ಸಮೀಕ್ಷೆಗಳೆಲ್ಲ ಸುಳ್ಳು, ಏನೇ ಆದರೂ ನಾನೇ ಗೆಲ್ಲೋದು ಎಂದ ಟ್ರಂಪ್!

ವಾಷಿಂಗ್ಟನ್, ನವೆಂಬರ್ 3: ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಗೆಲುವು ತಮ್ಮದೇ ಎಂದು ಅಮೆರಿಕ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಚುನಾವಣೆಯ ಹಿಂದಿನ ದಿನ ಕೊನೆಯ ಪ್ರಚಾರದಲ್ಲಿ ಮಾತನಾಡಿದ ಅವರು, ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಡೊನಾಲ್ಡ್ ಟ್ರಂಪ್ ಅವರು ಹೀನಾಯ ಸೋಲು ಕಾಣಲಿದ್ದಾರೆ ಎಂದು ಹೇಳುವ ಸಮೀಕ್ಷೆಗಳನ್ನು ಅವರು ನಿರಾಕರಿಸಿದರು. ನಾರ್ತ್ ಕೆರೊಲಿನಾದ ಫಾಯೆಟ್ಟೆವಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, 'ನಾನು ಈ ಎಲ್ಲಾ ನಕಲಿ ಚುನಾವಣಾ ಸಮೀಕ್ಷೆಗಳನ್ನು ನೋಡಿದ್ದೇನೆ. ಆದರೆ ಇದಾವುದೂ ಲೆಕ್ಕಕ್ಕಿಲ್ಲ. ನಾನೇ ಗೆಲ್ಲುತ್ತೇನೆ' ಎಂದರು.

ನಾಲ್ಕು ವರ್ಷದ ಹಿಂದೆ ಎದುರಾಳಿಗಳಿಗೆ ಆಘಾತ ನೀಡಿದ ತಮ್ಮ ಗೆಲುವಿನ ಉತ್ಸಾಹವನ್ನು ಮರಳಿ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. 'ನೀವು ಹೊರಗಿನವನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಿರಿ. ಆತನೇ ಕೊನೆಗೆ ಅಮೆರಿಕ ಮೊದಲು ನೀತಿಯನ್ನು ಅಳವಡಿಸಿದ. ಮೊದಲು ಹೋಗಿ ಮತ ಹಾಕಿ. ಅದನ್ನಷ್ಟೇ ನಾನು ಕೇಳುವುದುಸ' ಎಂದು ಟ್ರಂಪ್ ಹೇಳಿದರು.

 US Elections: Donald Trump Dismisses Opinion Polls Are Fake, Going To Win Anyway

ಇನ್ನೊಂದೆಡೆ ನಾಲ್ಕು ವರ್ಷಗಳ ಅಮೆರಿಕ ಆಡಳಿತದ ಅರಾಜಕತೆಗೆ ಅಂತಿಮ ಗೆರೆ ಎಳೆಯುವಂತೆ ಜೋ ಬೈಡನ್ ಮನವಿ ಮಾಡಿದರು. ಕೊರೊನಾ ವೈರಸ್ ಪಿಡುಗನ್ನು ನಿಭಾಯಿಸುವಲ್ಲಿ ಟ್ರಂಪ್ ವೈಫಲ್ಯವನ್ನು ಅವರು ಎತ್ತಿಹಿಡಿದರು. ಮತದಾನ ಪೂರ್ವ ಸಮೀಕ್ಷೆಗಳು ಜೋ ಬೈಡನ್ ಅವರು ಅಲ್ಪ ಆದರೆ, ಸ್ಥಿರ ಮುನ್ನಡೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿವೆ. ಅತಿ ಸಮೀಪದ ಹಣಾಹಣಿ ಇರುವ ಪ್ರದೇಶಗಳಲ್ಲಿ ಡೆಮಾಕ್ರಟಿಕ್‌ಗೆ ಮುನ್ನಡೆ ಸಿಗಲಿದ್ದರೆ, ರಿಪಬ್ಲಿಕನ್‌ನ ಪ್ರಬಲ ನೆಲೆಗಳಾದ ಜಾರ್ಜಿಯಾ, ಟೆಕ್ಸಾಸ್‌ನಂತಹ ರಾಜ್ಯಗಳಲ್ಲಿಯೂ ಡೆಮಾಕ್ರಟಿಕ್ ತೀವ್ರ ಸಮರ ನಡೆಸಲಿದೆ ಎಂದು ಹೇಳಲಾಗಿದೆ.

'ಇದು ಡೊನಾಲ್ಡ್ ಟ್ರಂಪ್ ಅವರು ತಮ್ಮ ಚೀಲಗಳನ್ನು ತುಂಬಿಸಿಕೊಂಡು ಮನೆಗೆ ಮರಳುವ ಹೊತ್ತು' ಎಂದು ಓಹಿಯೊದಲ್ಲಿ ಪ್ರಚಾರ ನಡೆಸಿದ ಬೈಡನ್ ಹೇಳಿದರು. 'ನಮಗೆ ಈ ಅರಾಜಕತೆ ಸಾಕಾಗಿದೆ. ಅವರ ಟ್ವೀಟ್‌ಗಳು, ಕೋಪ, ದ್ವೇಷ, ವೈಫಲ್ಯ ಮತ್ತು ಬೇಜವಾಬ್ದಾರಿತನ ಇವುಗಳಿಂದ ನಾವು ಹೈರಾಣಾಗಿದ್ದೇವೆ' ಎಂದು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+