ಅಮೆರಿಕ ಚುನಾವಣೆಯ ಮೊಟ್ಟ ಮೊದಲ ಫಲಿತಾಂಶ ಪ್ರಕಟ

ಯುಎಸ್ -ಕೆನಡಾ ಗಡಿ ಭಾಗದ ನ್ಯೂ ಹ್ಯಾಂಪ್ ಶೈರ್ ಪ್ರಾಂತ್ಯಕ್ಕೆ ಸೇರಿದ ಪುಟ್ಟ ಊರು ಡಿಕ್ಸ್ ವಿಲ್ಲೆ ನಾಚ್ ಎಂಬಲ್ಲಿ ಚಲಾವಣೆಗೊಂಡ ಎಲ್ಲಾ 5 ಮತಗಳನ್ನು ಡೆಮೊಕ್ರಾಟಿಕ್ ಅಭ್ಯರ್ಥಿ ಜೊ ಬೈಡನ್ ಗಳಿಸಿದ್ದು, ಅಮೆರಿಕದಲ್ಲಿ ಮೊಟ್ಟ ಮೊದಲ ಫಲಿತಾಂಶ ನೀಡಿದ ಮತಗಟ್ಟೆ ಎನಿಸಿಕೊಂಡಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಮೊದಲಿಗೆ ಇದೇ ಊರಿನ ಮತಗಟ್ಟೆಯಲ್ಲಿ ಆರಂಭವಾಯಿತು. ಡಿಕ್ಸ್ ವಿಲ್ಲೆ ನಾಚ್ ಊರಿನ ಬಾಲ್ಸ್ಯಾಮ್ಸ್ ರೆಸಾರ್ಟ್ ಮತಗಟ್ಟೆಯಲ್ಲಿ ಎಲ್ಲಾ ಅರ್ಹ ಮತದಾರರು ಗೌಪ್ಯ ಮತದಾನವನ್ನು ಮಧ್ಯರಾತ್ರಿ ನಂತರ(ನ.3) ಮಾಡಿದ್ದಾರೆ. ಎಲ್ಲಾ ಮತಗಳ ಚಲಾವಣೆಯಾದ ಬಳಿಕ ಪ್ರಕ್ರಿಯೆ ಅವಧಿ ಮುಗಿದ ಬಳಿಕ ಮತ ಎಣಿಕೆ ನಡೆಸಿ ಮೊದಲ ಫಲಿತಾಂಶವನ್ನು ನೀಡಲಾಗಿದೆ.

2016ರಲ್ಲೂ ಡಿಕ್ಸ್ ವಿಲ್ಲೆ ನಾಚ್ ಮತದಾರರು ಡೆಮೊಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗೆ ಮತ ಹಾಕಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಹೀಗಾಗಿ, ಡಿಕ್ಸ್ ವಿಲ್ಲೆ ಫಲಿತಾಂಶವು ಅಧ್ಯಕ್ಷ ಸ್ಥಾನಕ್ಕೆ ದಿಕ್ಸೂಚಿ ಎಂದು ಹೇಳಲು ಬರುವುದಿಲ್ಲ ಎಂಬ ಮಾತಿದೆ.

US Elections: Dixville Notch First to announce results

ಸಮೀಪದ ಮಿಲ್ಸ್ ಫೀಲ್ಡ್ ಕೂಡಾ ಮಧ್ಯರಾತ್ರಿ ವೇಳೆಗೆ ಮತಗಟ್ಟೆ ತೆರೆದಿತ್ತು. ಆದರೆ, ಈ ಮತಗಟ್ಟೆಯಲ್ಲಿ ಬೈಡನ್ ಪರ 5 ,ಟ್ರಂಪ್ ಪರ 16 ಮತಗಳು ಬಂದಿವೆ. 2010ರ ಜನ ಗಣತಿಯಂತೆ 12 ನಿವಾಸಿಗಳನ್ನು ಮಾತ್ರ ಹೊಂದಿರುವ ಡಿಕ್ಸ್ ವಿಲ್ಲೆಯಲ್ಲಿ 1960ರಿಂದ ಈ ರೀತಿ ಮಧ್ಯರಾತ್ರಿ ಮತದಾನ ಪ್ರಕ್ರಿಯೆ ರೂಢಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+