂಖ್ಯಾತರ ಬೆಂಬಲ ಇಲ್ಲ ಎಂದು ಶುಮಾರ್ ಎಂಬ ಸೆನೆಟ್ ಹೇಳಿದ್ದಾರೆ.

ಎಂಟು ಲಕ್ಷ ಸರಕಾರಿ ನೌಕರರ ಮೇಲೆ ಪರಿಣಾಮ

ಎಂಟು ಲಕ್ಷ ಸರಕಾರಿ ನೌಕರರ ಮೇಲೆ ಪರಿಣಾಮ

ಎಂಟು ಲಕ್ಷ ಸರಕಾರಿ ನೌಕರರ ಮೇಲೆ ಇದರಿಂದ ಪರಿಣಾಮ ಆಗಿದೆ. ಸುರಕ್ಷತೆಗೆ ಸಂಬಂಧಿಸಿದ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಆದರೆ ಹಲವು ಸಂಸ್ಥೆಗಳಿಗೆ ಕ್ರಿಸ್ ಮಸ್ ಆಚರಣೆಗೆ ಸಮಸ್ಯೆಯಾಗಿದೆ. ಭದ್ರತೆ ಆಡಳಿತ ಅಧಿಕಾರಿಗಳು ಸೇರಿದಂತೆ ಹಲವರಿಗೆ ವೇತನ ಪಾವತಿಯಾಗಿಲ್ಲ. ಇನ್ನು ಇದರಿಂದ ದೀರ್ಘಾವಧಿಯ ತೊಂದರೆ ಆಗಲ್ಲ. ಟ್ರಂಪ್ ಈ ಸಮಸ್ಯೆ ನಿವಾರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಆದರೆ ಸದ್ಯಕ್ಕಂತೂ ಸಮಸ್ಯೆ ಎದುರಾಗಿರುವುದು ಹೌದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+