ಮತ್ತೆ 100 ಮಿಲಿಯನ್ ಮಾಡೆರ್ನಾ ಕೊರೊನಾ ಲಸಿಕೆ ಖರೀದಿಸಿದ ಅಮೆರಿಕ

ವಾಷಿಂಗ್ಟನ್, ಡಿಸೆಂಬರ್ 12:ಅಮೆರಿಕ ಸರ್ಕಾರವು ಮತ್ತೆ 100 ಮಿಲಿಯನ್ ಡೋಸ್ ಮಾಡೆರ್ನಾ ಕೊರೊನಾ ಲಸಿಕೆಯನ್ನು ಹೆಚ್ಚುವರಿಯಾಗಿ ಖರೀದಿಸಿದೆ.

Recommended Video

      24 ಗಂಟೆಯೊಳಗಾಗಿ ಅಮೆರಿಕನ್ನರಿಗೆ ದೊರೆಯಲಿದೆ Pfizer vaccine | America | Vaccine | Oneindia Kannada

      ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ಈ ತಿಂಗಳಲ್ಲೇ ಮಾಡೆರ್ನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಿದೆ.

      ಸುಮಾರು 3.2 ಬಿಲಿಯನ್ ಮೊತ್ತದ ಮಾಡೆರ್ನಾ ಲಸಿಕೆಯು 2021ರೊಳಗಾಗಿ ಅಮೆರಿಕದ ಕೈಸೇರಲಿದೆ. ಅಮೆರಿಕ ಸರ್ಕಾರ ಮೊದಲು 1.5ಮಿಲಿಯನ್ ವೆಚ್ಚದಲ್ಲಿ ಕೊರೊನಾ ಲಸಿಕೆ ಪಡೆಯಲು ಮುಂದಾಗಿತ್ತು, ಆದರೆ ಅದನ್ನು ಇದೀಗ ವಿಸ್ತರಿಸಿದ್ದು, 4.1 ಬಿಲಿಯನ್ ವೆಚ್ಚದಲ್ಲಿ 400 ಮಿಲಿಯನ್ ಅಷ್ಟು ಡೋಸ್‌ಗಳನ್ನು ಪಡೆಯುತ್ತಿದೆ.

      Vaccine

      ಫೈಜರ್ ಲಸಿಕೆಯನ್ನು 100 ಮಿಲಿಯನ್‌ ಅಷ್ಟು ಪಡೆಯಲಿದೆ.

      ತನ್ನ ಕೊರೊನಾ ವೈರಸ್ ಲಸಿಕೆಯು ಸೋಂಕಿನ ವಿರುದ್ಧ ಪ್ರಬಲ ರಕ್ಷಣೆ ನೀಡುತ್ತದೆ ಎಂಬುದು ತನ್ನ ಅಧ್ಯಯನಗಳ ಫಲಿತಾಂಶದಿಂದ ದೃಢಪಟ್ಟಿರುವುದರಿಂದ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಮಾಡೆರ್ನಾ ಇಂಕ್.

      ಅಮೆರಿಕ ಮತ್ತು ಯುರೋಪಿಯನ್ ದೇಶಗಳ ಔಷಧ ನಿಯಂತ್ರಕ ಸಂಸ್ಥೆಗಳಿಗೆ ಮನವಿ ಮಾಡಿದೆ. ಸೀಮಿತ ಪ್ರಮಾಣದಲ್ಲಿ ಲಸಿಕೆ ನೀಡುವಿಕೆ ಪ್ರಾರಂಭಿಸಿದರೆ ಕೊರೊನಾ ವೈರಸ್ ಸನ್ನಿವೇಶ ಮತ್ತಷ್ಟು ಕೈಮೀರಿ ಹೋಗುವುದನ್ನು ನಿಯಂತ್ರಿಸಬಹುದು ಎಂದು ಅದು ಹೇಳಿದೆ.

      ಅಮೆರಿಕ ಮತ್ತು ಯುರೋಪ್‌ಗಳಲ್ಲಿ ತೀವ್ರವಾಗಿ ಹರಡುತ್ತಿರುವ ಸೋಂಕನ್ನು ನಿಯಂತ್ರಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಪ್ರಯೋಗಿಸುತ್ತಿರುವ ಲಸಿಕೆಗಳು ಯಶ ಕಾಣಬೇಕಿವೆ.

      ಅಮೆರಿಕದಲ್ಲಿ ಈಗಾಗಲೇ ಫೈಜರ್ ಮತ್ತು ಅದರ ಜರ್ಮನ್ ಸಹಭಾಗಿ ಬಯೋಎನ್‌ಟೆಕ್ ಸಂಸ್ಥೆಗಳು ಲಸಿಕೆಯ ತುರ್ತುಬಳಕೆಗೆ ಡಿಸೆಂಬರ್‌ನಿಂದಲೇ ಅನುಮತಿ ನೀಡುವಂತೆ ಮನವಿ ಮಾಡಿವೆ. ಅದರ ಬೆನ್ನಲ್ಲೇ ಮಾಡೆರ್ನಾ ಸಂಸ್ಥೆ ಕೂಡ ತುರ್ತು ಬಳಕೆಯ ಅನುಮತಿಗೆ ಕೋರಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+